X accounts: ಭಾರತದಲ್ಲಿ 8,000ಕ್ಕೂ ಹೆಚ್ಚು ಎಕ್ಸ್ ಖಾತೆಗಳು ಬ್ಲಾಕ್
X accounts Blocked: ದೇಶದಲ್ಲಿ 8,000 ಕ್ಕೂ ಹೆಚ್ಚು ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಆದೇಶ ಹೊರಡಿಸಿದೆ. ಈ ನಿಯಮ ಉಲ್ಲಂಘಿಸಿದಲ್ಲಿ ದೊಡ್ಡ ಮೊತ್ತದ ದಂಡ ಮತ್ತು ಕಂಪನಿಯ ಸ್ಥಳೀಯ ಉದ್ಯೋಗಿಗಳ ಜೈಲು ಶಿಕ್ಷೆ ಸೇರಿದಂತೆ ಅನೇಕ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಇನ್ನು ಯಾವ ಖಾತೆಯಿಂದ ಯಾವ ರೀತಿಯಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಭಾರತ ಸ್ಪಷ್ಟಪಡಿಸಿಲ್ಲ.


ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ(Pahalgam Terror Attack) ನಂತರ ಮತತಷ್ಟು ಉಲ್ಬಣಿಸಿರುವ ಭಾರತ-ಪಾಕಿಸ್ತಾನ ಸಂಘರ್ಷದ ಬೆನ್ನಲ್ಲೇ ಎಲಾನ್ ಮಸ್ಕ್ ಒಡೆತನದ ಎಕ್ಸ್, ಬರೋಬ್ಬರಿ 8000ಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್(X accounts Blocked) ಮಾಡಿದೆ. ಪ್ರಚೋದನಕಾರಿ ಸುದ್ದಿಗಳನ್ನು ಪ್ರಕಟಿಸುವ ಪ್ರಮುಖ ಮುಸ್ಲಿಂ ನ್ಯೂಸ್ ಪೇಜ್‌ಗಳನ್ನುಇನ್‌ಸ್ಟಾಗ್ರಾಂನಿಂದ ತೆಗೆದು ಹಾಕುವ ಮೂಲದ ಭಾರತದ ಮನವಿಗೆ ಮೆಟಾ ಸ್ಪಂದಿಸಿತ್ತು. ಇದರ ಬೆನ್ನಲ್ಲೇ ಭಾರತದ ಆದೇಶದ ಅನ್ವಯ ಎಕ್ಸ್ ಕೂಡ 8000ಖಾತೆಗಳನ್ನು ಬ್ಲಾಕ್ ಮಾಡಿದೆ.
ದೇಶದಲ್ಲಿ 8,000 ಕ್ಕೂ ಹೆಚ್ಚು ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಆದೇಶ ಹೊರಡಿಸಿದೆ. ಈ ನಿಯಮ ಉಲ್ಲಂಘಿಸಿದಲ್ಲಿ ದೊಡ್ಡ ಮೊತ್ತದ ದಂಡ ಮತ್ತು ಕಂಪನಿಯ ಸ್ಥಳೀಯ ಉದ್ಯೋಗಿಗಳ ಜೈಲು ಶಿಕ್ಷೆ ಸೇರಿದಂತೆ ಅನೇಕ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಇನ್ನು ಯಾವ ಖಾತೆಯಿಂದ ಯಾವ ರೀತಿಯಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಭಾರತ ಸ್ಪಷ್ಟಪಡಿಸಿಲ್ಲ. ಭಾರತ ಬೇಡಿಕೆಗೆ ಎಕ್ಸ್‌ನಿಂದ ಪೂರ್ಣ ಸಮ್ಮತ ಇರಲಿದ್ದರೂ ಆದೇಶ ಪಾಲಿಸಲೇಬೇಕಾಗಿದೆ. ಎಕ್ಸ್ ಖಾತೆಗಳನ್ನು ನಿರ್ಬಂದಿಸುವುದು ಜನರ ವಾಕ್ ಸ್ವಾತಂತ್ರ್ಯ ಕಸಿದು ಕೊಂಡಂತೆ. ಇದು ಸುಲಭದ ಮಾತಲ್ಲ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಭಾರತ-ಪಾಕ್ ನಡುವಿನ ಪ್ರಕ್ಷುಬ್ದ ವಾತಾವರಣದಂತಹ ಸೂಕ್ಷ್ಮ ಸಂಗತಿಗಳ ಬಗ್ಗೆ ತಪ್ಪು ಮಾಹಿತಿ ಹರಡುವ ಹಾಗೂ ಕೆಲವೊಂದು ಅನುಮಾನಾಸ್ಪದ ಖಾತೆಗಳನ್ನು ಪಟ್ಟಿ ಮಾಡಿ ಅದನ್ನು ಬ್ಲಾಕ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಈ ಸುದ್ದಿಯನ್ನೂ ಓದಿ: Operation Sindoor: ಭಾರತದ ದಾಳಿಗೆ ಬೆಚ್ಚಿಬಿದ್ದ ಪಾಕ್; ಪ್ರಧಾನಿ ಶೆಹಬಾಜ್ ಷರೀಫ್ ಅಡಗುತಾಣಕ್ಕೆ ಶಿಫ್ಟ್
ಭಾರತ-ಪಾಕ್ ನಡುವಿನ ಘರ್ಷಣೆ ಬಗ್ಗೆ ಪಾಕಿಸ್ತಾನಿ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಮಾಧ್ಯಮ ಸಂಸ್ಥೆಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗುರಿಯಾಗಿಸಿಕೊಂಡು ಭಾರತವು ನಡೆಸುತ್ತಿರುವ ವ್ಯಾಪಕ ಕ್ರಮದ ಭಾಗವಾಗಿ ಈ ಕ್ರಮವು ಕಂಡುಬರುತ್ತಿದೆ.