ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'ಕೆಲ ಕ್ರಿಕೆಟಿಗರು ಸೆಕ್ಸ್‌ ಬೇಡಿಕೆ ಇಡುತ್ತಾರೆ'; ಹೆಣ್ಣಾಗಿ ಬದಲಾದ ಅನಯಾ ಬಂಗಾರ್ ಗಂಭೀರ ಆರೋಪ​!

ತಾನು ಹುಡುಗನಲ್ಲ, ಹುಡುಗಿ ಎಂದು ಯಾವಾಗ ಅನಿಸಿತು ಎಂಬ ಪ್ರಶ್ನೆಗೆ ಉತ್ತರಿಸಿದ ಅನಯಾ, ‘ನನಗೆ ಎಂಟು ಅಥವಾ ಒಂಬತ್ತು ವರ್ಷ ವಯಸ್ಸಿದ್ದಾಗ, ನಾನು ನನ್ನ ತಾಯಿಯ ಬಟ್ಟೆಗಳನ್ನು ಧರಿಸುತ್ತಿದ್ದೆ. ಬಳಿಕ ಕನ್ನಡಿಯ ಮುಂದೆ ನಿಂತು ನಾನು ಹುಡುಗಿ, ನಾನು ಹುಡುಗಿಯಾಗಲು ಬಯಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದೆʼ ಎಂದು ಬಹಿರಂಗಪಡಿಸಿದ್ದಾರೆ.

ನಗ್ನ ಫೋಟೋ ಕಳುಹಿಸಿ ಅನಯಾ ಬಂಗಾರ್‌ಗೆ ಕ್ರಿಕೆಟಿಗರಿಂದ ಲೈಂಗಿಕ ಕಿರುಕುಳ

Profile Abhilash BC Apr 18, 2025 4:57 PM

ಲಂಡನ್‌: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಹಾಗೂ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್(Sanjay Bangar) ಅವರ ಪುತ್ರ ಆರ್ಯನ್ ಬಂಗಾರ್ ಕಳೆದ ವರ್ಷ ಲಿಂಗ ಬದಲಾಯಿಸಿಕೊಂಡು ಅನಯಾ ಬಂಗಾರ್(Anaya Bangar) ಆಗಿ ಬದಲಾಗಿದ್ದರು. ಹುಡುಗಿಯಾಗಿ ಲಿಂಗ ಬದಲಾಯಿಸಿಕೊಂಡ ಬಳಿಕ ತಾವು ಎದುರಿಸಿದ ಕರಾಳ ಅನುಭವವನ್ನು ಮೊದಲ ಬಾರಿಗೆ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಕೆಲವು ಕ್ರಿಕೆಟಿಗರು ಯಾವುದೇ ಮುಜುಗರವಿಲ್ಲದೆ, ಸೆಕ್ಸ್‌ ಬೇಡಿಕೆ ಇಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಲಲ್ಲಂಟಾಪ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನಯಾ ಬಂಗಾರ್, 'ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಯ ನಂತರ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸುವಲ್ಲಿ ಅಡೆತಡೆಗಳು ಎದುರಾಗಿವೆ. ಕೆಲವು ಕ್ರಿಕೆಟಿಗರು ನನಗೆ ಉತ್ತಮ ಬೆಂಬಲ ನೀಡಿದರೆ, ಇನ್ನು ಕೆಲ ಕ್ರಿಕೆಟಿಗರು ತಮ್ಮ ಬೆತ್ತಲೆ ಫೋಟೋ ಕಳುಹಿಸಿ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ಹೇಳಿದರು.

