ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagyalakshmi Serial: ಅಡೆ-ತಡೆಗಳ ನಡುವೆ ಭಾಗ್ಯಳ ಆಸೆಯಂತೆ ತಂಗಿಯ ಮದುವೆ ನಡೆಯುತ್ತಾ? ಮಹಾಸಂಚಿಕೆಯಲ್ಲಿ ಮಹಾತಿರುವು

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಭಾಗ್ಯಲಕ್ಷ್ಮೀʼ ಧಾರವಾಹಿ ದಿನ ಕಳೆದಂತೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಧಾರಾವಾಹಿಯ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. ಈ ವಾರ ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮತ್ತೊಮ್ಮೆ ಪ್ರೇಕ್ಷಕರನ್ನು ಮನ ರಂಜಿಸಲು ಮುಂದಾಗಿದೆ. ಮೇ 21ರಂದು ರಾತ್ರಿ 7ರಿಂದ 8 ಗಂಟೆಯವರೆಗೆ ಪ್ರಸಾರವಾಗುವ ಮಹಾ ಸಂಚಿಕೆಯಲ್ಲಿ ಹೊಸ ತಿರುವು ಸಿಗಲಿದೆ.

ಭಾಗ್ಯಳ ಆಸೆಯಂತೆ ತಂಗಿಯ ಮದುವೆ ನಡೆಯುತ್ತ?

bhagyalakshmi serial

Profile Pushpa Kumari May 21, 2025 6:37 PM

ಬೆಂಗಳೂರು: ಕಲರ್ಸ್ ಕನ್ನಡದ ಜನಪ್ರಿಯ 'ಭಾಗ್ಯಲಕ್ಷ್ಮೀʼ ಧಾರವಾಹಿ (Bhagyalakshmi Serial) ಪ್ರೇಕ್ಷಕರಿಗೆ ಆರಂಭದಿಂದಲೇ ರಸದೌತಣ ನೀಡುತ್ತಲೇ ಬಂದಿದೆ. ಈ ಧಾರಾವಾಹಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಭಾಗ್ಯ ಪಾತ್ರದ ಮೂಲಕ ಸುಷ್ಮಾ ರಾವ್‌ ಮತ್ತೊಮ್ಮೆ ಜನ ಮನ ಗೆದ್ದಿದ್ದಾರೆ. ಬಹಳ ನೈಜವಾಗಿ ಒಂದು ಸಂಸಾರದ ಕಥೆಯನ್ನು ತೋರ್ಪಡಿಸುವ ಈ ಸೀರಿಯಲ್‌ನಲ್ಲಿ ಹೆಣ್ಣು ಅಬಲೆ ಅಲ್ಲ ಸಬಲೆ ಎನ್ನುವುದನ್ನು ಬಹಳ ಅರ್ಥ ಪೂರ್ಣವಾಗಿ ಸಾರಲಾಗುತ್ತಿದೆ.

ಅಕ್ಕ-ತಂಗಿಯ ಬಾಂಧವ್ಯದ ಕಥೆ ಹೊಂದಿರುವ ಈ ಧಾರಾವಾಹಿಯಲ್ಲಿ ನಿರೂಪಕಿ ಸುಷ್ಮಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಪದ್ಮಜಾ ರಾವ್, ಕಾವ್ಯಾ ಗೌಡ, ಸುದರ್ಶನ್‌ ರಂಗನಾಥ್‌ ಮತ್ತಿತರರು ತಾರಾಬಳಗದಲ್ಲಿದ್ದಾರೆ. ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿರುವ ಜೈ ಮಾತಾ ಕಂಬೈನ್ಸ್ 'ಭಾಗ್ಯಲಕ್ಷ್ಮೀ' ಧಾರಾವಾಹಿ ನಿರ್ಮಾಣ ಮಾಡುತ್ತಿದೆ. ಇದೀಗ ಈ ವಾರದ ಕಥೆಯಲ್ಲಿ ಹೊಸ ಟ್ವಿಸ್ಟ್ ಇದ್ದು, ಮತ್ತೊಮ್ಮೆ ಪ್ರೇಕ್ಷಕರನ್ನು ಮನ ರಂಜಿಸಲು ಮುಂದಾಗಿದೆ. ಮೇ 21ರಂದು ರಾತ್ರಿ 7ರಿಂದ 8 ಗಂಟೆಯವರೆಗೆ ಪ್ರಸಾರವಾಗುವ ಮಹಾ ಸಂಚಿಕೆಯಲ್ಲಿ ಹೊಸ ತಿರುವು ಸಿಗಲಿದೆ.

