Saturday, 27th July 2024

ಸಾವಿನ ಹೆದ್ದಾರಿಗಳಾಗದಿರಲಿ

ಯಾವುದೇ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಅಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಪಾತ್ರ ಅತಿ ಮುಖ್ಯವಾಗಿರುತ್ತದೆ. ಸರಕು ವಾಹನ  ಗಳು ಮತ್ತು ದೂರದ ಬೇರೆ ಬೇರೆ ಸ್ಥಳಗಳಿಗೆ ಸಂಚರಿಸುವವರಿಗೆ ರಾಷ್ಟ್ರೀಯ ಹೆದ್ದಾರಿಗಳು ಪ್ರಮುಖ ಪಾತ್ರ ವಹಿಸುತ್ತವೆ.

ವಾಹನಗಳ ಚಲನೆಯನ್ನು ವೇಗಗೊಳಿಸಲು ಮತ್ತು ಅಪಘಾತ ಮುಕ್ತ ಹೆದ್ದಾರಿಗಳನ್ನು ಮಾರ್ಪಡಿಸಲು ಕೇಂದ್ರ ಸರಕಾರ ಪ್ರತಿ ವರ್ಷ ಸಾವಿರಾರು ಕೋಟಿ ರುಪಾಯಿಗಳನ್ನು ವ್ಯಯಿಸುತ್ತಿದೆ. ಆದರೆ ರಾಷ್ಟ್ರೀಯ ಹೆದ್ದಾರಿ-೪ ರಾಷ್ಟ್ರೀಯ ಹೆದ್ದಾರಿಯಾಗುವ ಬದಲು ಸಾವಿನ ಹೆದ್ದಾರಿ ಯಾಗುತ್ತಿದೆಯೇ ಎಂಬ ಸಂಶಯ ಮೂಡುತ್ತಿದೆ. ಏಕೆಂದರೆ ರಾಷ್ಟ್ರೀಯ ಹೆದ್ದಾರಿ-೪ರಲ್ಲಿ ಡಿವೈಡರ್ ಮಧ್ಯೆ ಹಾಕಿರುವ ಅಲಂಕಾರಿಕ ಗಿಡಗಳ ಜತೆ ಬೆಳೆದಿರುವ ಹುಲ್ಲನ್ನು ತಿನ್ನಿಸಲು ರೈತರು ತಮ್ಮ ಸಾಕುಪ್ರಾಣಿಗಳನ್ನು  ಡಿವೈಡರ್‌ ನಲ್ಲಿ ಬಿಟ್ಟು ಮೇಯಿ ಸುತ್ತಾರೆ.

ದನ-ಕರುಗಳು ಏಕಾಏಕಿ ವಾಹನಗಳಿಗೆ ಅಡ್ಡಬಂದರೆ ಅಪಘಾತಗಳಾಗಿ ಪ್ರಾಣಹಾನಿ ಆಗುವ ಸಂಭವವೂ ಉಂಟು. ಈ ಹಿಂದೆ ಇದೇ ರೀತಿಯ ಅಪಘಾತಗಳು ಹೆಚ್ಚಾಗಿ ಇಲ್ಲಿ ಸಂಭವಿಸಿರುವ ಜೊತೆಗೆ ಅನೇಕ ಸಂಖ್ಯೆಯಲ್ಲಿ ಅಪಘಾತಗಳಾಗಿ ಸಾವು-ನೋವು ಗಳು ಉಂಟಾಗಿವೆ. ಹೆzರಿ ನಿರ್ವಹಣೆ ಹೊತ್ತಿರುವ ಟೋಲ್ ಸಿಬ್ಬಂದಿಯವರಿಗಾದರೂ ಹೇಗೆ ನಿರ್ವಹಿಸಬೇಕು ಎಂಬ ಕನಿಷ್ಠ ಜ್ಞಾನವಿಲ್ಲವೇ? ಟೋಲ್ ಸಿಬ್ಬಂದಿ ಕೇವಲ ಟೋಲ್ ಸಂಗ್ರಹಿಸುವುದರಲ್ಲಿ ಬ್ಯುಸಿಯಾಗಿರುತ್ತಾರೆಯೇ ಹೊರತು ಜನರ ಜೀವ ಕಾಪಾಡುವ ಮುತುವರ್ಜಿ ಕಿಂಚಿತ್ತೂ ಇಲ್ಲ. ರಾಷ್ಟ್ರೀಯ ಹೆzರಿಗಳು ಸಾವಿನ ಹೆದ್ದಾರಿಗಳಾಗದಿರಲಿ. ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಹೆದ್ದಾರಿಗಳಲ್ಲಿ ದನ ಮೇಯಿಸುವುದನ್ನು ನಿಷೇಧಿಸಲಿ.
– ಮುರುಗೇಶ ಡಿ ದಾವಣಗೆರೆ