‘ಕೆಲ ಕ್ರಿಕೆಟಿಗರು ನನಗೆ ಅವರ ನಗ್ನ ಚಿತ್ರಗಳನ್ನು ಕಳುಹಿಸಿದ್ದಾರೆ. ಅಲ್ಲದೆ ನನ್ನ ನಗ್ನ ಚಿತ್ರವನ್ನು ಕಳುಹಿಸುವಂತೆ ಕಿರುಕುಳ ನೀಡಿತ್ತಾರೆ. ಇವರೆಲ್ಲ ಒಂದು ಕಾಲದಲ್ಲಿ ನನ್ನ ಜತೆ ಆಡಿದ ಕ್ರಿಕೆಟಿಗರಾಗಿದ್ದಾರೆ. ಮತ್ತೊಂದು ಘಟನೆಯಲ್ಲಿ, ನಾನು ಭಾರತದಲ್ಲಿದ್ದಾಗ, ನನ್ನ ಪರಿಸ್ಥಿತಿಯ ಬಗ್ಗೆ ಹಳೆಯ ಕ್ರಿಕೆಟಿಗನಿಗೆ ಹೇಳಿದೆ. ಆಗ ಆತ, ನಾವು ಕಾರಿನಲ್ಲಿ ಹೋಗೋಣ, ನಾನು ನಿನ್ನೊಂದಿಗೆ ಮಲಗಲು ಬಯಸುತ್ತೇನೆ ಎಂದು ಹೇಳಿದ್ಧ' ಎಂದು ಅನಯಾ ಎದುರಿಸಿದ ಸಂಕಷ್ಟಗಳನ್ನು ಬಿಚ್ಚಿಟ್ಟರು.

'ನಾನು ಮುಶೀರ್ ಖಾನ್, ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್ ಅವರಂತಹ ಕೆಲವು ಪ್ರಸಿದ್ಧ ಕ್ರಿಕೆಟಿಗರೊಂದಿಗೆ ಆಡಿದ್ದೇನೆ. ತಂದೆ ಪ್ರಸಿದ್ಧ ವ್ಯಕ್ತಿಯಾಗಿರುವುದರಿಂದ ನಾನು ನನ್ನ ದೇಹದ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳಬೇಕಾಯಿತು. ಕ್ರಿಕೆಟ್ ಜಗತ್ತು ಅಭದ್ರತೆ ಮತ್ತು ವಿಷಕಾರಿ ಪುರುಷತ್ವದಿಂದ ತುಂಬಿದೆ' ಎಂದು ಹೇಳಿದರು.

ತಾನು ಹುಡುಗನಲ್ಲ, ಹುಡುಗಿ ಎಂದು ಯಾವಾಗ ಅನಿಸಿತು ಎಂಬ ಪ್ರಶ್ನೆಗೆ ಉತ್ತರಿಸಿದ ಅನಯಾ, ‘ನನಗೆ ಎಂಟು ಅಥವಾ ಒಂಬತ್ತು ವರ್ಷ ವಯಸ್ಸಿದ್ದಾಗ, ನಾನು ನನ್ನ ತಾಯಿಯ ಬಟ್ಟೆಗಳನ್ನು ಧರಿಸುತ್ತಿದ್ದೆ. ಬಳಿಕ ಕನ್ನಡಿಯ ಮುಂದೆ ನಿಂತು ನಾನು ಹುಡುಗಿ, ನಾನು ಹುಡುಗಿಯಾಗಲು ಬಯಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದೆʼ ಎಂದು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ IPL 2025: ಬದಲಿ ಆಟಗಾರನಾಗಿ ಗುಜರಾತ್ ತಂಡ ಸೇರಿದ ದಾಸುನ್ ಶನಕ

ಅನಯಾ ಕಳೆದ 10 ತಿಂಗಳಿಂದ ಹಾರ್ಮೋನ್ ಬದಲಾವಣೆಗಾಗಿ ಚಿಕಿತ್ಸೆ ಪಡೆದು ಹುಡುಗಿಯಾಗಿ ಬದಲಾದರು. ಎಡಗೈ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಅನಯಾ‌ (ಆರ್ಯನ್ ಬಂಗಾರ್) ಬಾಲ್ಯದಿಂದಲೇ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದರು. ಅಲ್ಲದೆ ಲೀಸೆಸ್ಟರ್‌ಶೈರ್‌ನ ಹಿಂಕ್ಲೆ ಕ್ರಿಕೆಟ್ ಕ್ಲಬ್‌ ಪರ ಆಡಿದ್ದರು. ಅನಯಾ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ.