IAS officer: ಸಿಪಿಎಂ ನಾಯಕನನ್ನು ಹಾಡಿ ಹೊಗಳಿ ವಿವಾದಕ್ಕೆ ಗುರಿಯಾದ ಐಎಎಸ್ ಅಧಿಕಾರಿ!
ಐಎಎಸ್ ಅಧಿಕಾರಿ ದಿವ್ಯಾ ಎಸ್. ಅಯ್ಯರ್ ಅವರು ಸಿಪಿಎಂ ನಾಯಕ ಅಂದರೆ ಹೊಸದಾಗಿ ನೇಮಕಗೊಂಡ ಕಣ್ಣೂರು ಜಿಲ್ಲಾ ಕಾರ್ಯದರ್ಶಿಯನ್ನು ಹೊಗಳಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಟೀಕೆಗೆ ಕಾರಣವಾಗಿದೆ. ಇದರಿಂದ ದಿವ್ಯಾ ಅಯ್ಯರ್ ಪರ ವಹಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸ್ಪಷ್ಟನೆ ನೀಡಿದ್ದರೂ ಟೀಕೆಗಳು ಮುಂದುವರಿದಿವೆ.


ಕೇರಳ:ನನ್ನು (CPIM leader) ಹೊಗಳಿರುವ ಕೇರಳದ ಐಎಎಸ್ ಅಧಿಕಾರಿ (Kerala IAS officer) ದಿವ್ಯಾ ಅಯ್ಯರ್ (Divya Iyer) ಅವರು ಈಗ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಕೇರಳ ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿಯನ್ನು ಆಡಳಿತಾರೂಢ ಸಿಪಿಐ(ಎಂ)ನ ಕಣ್ಣೂರು ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಐಎಎಸ್ ಅಧಿಕಾರಿ ದಿವ್ಯಾ ಎಸ್. ಅಯ್ಯರ್ ಅವರು ಸಿಪಿಎಂ ನಾಯಕ ಅಂದರೆ ಹೊಸದಾಗಿ ನೇಮಕಗೊಂಡ ಕಣ್ಣೂರು (Kannur) ಜಿಲ್ಲಾ ಕಾರ್ಯದರ್ಶಿಯನ್ನು ಹೊಗಳಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಟೀಕೆಗೆ ಕಾರಣವಾಗಿದೆ. ಇದರಿಂದ ದಿವ್ಯಾ ಅಯ್ಯರ್ ಪರ ವಹಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (CM Pinarayi Vijaya) ಅವರು ಸ್ಪಷ್ಟನೆ ನೀಡಿದ್ದರೂ ಟೀಕೆಗಳು ಮುಂದುವರಿದಿವೆ.
2014ರ ಬ್ಯಾಚ್ ನ ಕೇರಳ ಕೇಡರ್ ಅಧಿಕಾರಿಯಾದ ದಿವ್ಯಾ ಅಯ್ಯರ್ ಅವರು ಕಾಂಗ್ರೆಸ್ ನಾಯಕ ಕೆ.ಎಸ್. ಸಬರಿನಾಥನ್ ಅವರನ್ನು ವಿವಾಹವಾಗಿದ್ದಾರೆ. ಸಬರಿನಾಥನ್ ಅವರು ಕಾಂಗ್ರೆಸ್ ಹಿರಿಯ ನಾಯಕ ದಿವಂಗತ ಜಿ. ಕಾರ್ತಿಕೇಯನ್ ಅವರ ಪುತ್ರ. ವಿಝಿಂಜಮ್ ಅಂತಾರಾಷ್ಟ್ರೀಯ ಬಂದರಿನ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ದಿವ್ಯಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿಯಾಗಿದ್ದ ಸಿಪಿಐ(ಎಂ) ನಾಯಕ ಕೆ.ಕೆ. ರಾಗೇಶ್ ಅವರನ್ನು ಹೊಗಳಿದ್ದಾರೆ. ಕೆ. ಕೆ. ರಾಗೇಶ್ ಅವರು ಗುರಾಣಿ. ಇದು ಮಹಾಭಾರತದ ಕರ್ಣನಿಗೂ ಅಸೂಯೆ ಹುಟ್ಟಿಸುವಂತಿದೆ. ಅವರ ಜೀವನದಿಂದ ನಾನು ಪಾಲಿಸಬಹುದಾದ ಹಲವಾರು ಸದ್ಗುಣಗಳಿವೆ. ಅವರು ನಿಷ್ಠೆಯ ಪಠ್ಯಪುಸ್ತಕ, ಕಠಿಣ ಪರಿಶ್ರಮದ ಮಸಿ. ನಮ್ಮನ್ನು ಯಾವಾಗಲೂ ಅತ್ಯಂತ ಗೌರವದಿಂದ ಪರಿಗಣಿಸಿರುವುದಕ್ಕೆ ಧನ್ಯವಾದಗಳು ಎಂದು ಹೇಳಿದ್ದರು.
ಅಯ್ಯರ್ ಅವರ ಈ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಇದರಿಂದ ಕೆಲವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬಗ್ಗೆಯೂ ಟೀಕೆ ಮಾಡಿದ್ದಾರೆ.
ಈ ಬಗ್ಗೆ ಬುಧವಾರ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಪಿಣರಾಯಿ ಅವರು ದಿವ್ಯಾ ಅಯ್ಯರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಟ್ರೋಲ್ ಮಾಡುತ್ತಿರುವುದು ಅತ್ಯಂತ ಅಪಕ್ವ ಮನಸ್ಸುಗಳು ಎಂದು ನಾವು ನೋಡಬೇಕು. ದಿವ್ಯಾ ಅವರು ಸರ್ಕಾರಿ ವಲಯದಲ್ಲಿ ಕೆಲಸ ಮಾಡುತ್ತಿರುವ ಐಎಎಸ್ ಅಧಿಕಾರಿ. ಅವರು ತಾವು ಕಂಡದ್ದಕ್ಕೆ ಸಾರ್ವಜನಿಕ ಪ್ರತಿಕ್ರಿಯೆ ನೀಡಿದ್ದಾರೆ. ಅವರು ತಮ್ಮ ಪತಿಯ ರಾಜಕೀಯವನ್ನು ಮಾತ್ರ ನೋಡುತ್ತಾರೆ. ರಾಜಕೀಯಕ್ಕಿಂತ ಭಿನ್ನವಾದ ಚಿಂತನೆಯನ್ನು ದಿವ್ಯಾ ಅವರು ಅಭಿವ್ಯಕ್ತ ಮಾಡಿರುವುದಕ್ಕೆ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ananya Panday: ‘ಶನೆಲ್’ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ಅನನ್ಯಾ ಪಾಂಡೆ
ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಅವರು, ಪಿಣರಾಯಿ ವಿಜಯನ್ ಅವರಿಗೆ ಸೇವಕರಾಗಿರುವ ಕೆಲವು ನಾಗರಿಕ ಸೇವಾ ಅಧಿಕಾರಿಗಳಿದ್ದಾರೆ. ದಿವ್ಯಾ ಅವರು ಅವರಲ್ಲಿ ಒಬ್ಬರು. ಈ ಹೊಗಳಿಕೆ ಭವಿಷ್ಯದಲ್ಲಿ ಅವರಿಗೆ ಹಾನಿಕಾರಕವಾಗಿರುತ್ತದೆ ಎಂದು ಹೇಳಿದ್ದಾರೆ.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮತ್ತು ಶಾಸಕ ರಾಹುಲ್ ಮಮ್‌ಕೂಟತಿಲ್ ಅವರು ಕೂಡ ಅಯ್ಯರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕರ್ಣ ಯಾರೇ ಆಗಿರಲಿ, ಅವನು ಸಾಯುವವರೆಗೂ ಧರ್ಮದ ವಿರುದ್ಧ ದುರ್ಯೋಧನನ ಪರವಾಗಿದ್ದನು. ಹಾಗಾದರೆ ಇಲ್ಲಿ ದುರ್ಯೋಧನ ಯಾರು ಎಂದು ಪ್ರಶ್ನಿಸಿದ್ದಾರೆ. ಯುವ ಕಾಂಗ್ರೆಸ್ ನಾಯಕ ವಿಜಿಲ್ ಮೋಹನನ್ ಅವರು ಅಯ್ಯರ್ ಅವರಿಗೆ ಸಿಪಿಐ(ಎಂ) ರಾಜ್ಯ ಪ್ರಧಾನ ಕಚೇರಿಯಿಂದ ಸಂಬಳ ನೀಡಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಹೇಳಿದ್ದಾರೆ.