ಸಂತಶ್ರೇಷ್ಠ ಶ್ರೀಕನಕ
ಕನ್ನಡ ನಾಡಿನ ಸಂಸ್ಕೃತಿ ಪರಂಪರೆಯ ಸಂತಕವಿ
ಕರ್ನಾಟಕ ರಾಜ್ಯ ಹಾವೇರಿ ಜಿ ಬಾಡ ಗ್ರಾಮ
ಬೀರಪ್ಪ ಬಚ್ಚಮ್ಮ ದಂಪತಿ ಉದರದೋಳ್ಳುಟ್ಟಿದ
ಜನಕ ತಿಮ್ಮಪ್ಪ ನಾಯಕ
ಹುಟ್ಟುತ್ತಾ ಸೇವಕ ತಿಮ್ಮಪ್ಪನಾಯಕ
ಅರಿವಿನ ಜ್ಞಾನ ಅರಿತಾದ ಶ್ರೇಷ್ಠ ಕನಕ
ಜ್ಞಾನದ ಜನಕ, ನಿನ್ನ ಸಾರ
ಜನ ಮನದಿ ಅಮರ
ತಲ್ಲಣಿಸದಿರು ಕಂಡ್ಯ ತಾಳು ಮನವೇ
ಕುಲ ಕುಲವೆಂದು ಹೊಡೆದಾಡದಿರಿ ಎಂದೆ
ನಿಮ್ಮ ಕುಲದ ನೆಲೆಯನು ಬಲ್ಲಿರಾ
ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತೆಂದೆ
ಕೈಯೊಳು ನಾದಬ್ರಹ್ಮ ವಾಣಿಗಳು eನ ನಾಮ
ಹೆಗಲ ಮೇಲೆ ಕಂಬಳಿ| ರಚಿಸಿದಿ ಮೋಹನತರಂಗಿಣಿ
ಹಣೆ ಮೇಲೆ ಭಂಡಾರ ರಚಿಸಿದಿ ರಾಮಧಾನ್ಯಚರಿತೆ
ಕೊರಳೊಳು ಕೇಶವನ ಸರ ಸಾರಿದಿ ಹರಿಭಕ್ತಿಸಾರ
ಶರೀರ ನಶ್ವರ ನಾಳೆ ಮರೆಯಾಗುತ್ತದೆ
ಮಾಡಿರಿ ಧ್ಯಾನ ಆದಿಕೇಶವನೇ ದೈವವೆಂದು
ಸುಖದುಃಖಗಳ ಕಾಟ ಎದುರಾಗದು
ಕುಲ ಕುಲಗಳ ಭೇದವ ಭೇಧಿಸಿದಿ
– ರಾಮು ಎನ್ ರಾಠೋಡ್ ಮಸ್ಕಿ

