ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sharbat jihad: ಭಾರೀ ಸದ್ದು ಮಾಡ್ತಿದೆ ಶರಬತ್ ಜಿಹಾದ್ ವಿವಾದ- ಬಾಬಾ ರಾಮ್‌ದೇವ್‌ ಹೇಳಿದ್ದೇನು?

Sharbat jihad: ಪತಂಜಲಿ ಸಂಸ್ಥೆಯೂ ಅನೇಕ ಉತ್ಪನ್ನಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ. ಪತಂಜಲಿ ಸಂಸ್ಥೆಯ ಉತ್ಪನ್ನ ಗಳಿಗೆ ಹೆಚ್ಚು ಪ್ರಚಾರ ನೀಡಲಾಗುತ್ತಿದ್ದು ಇಂದು ದೇಶಿಯ ಉತ್ಪನ್ನಗಳಲ್ಲಿ ಬಹಳಷ್ಟು ಹೆಸರು ಮಾಡುತ್ತಿದೆ. ಅದೇ ರೀತಿ ಹೊಸ ಪತಂಜಲಿ ಉತ್ಪನ್ನವಾದ ರೋಸ್ ಶರಬತ್ತನ್ನು ಪ್ರಚಾರ ಮಾಡಲು ಹೋಗಿ ಬಾಬಾ ರಾಮ್ ದೇವ್ ವಿವಾದದಲ್ಲಿ‌ ಸಿಲುಕಿದ್ದಾರೆ. ಅದೇನು ವಿವಾದ? ಇಲ್ಲಿದೆ ಡಿಟೇಲ್ಸ್‌

ಶರಬತ್ ಜಿಹಾದ್ ಹೇಳಿಕೆ- ವಿವಾದದ ಸುಳಿಯಲ್ಲಿ ಸಿಕ್ಕ ಬಾಬಾ ರಾಮ್ ದೇವ್

Profile Pushpa Kumari Apr 10, 2025 7:59 PM

ನವದೆಹಲಿ: ಬೇಸಿಗೆ ಕಾಲಕ್ಕೆ ತಂಪು ಪಾನೀಯಗಳ ಬೇಡಿಕೆ ಹೆಚ್ಚಿದೆ. ಹೀಗಾಗಿ ಮಾರುಕಟ್ಟೆಯಲ್ಲಿಯು ವಿವಿಧ ಕಂಪನಿಗಳ ತಂಪು ಪಾನೀಯಗಳು ಹೇರಳವಾಗಿ ಸಿಗುತ್ತಿವೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಸಾಫ್ಟ್ ಡ್ರಿಂಕ್ಸ್‌ ಟಾಯ್ಲೆಟ್ ಕ್ಲೀನರ್ ಬಳಸಿ ತಯಾರಿಸಲಾಗುತ್ತದೆ ಎಂದು ಪತಂಜಲಿ ಉತ್ಪನ್ನದ ಸಂಸ್ಥಾಪಕ ಬಾಬಾ ರಾಮ್ ದೇವ್ (Baba Ramdev) ಆರೋಪಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಹೊಸ ಪತಂಜಲಿ ಉತ್ಪನ್ನವಾದ ರೋಸ್ ಶರಬತ್ತನ್ನು ಪ್ರಚಾರ ಮಾಡಲು ಹೋಗಿ ಈ ಎಡವಟ್ಟು ಮಾಡಿಕೊಂಡಿದ್ದು ಈ ಮೂಲಕ ಬಾಬಾ ರಾಮ್ ದೇವ್ ಅವರು ವಿವಾದದ(Sharbat jihad) ಸುಳಿಯಲ್ಲಿ ಸಿಲುಕಿದ್ದಾರೆ.

ಪತಂಜಲಿ ಸಂಸ್ಥೆಯೂ ಅನೇಕ ಉತ್ಪನ್ನಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ. ಪತಂಜಲಿ ಸಂಸ್ಥೆಯ ಉತ್ಪನ್ನ ಗಳಿಗೆ ಹೆಚ್ಚು ಪ್ರಚಾರ ನೀಡಲಾಗುತ್ತಿದ್ದು ಇಂದು ದೇಶಿಯ ಉತ್ಪನ್ನಗಳಲ್ಲಿ ಬಹಳಷ್ಟು ಹೆಸರು ಮಾಡುತ್ತಿದೆ. ಅದೇ ರೀತಿ ಹೊಸ ಪತಂಜಲಿ ಉತ್ಪನ್ನವಾದ ರೋಸ್ ಶರಬತ್ತನ್ನು ಪ್ರಚಾರ ಮಾಡಲು ಹೋಗಿ ಬಾಬಾ ರಾಮ್ ದೇವ್ ವಿವಾದದಲ್ಲಿ‌ ಸಿಲುಕಿದ್ದಾರೆ. ಸಾಫ್ಟ್ ಡ್ರಿಂಕ್ಸ್ ತಂಪು ಪಾನೀಯವನ್ನು ಮುಂದಿಟ್ಟು ʼಈ ತಂಪು ಪಾನೀಯ ಮಾರಾಟದಿಂದ ಬಂದ ಲಾಭದ ಹಣದಿಂದ ಮಸೀದಿ ನಿರ್ಮಿಸಲಾಗುತ್ತದೆ ಎಂದು ಪತಂಜಲಿ ಉತ್ಪನ್ನದ ಸಂಸ್ಥಾಪಕ ಯೋಗಗುರು ಬಾಬಾರಾಮ್ ದೇವ್ ಆರೋಪಿಸಿದ್ದಾರೆ.

ಸಾಫ್ಟ್ ಡ್ರಿಂಕ್ ಹೆಸರಿನಲ್ಲಿ ಮಾರಾಟ ಮಾಡುವ ತಂಪು ಪಾನೀಯಗಳಿಗೆ ಟಾಯ್ಲೆಟ್ ಕ್ಲೀನರ್ ಬಳಸುತ್ತಾರೆ. ಇಂತಹ ತಂಪು ಪಾನೀಯಗಳನ್ನು ಮಾರಾಟ ಮಾಡಿ ಸಂಗ್ರಹಿಸಿದ ಹಣವನ್ನು ಮಸೀದಿ, ಮದ್ರಾಸಗಳ ನಿರ್ಮಾಣ ಮಾಡಲು  ಬಳಸ ಲಾಗುತ್ತದೆ. ಇದೊಂದು ರೀತಿಯಲ್ಲಿ ಶರಬತ್ ಜಿಹಾದ್ ಎಂದು ಬಾಬಾ ರಾಮ್ ದೇವ್ ವಿಡಿಯೊದಲ್ಲಿ ತಿಳಿಸಿದ್ದು ರೋಸ್ ಶರಬತ್ತಿನ ಪ್ರಚಾರದ ವಿಡಿಯೊವನ್ನು ಸಾಕಷ್ಟು ಜನರು ಟೀಕಿಸಿದ್ದಾರೆ.



ಈ ವಿಡಿಯೊವನ್ನು ಪತಂಜಲಿ ಪ್ರಾಡೆಕ್ಟ್ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದ್ದು ಯೋಗ ಗುರು ರಾಮ್‌ದೇವ್‌ ಇತರ ತಂಪು ಪಾನೀಯ ಕಂಪನಿಯನ್ನು ಟೀಕಿಸಿದ್ದಾರೆ. 'ಶರಬತ್ ಜಿಹಾದ್' ಹೆಸರಿನಲ್ಲಿ ಮಾರಾಟವಾಗುವ ಟಾಯ್ಲೆಟ್ ಕ್ಲೀನರ್‌ಗಳ ವಿಷದಿಂದ ನಿಮ್ಮ ಕುಟುಂಬವನ್ನು ರಕ್ಷಿಸಿ. ಪತಂಜಲಿ ಶರಬತ್ ಮತ್ತು ಜ್ಯೂಸ್‌ಗಳನ್ನು ಮಾತ್ರ ಮನೆಗೆ ತನ್ನಿ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಪತಂಜಲಿ ಶರಬತ್ತು ಆಯ್ಕೆ ಮಾಡುವುದರಿಂದ ಗುರುಕುಲಗಳು, ಆಚಾರ್ಯಕುಲಂ, ಪತಂಜಲಿ ವಿಶ್ವವಿದ್ಯಾಲಯ ಮತ್ತು ಭಾರತೀಯ ಶಿಕ್ಷಾ ಮಂಡಳಿಯನ್ನು ಬೆಂಬಲಿಸಲಾಗುತ್ತದೆ ಸಾಫ್ಟ್ ಡ್ರಿಂಕ್ಸ್ ನಿಂದ ಗಳಿಸಿದ ಹಣವನ್ನು  ಮಸೀದಿ ಹಾಗೂ ಮದರಸಾಗಳ ನಿರ್ಮಾಣಕ್ಕೆ  ಬಳಸುತ್ತಿದೆ. ಪರವಾಗಿಲ್ಲ, ಅದು ಅವರ ಧರ್ಮ ಎಂದು ರಾಮದೇವ್ ವೀಡಿಯೊದಲ್ಲಿ ಹೇಳಿದ್ದಾರೆ.

ಇದನ್ನು ಓದಿ: Viral News: 3 ವರ್ಷಕ್ಕೂ ಅಧಿಕ ಕಾಲ ಮಹಿಳೆಗೆ ಋತುಚಕ್ರ; ವಿಚಿತ್ರ ಸ್ಥಿತಿ ಕಂಡು ವೈದ್ಯರು ದಿಗ್ಭ್ರಮೆ!

ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೊ 37 ಮಿಲಿಯನ್‌ಗಿಂತಲೂ ಹೆಚ್ಚು ವೀವ್ಸ್ ಪಡೆದುಕೊಂಡಿದ್ದು ರಾಮ್ ದೇವ್ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಪತಂಜಲಿ ಉತ್ಪನ್ನ ಮಾರಾಟ ಆಗುತ್ತಿಲ್ಲ ಇರಬೇಕು ಹಾಗಾಗಿ ಇಂತಹ ಗಿಮಿಕ್ ಮಾಡುತ್ತಿದ್ದಾರೆ ಎಂದು ಕಮೆಂಟ್ ಹಾಕಿದ್ದಾರೆ.ನಿಮ್ಮ ಉತ್ಪನ್ನವನ್ನು ಧರ್ಮದ ಆಧಾರದ ಮೇಲೆ ಅಲ್ಲ, ಉತ್ತಮ ಗುಣಮಟ್ಟದ ಮೇಲೆ ಮಾರಾಟ ಮಾಡಿ ಎಂದು ಮತ್ತೋರ್ವ ಬಳಕೆದಾರರು ಟ್ವೀಟ್ ಮಾಡಿದ್ದಾರೆ.