ಕಿಶನ್ ಕನ್ನಿಕಾಳ ಅಣ್ಣ ಅನ್ನೋದು ತಾಂಡವ್‌ಗೆ ಗೊತ್ತಾಗಿ ಶಾಕ್‌ಗೆ ಒಳಗಾಗಿದ್ದಾನೆ. ಕಿಶನ್ ಭಾಗ್ಯಾಳಿಗೆ ಕೇಟರಿಂಗ್‌ ಆರ್ಡರ್ ಕೊಡಿಸಿದ್ದಾನೆ. ಅವಳಿಗೆ ಅದು ಕನ್ನಿಕಾ ಮನೆಯವರ ಆರ್ಡರ್ ಎಂದು ತಿಳಿದಿರೋಲ್ಲ. ತನ್ನ ತಂಗಿಗೆ ಎಲ್ಲದೂ ಒಳ್ಳೆಯದಾಗುತ್ತೆ ಅಂದುಕೊಂಡಿರೋ ಭಾಗ್ಯಾಗೆ ಕನ್ನಿಕಾ ಎಂಬ ಸವಾಲು ಮತ್ತೆ ಎದುರಾಗ್ತಾಳೆ. ಕನ್ನಿಕಾ ಮತ್ತು ಭಾಗ್ಯಾಗೆ ಮೊದಲಿನಿಂದಲೂ ಆಗಿ ಬರುವುದಿಲ್ಲ. ತಂಗಿ ಜೀವನ ಕಟ್ಕೊಳ್ಳೋಕೆ ಭಾಗ್ಯ ಹೋಗ್ತಿದ್ರೆ, ಕನ್ನಿಕಾ ಅನ್ನೋ ಬಾಂಬ್ ಕಣ್ಣ ಮುಂದೆ ಬಂದಿದೆ. ಈ ನಡುವೆ ಕಿಶನ್ ಕನ್ನಿಕಾಳ ಅಣ್ಣ ಅನ್ನೋ ಸತ್ಯ ತಾಂಡವ್‌ಗೆ ಗೊತ್ತಾಗುತ್ತದೆ. ಈ ವಿಚಾರ ತಿಳಿದು ತಾಂಡವ್‌ ಕೂಡ ಶಾಕ್‌ಗೆ ಒಳಗಾಗಿದ್ದಾನೆ.

ಇದನ್ನು ಓದಿ: Seetha Rama Serial: ಹೌದು ನಾನು ಸಿಹಿ ಅಲ್ಲ: ಸೀತಮ್ಮನ ಮುಂದೆ ಸತ್ಯ ಒಪ್ಪಿಕೊಂಡ ಸುಬ್ಬಿ

ತನ್ನ ತಂಗಿಯ ಮದುವೆ ಸುಗಮವಾಗಿ ನಡೆಯಲು ಸಾಧ್ಯವಾಗುತ್ತ? ಎಂಬುದೇ ಈಗ ಸೀರಿಯಲ್‌ನ ಪ್ರಮುಖ ಕುತೂಹಲ. ಕಿಶನ್–ಪೂಜಾ ಮದುವೆ ಅಂದುಕೊಂಡಂತೆಯೇ ನೇರವೇರುತ್ತಾ? ಕನ್ನಿಕಾ ಯುದ್ಧ ಗೆಲ್ಲುತ್ತಾ? ಭಾಗ್ಯ ಗೆಲ್ಲುತ್ತಾಳ?  ಎನ್ನುವ ಪ್ರಶ್ನೆ ಮೂಡಿದೆ.