ಸಿಧು ಎನ್ನುವ ವಿವಾದಾತ್ಮಕ ವ್ಯಕ್ತಿ
ಶನಿವಾರ ಸಿಖ್ ಯಾತ್ರಿಗಳಿಗೆ ಮುಕ್ತವಾದ ಕತಾರ್‌ಪುರ್‌ನ ಕಾರಿಡಾರ್ ಗುರುದ್ವಾರಕ್ಕೆ ಭೇಟಿ ವೇಳೆ ಪಾಕ್ ಅಧಿಕಾರಿಗಳಿಂದ ತಮಗೆ ದೊರೆತ ಅಭೂತಪೂರ್ವ ಸ್ವಾಗತಕ್ಕೆ ಖುಷಿಗೊಂಡ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತನ್ನ ಹಿರಿಯಣ್ಣನಿದ್ದಂತೆ, ಅವರಿಂದ ಸಾಕಷ್ಟು ಪ್ರೀತಿ ದೊರೆತಿದೆ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಸಿಧು ರಾಜಕಾರಣಕ್ಕೆ ಪ್ರವೇಶಿಸಿದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಹೀಡಾಗುತ್ತಲೇ ಇದ್ದು, ತಮ್ಮ ಸುದೀರ್ಘ ವೃತ್ತಿ ಕ್ರಿಕೆಟ್ ಬದುಕಿನಲ್ಲಿ ಎಂದಿಗೂ ಈ ತರಹದ ವಿವಾದವನ್ನು ಮೈಮೇಲೆ ಎಳೆದುಕೊಳ್ಳದೇ ಅಪ್ಪಟ ಸಭ್ಯ, ಸಜ್ಜನಿಕೆಯ ವ್ಯಕ್ತಿತ್ವ ಕಾಪಾಡಿಕೊಂಡಿದ್ದರು. ಆದರೆ ಪಾಕ್‌ಗೆ ಭೇಟಿ ನೀಡಿದ ಎರಡು ಬಾರಿಯೂ ಪಾಕ್ ಪ್ರಧಾನಿಯನ್ನು ಹೊಗಳುವ ಮೂಲಕ ಜಗತ್ತಿನೆಡೆಯ ದೇಶಭಕ್ತ ಕ್ರಿಕೆಟ್ ಪ್ರೇಮಿಗಳು ಹಾಗೂ ದೇಶವಾಸಿಗಳಿಗೆ ಮುಜುಗರ ಉಂಟು ಮಾಡುವ ಮೂಲಕ ಸಿಧು ಈ ಕಾಲಘಟ್ಟದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಿದ್ದಾರೆ. ಈ ಹಿಂದೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಪಾಕ್‌ಗೆ ಭೇಟಿ ಕೊಟ್ಟ ವೇಳೆ ಪಾಕ್ ಸಂಸ್ಥಾಪಕ ಜಿನ್ನಾ ಅವರನ್ನು ಹೊಗಳುವ ಮೂಲಕ ಆರ್‌ಎಸ್ ಎಸ್ ಹಾಗೂ ಪಕ್ಷದ ಕೆಂಗಣ್ಣಿಗೆ ಗುರಿಯಾಗಿ ತಮ್ಮ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದರು.

ಅದೇ ಹಾದಿಯಲ್ಲಿ ಸಿಧು ಇಲ್ಲವಾದರೂ, ಅವರ ಈ ಹೇಳಿಕೆ ಪಕ್ಷ ಮತ್ತು ದೇಶ ವಾಸಿಗಳಿಗೆ ಸಾಕಷ್ಟು ಮುಜುಗರ ತರುವಂತಹದ್ದು! ಏಕೆಂದರೆ, ಸದ್ಯ ಭಾರತ-ಪಾಕ್ ನಡುವಿನ ಸಂಬಂಧ ತೀರಾ ಹದಗೆಟ್ಟಿದ್ದು, ಪಾಕ್ ಉಗ್ರರ ನೆಲೆಯಾಗಿದೆ. ಈಗಿನ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾರತದ ಔದಾರ್ಯ, ಉದಾತ್ತ ನಿಲುವನ್ನು ಅರ್ಥ ಮಾಡಿಕೊಳ್ಳದೇ ಉಗ್ರರಿಗೆ ನೆರವಾಗುವಂತಹ ಮನೋಧೋರಣೆಯನ್ನು ಹೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಧು ಅವರ ಈ ವಿವಾದಿತ ಹೇಳಿಕೆ ಮಹತ್ವ ಪಡೆದು ಕೊಂಡಿದೆ.

ಸಾಮಾನ್ಯವಾಗಿ ಅತಿಥಿಗಳ ಗೃಹ ಅಥವಾ ಸ್ಥಳಗಳಿಗೆ ಭೇಟಿಯ ವೇಳೆ ಅವರನ್ನು ಹೊಗಳುವುದು ವಿಶೇಷ. ಅದೇ ಧಾಟಿಯಲ್ಲಿ ಸಿಧು ಅವರ ಮಾತುಗಳು ಬಂದಿದೆಯಾದರೂ, ಭಾರತ-ಪಾಕ್ ನಡುವಿನ ಸಂಬಂಧ ತೀರಾ ಹದಗೆಟ್ಟು ಹೋಗಿರುವ ಪ್ರಸ್ತುತ ಸಂದರ್ಭದಲ್ಲಿ ಸಿಧು ಮಾತನಾಡುವಾಗ ಗಂಭೀರವಾಗಿ ಯೋಚಿಸಬೇಕಿತ್ತು. ಖಂಡಿತಾ ಇದು ಅಕ್ಷಮ್ಯ. ಈ ನಿಟ್ಟಿನಲ್ಲಿ ಸಿಧು ದೇಶದ ಜನರ ಕ್ಷಮೆ ಯಾಚಿಸಲಿ.
– ಶ್ರೀಧರ್ ಡಿ.ರಾಮಚಂದ್ರಪ್ಪ ಚಿತ್ರದುರ್ಗ

