IPL 2025: ಬದಲಿ ಆಟಗಾರನಾಗಿ ಗುಜರಾತ್ ತಂಡ ಸೇರಿದ ದಾಸುನ್ ಶನಕ
Dasun Shanaka: ಶ್ರೀಲಂಕಾ ಪರ 102 ಟಿ20 ಆಡಿರುವ ಶನಕ, 2023ರಲ್ಲಿ ಗುಜರಾತ್ ತಂಡದ ಭಾಗವಾಗಿದ್ದರು. ಇದೀಗ ಮತ್ತೆ ಒಂದು ವರ್ಷದ ಬಳಿಕ ಫ್ರಾಂಚೈಸಿಗೆ ಮರಳಿದ್ದಾರೆ. 2023ರ ಋತುವಿನಲ್ಲಿ ಶನಕ ಗುಜರಾತ್ ಪರ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಆಡಿದ್ದರು. ಶಕನ 75 ಲಕ್ಷ ರೂ. ಮೂಲ ಬೆಲೆಗೆ ಟೈಟಾನ್ಸ್ ತಂಡವನ್ನು ಸೇರಿದ್ದಾರೆ.


ಅಹಮದಾಬಾದ್: ಗುಜರಾತ್ ಟೈಟಾನ್ಸ್(Gujarat Titans) ತಂಡವು ಶ್ರೀಲಂಕಾದ ದಾಸುನ್ ಶನಕ(Dasun Shanaka) ಅವರನ್ನು ಐಪಿಎಲ್ 2025(IPL 2025) ರ ಉಳಿದ ಪಂದ್ಯಗಳಿಗೆ ಬದಲಿ ಆಟಗಾರನಾಗಿ ಆಯ್ಕೆ ಮಾಡಿದೆ. ತೊಡೆಸಂದು ಗಾಯದಿಂದಾಗಿ ಹೊರಬಿದ್ದ ಗ್ಲೆನ್ ಫಿಲಿಪ್ಸ್(Glenn Phillips) ಬದಲಿಗೆ ಶನಕ ಅವರನ್ನು ಆಯ್ಕೆ ಮಾಡಲಾಗಿದೆ. ಗುಜರಾತ್ ಟೈಟಾನ್ಸ್ ಪರ ಫಿಲಿಪ್ಸ್ 2 ಕೋಟಿ ಮೂಲ ಬೆಲೆಗೆ ಆಯ್ಕೆಯಾಗಿದ್ದರು, ಆದರೆ ಋತುವಿನ ಅಂತ್ಯದ ಗಾಯದಿಂದ ಬಳಲುವ ಮೊದಲು ಒಂದೇ ಒಂದು ಪಂದ್ಯದಲ್ಲಿ ಆಡಿರಲಿಲ್ಲ.
ಶ್ರೀಲಂಕಾ ಪರ 102 ಟಿ20 ಆಡಿರುವ ಶನಕ, 2023ರಲ್ಲಿ ಗುಜರಾತ್ ತಂಡದ ಭಾಗವಾಗಿದ್ದರು. ಇದೀಗ ಮತ್ತೆ ಒಂದು ವರ್ಷದ ಬಳಿಕ ಫ್ರಾಂಚೈಸಿಗೆ ಮರಳಿದ್ದಾರೆ. 2023ರ ಋತುವಿನಲ್ಲಿ ಶನಕ ಗುಜರಾತ್ ಪರ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಆಡಿದ್ದರು. ಶಕನ 75 ಲಕ್ಷ ರೂ. ಮೂಲ ಬೆಲೆಗೆ ಟೈಟಾನ್ಸ್ ತಂಡವನ್ನು ಸೇರಿದ್ದಾರೆ.
🚨 DASUN SHANAKA HAS REPLACED GLENN PHILLIPS IN GUJARAT TITANS FOR IPL 2025. 🚨 pic.twitter.com/xgc8lKxdXf
— Mufaddal Vohra (@mufaddal_vohra) April 17, 2025
ಸದ್ಯ ಗುಜರಾತ್ ತಂಡ ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇನ್ನುಳಿದ 8 ಪಂದ್ಯಗಳ ಪೈಕಿ 4 ಪಂದ್ಯ ಗೆದ್ದರೆ ಬಹುತೇಕ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಗುಜರಾರ್ ತನ್ನ ಮುಂದಿನ ಪಂದ್ಯವನ್ನು ಶನಿವಾರ(ಎ.19) ರಂದು ಅಗ್ರಸ್ಥಾನಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಫಿಟ್ ಆದ ವೇಗಿ ಮಾಯಾಂಕ್
ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮಾಯಾಂಕ್ ಯಾದವ್ ಸಂಪೂರ್ಣವಾಗಿ ಚೇತರಿಸಿಕೊಂಡು ಐಪಿಎಲ್ ಆಡಲು ಸಜ್ಜಾಗಿದ್ದಾರೆ. ಕಾಲಿನ ಬೆರಳಿನ ಗಾಯಕ್ಕೀಡಾಗಿದ್ದ ಅವರು ಇದೀಗ ಚೇತರಿಸಿಕೊಂಡು ಈಗಾಗಲೇ ಜೈಪುರದಲ್ಲಿ ತಂಡದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಶನಿವಾರ ನಡೆಯುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ.
ಇದನ್ನೂ ಓದಿ IPL 2025 Points Table: ಮೂರನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಮುಂಬೈ
22 ವರ್ಷದ ಮಾಯಾಂಕ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಗಂಟೆಗೆ 150 ಕೀ.ಮೀ. ವೇಗದಲ್ಲಿ ಎಸೆತವನ್ನಿಕ್ಕುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಅವರ ಆಗಮನದಿಂದ ತಂಡ ಇನ್ನಷ್ಟು ಬಲಿಷ್ಠಗೊಳ್ಳಲಿದೆ. ಮಯಾಂಕ್ ತಂಡಕ್ಕೆ ಮರಳಿದ ವಿಚಾರವನ್ನು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
ಸದ್ಯ ಲಕ್ನೋ ತಂಡ ಆಡಿದ 7 ಪಂದ್ಯಗಳಲ್ಲಿ ನಾಲ್ಕು ಗೆಲುವು, ಮೂರು ಸೋಲಿನಿಂದೊಂದಿಗೆ 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಂಡದ ಆಟಗಾರ ನಿಕೋಲಸ್ ಪೂರನ್ 357 ರನ್ ಬಾರಿಸಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನಿಯಾಗಿದ್ದಾರೆ.