Sunday, 8th September 2024

ಅಲೋಪಥಿ ಜತೆ ಯೋಗಗುರು ಗುದ್ದಾಟ

ಎಣ್ಣೆಯ ಬೆಲೆ ನಿಯಂತ್ರಣಕ್ಕೆ ಕ್ರಮ ಅಗತ್ಯ ಪ್ರಸ್ತುತ ಕೋವಿಡ್ ಕಾಲದಲ್ಲಿ ಯಾವುದೇ ಪುರಾತನ ಕಾಲದ ಯೋಗ ಪದ್ಧತಿ ಯನ್ನಾಗಲಿ ಆಧುನಿಕ ಕಾಲದ ಅಲೋಪಥಿಯನ್ನಾಗಲಿ ಟೀಕಿಸುವುದು ಸರಿಯಲ್ಲ. ಯೋಗವು ದೀರ್ಘಕಾಲದ ಅಭ್ಯಾಸದ ನಂತರ ನಮ್ಮ ಅರೋಗ್ಯವನ್ನು ಉತ್ತಮಗೊಳಿಸುತ್ತದೆ.

ಹಾಗೇ ಯಾವುದೇ ರೀತಿಯ ದೈಹಿಕ ಶ್ರಮದ ಯೋಗವನ್ನಾಗಲಿ, ನಡಿಗೆಯನ್ನಾಗಲಿ, ಒಳ್ಳೆಯ ಆಹಾರ ಪದ್ಧತಿಯನ್ನಾಗಲಿ ಅಳವಡಿಸಿಕೊಳ್ಳದೆ ಈಗ ’ಕೋವಿಡ್’ ಸೊಂಕಿಗೆ ಒಳಪಟ್ಟರೆ ಆಗ ಅಲೋಪತಿಗೆ ಶರಣಾಗಲೇ ಬೇಕಾಗುತ್ತದೆ. ’ಯುದ್ಧ ಕಾಲದಲ್ಲಿ  ಶಸ್ತ್ರಾಭ್ಯಾಸ’ ಎಂಬಂತೆ ಆಗ ಯೋಗ ಮಾಡಿ, ಪೌಷ್ಟಿಕ ಆಹಾರ ಸೇವನೆ ಮಾಡಿದರೆ ರೋಗದಿಂದ ಗುಣಮುಖರಾಗಲು ಸಾಧ್ಯ ವಿಲ್ಲ.

ಇನ್ನಾದಾರು ಎಚ್ಚೆತ್ತುಕೊಂಡು ಅಲೋಪತಿಯಿಂದ ಗುಣವಾಗಿ ಒಳ್ಳೆಯ ಯೋಗಾಭ್ಯಾಸ, ನಡಿಗೆ, ಆಹಾರಕ್ರಮವನ್ನು ಅಳವಡಿಸಿ ಕೊಳ್ಳಬೇಕು. ಅಲೋಪಥಿ ಔಷಧದಿಂದ ಏನಾಗುತ್ತದೆ, ಯೋಗದಿಂದ ಏನಾಗುತ್ತದೆ ಎಂದು ದೇಶಕ್ಕೆ ಒಳ್ಳೆಯ ಸಂದೇಶವನ್ನು ಕೊಡುವ ವ್ಯಕ್ತಿಗಳೇ ಕಾದಾಟಕ್ಕೆ ಇಳಿಯುವುದು ಸರಿಯಲ್ಲ ಎಲ್ಲಾ ರೀತಿಯ ವೈದ್ಯ ಪದ್ಧತಿಗೂ ತನ್ನದೇ ಆದ ವಿಶಿಷ್ಟತೆ ಇರುತ್ತದೆ ಎಂಬುದನ್ನು ನಾವು ಮನಗಾಣಬೇಕು.
– ಸುನೀತಾ ಶೈಲೇಶ್ ಜೈ

Leave a Reply

Your email address will not be published. Required fields are marked *

error: Content is protected !!