ಕಾಯಿದೆ ವಾಪಸು, ರೈತರಿಗೆ ಹಿನ್ನಡೆ
ಕಳೆದ ಒಂದು ವರ್ಷದಿಂದ ದೇಶಾದ್ಯಂತ ಹೋರಾಟ, ಪ್ರತಿಭಟನೆ, ಸಾವು-ನೋವುಗಳಿಗೆ ಕಾರಣವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರಕಾರ ರದ್ದು ಪಡಿಸಿರುವುದನ್ನು ಇಡೀ ದೇಶವೇ ಸ್ವಾಗತಿಸುತ್ತಿದೆ. ಆದರೆ ಈ ನಿರ್ಧಾರ ನಿಜವಾದ ರೈತರಿಗೆ ದೊರೆತ ಹಿನ್ನಡೆ ಎಂದೇ ಹೇಳಬಹುದು. ಗಣರಾಜ್ಯೋತ್ಸವದ ದಿನದಂದು ಕೆಂಪು ಕೋಟೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಾಡುವ ಬದಲು ಸಿಖ್ ಬಾವುಟವನ್ನು ಹಾರಿಸಿದ ನಕಲಿ ಹೋರಾಟಗಾರರ ಹೋರಾಟಕ್ಕೆ ಸರಕಾರ ಮಣಿಯಿತೆ ಎಂಬ ಪ್ರಶ್ನೆ ಮೂಡುತ್ತಿದೆ.

ವಾಸ್ತವವಾಗಿ ಪ್ರತಿಪಕ್ಷ ಸ್ಥಾನದಲ್ಲಿರುವ ಪಕ್ಷಗಳು ಕೃಷಿ ಕಾಯಿದೆಯಲ್ಲಿನ ಲೋಪ ದೋಷಗಳನ್ನು ಸರಕಾರದ ಗಮನಕ್ಕೆ ತಂದು, ಕೆಲವೊಂದು ತಿದ್ದುಪಡಿಗಳನ್ನು ಮಾಡಿಸಿ, ದೇಶದ ಜನರಿಗೆ ಒಳ್ಳೆಯದಾಗುವ ಕಾಯಿದೆಗಳನ್ನು ಸ್ವಾಗತಿಸಬೇಕಿತ್ತು. ಹೀಗೆ ರೈತ
ಹೋರಾಟಗಳು ಮುಂದುವರೆದು ಸಾವು- ನೋವುಗಳ ಸಂಖ್ಯೆ ಹೆಚ್ಚಾದರೆ ಅದಕ್ಕೆ ಆಡಳಿತ ಪಕ್ಷವೇ ಕಾರಣ ಎಂಬ ಹಣೆ
ಪಟ್ಟಿಯನ್ನೆ ಕಟ್ಟುತ್ತಾರೆ ಎಂಬ ಹೆದರಿಕೆಗೆ ಮತ್ತು ಮುಂಬರುವ ಚುನಾವಣೆಗಳಲ್ಲಿ ಸಿಖ್ ಮತಗಳೇ ನಿರ್ಣಾಯಕವಾಗಿರುವು
ದರಿಂದ ಸರಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಊಹಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹಿತದೃಷ್ಟಿಯೇ
ಮುಖ್ಯ ಎಂಬುದನ್ನು ಮೋದಿ ಸಾಬೀತು ಪಡಿಸಿzರೆ. ಆದರೆ ಇದು ನಕಲಿ ಹೋರಾಟಗಾರರಿಗೆ ದೊರೆತ ಗೆಲುವಾದರೂ
ಅಸಲಿ ರೈತರ ಭಾವನೆಗಳಿಗೆ ಬೆಲೆ ಇಲ್ಲದಂತಾಯಿತು.
– ರಾಕೇಶ ಆಲಬಾಳ ಅಥಣಿ

Leave a Reply

Your email address will not be published. Required fields are marked *

error: Content is protected !!