Saturday, 27th July 2024

ಮಾಲಿನ್ಯ ಕಾರಕ ಪಟಾಕಿ ನಿಷೇಧ ಮಾಡಿ

ದೀಪಾವಳಿ ಹಬ್ಬಕ್ಕೆ ಪಟಾಕಿಗಳನ್ನು ನಿಷೇಧಿಸಿರುವ ನಿರ್ಧಾರವನ್ನು ಪರಾಮರ್ಶಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ತಮಿಳುನಾಡಿನ ಪಟಾಕಿ ತಯಾರಿಕೆ ಇಡೀ ದೇಶದಲ್ಲಿ ಅತ್ಯಂತ ದೊಡ್ಡ ಕೈಗಾರಿಕೆ ಯಾಗಿದ್ದು, ಪಟಾಕಿ ನಿಷೇಧಿಸಿದರೆ ಇದನ್ನು ನಂಬಿಕೊಂಡಿರುವ ಸುಮಾರು ಎಂಟು ಲಕ್ಷ ಕಾರ್ಮಿಕರ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ. ಆದರೆ ಪಟಾಕಿಗಳ ಮಾಲಿನ್ಯದ ಕುರಿತು ಈಚೆಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿರುವುದನ್ನು ಗಮನಿಸಿದರೆ, ನಮ್ಮ ದೇಶದಲ್ಲಿ ಹದಗೆಟ್ಟಿರುವ ವಾಯುಮಾಲಿನ್ಯಕ್ಕೆ ಪಟಾಕಿಗಳ ಕೊಡುಗೆ ಎಷ್ಟಿದೆ ಎಂಬುದು ತಿಳಿಯುತ್ತದೆ. ಕಾರ್ಮಿಕರಿಗೆ ಯಾವುದಾದರು ಪುನರ್ವಸತಿ ಯೋಜನೆಗಳಿಂದ ಗುಡಿ ಕೈಗಾರಿಕೆಗಳಲ್ಲಿ ಅವರಿಗೆ ಅವಕಾಶ ಕಲ್ಪಿಸಿಕೊಟ್ಟು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕಿರು ವುದು ಅಧಿಕಾರ ವಹಿಸಿ ಕೊಂಡವರ ಕರ್ತವ್ಯ.

ಎಷ್ಟೋ ವೇಳೆ ಪಟಾಕಿ ತಯಾರಿಸುವ ಕಾರ್ಖಾನೆ ಗಳಲ್ಲಿಯೇ ಅವಘಡಗಳುಂಟಾಗಿ ಲೆಕ್ಕವಿಲ್ಲದಷ್ಟು ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ ಎಂಬುದು ತಿಳಿದ ವಿಚಾರವೇ. ಪಟಾಕಿ ನಿಷೇಧವು ಕಾರ್ಮಿಕರಿಗೆ ಬೇರೆ ದುಡಿಮೆಯಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿಸುತ್ತದೆ ಮತ್ತು ಮುಖ್ಯವಾಗಿ ಪರಿಸರ ಮತ್ತು ಜನರ ಆರೋಗ್ಯವನ್ನು ಸುಧಾರಿಸು ತ್ತದೆ.
– ಬೃಂದಾ ತಾವರಗೆರೆ,ಹುನಗುಂದ

ಯಡಿಯೂರಪ್ಪರನ್ನು ಕಡೆಗಣಿಸುವುದೇಕೆ ?

ನಮ್ಮ ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪನವರು ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲು ತುಂಬಾ ಶ್ರಮಿಸಿದವರು. ೩ ಸಾರಿ ಮುಖ್ಯಮಂತ್ರಿ ಆದಂತಹ ಯಡಿಯೂರಪ್ಪನವರನ್ನು ಬಿಜೆಪಿ ವರಿಷ್ಠರು ಕಡೆಗಣಿಸುತ್ತಿದ್ದಾರೇನೋ ಅನ್ನಿಸುತ್ತಿದೆ. ಮೊದ ಲೆಲ್ಲಾ ಸೈಕಲ್ ತುಳಿದು ರಾಜ್ಯವೆಲ್ಲ ಸುತ್ತಾಡಿ ಸಂಘಟನೆ ಮಾಡಿದ ಯಡಿಯೂರಪ್ಪಗೆ ಈ ರೀತಿಯ ಅವಮಾನ ಸರಿಯಲ್ಲ. ಇದು ಅವರ ಮಗನ ಕಾರಣಕ್ಕಾಗಿ ಅಂತ ಮೇಲ್ನೋಟದಲ್ಲಿಯೇ ಇದೆ. ಆದರೆ ಅವರ ಮಗ ವಿಜಯೇಂದ್ರ ಒಳ್ಳೆಯ ಸಂಘಟಕ ಉಪ ಚುನಾವಣೆಯ ಚಾಣಕ್ಯಂದೇ ಹೆಸರುವಾಸಿ ಆದವರು ಅವರ ಚಾಕಚಕ್ಯತೆ ಹಾಗೂ ಸಂಘಟನಾ ಕೌಶಲ್ಯಗಳು ಬಿಜೆಪಿಗೆ ಬೇಕಾಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೂ ಒಳಜಗಳಗಳಿಂದ ತಮ್ಮ ಪಕ್ಷದ ಮುಂದಿನ ಚುನಾವಣೆಗಳಿಗೆ ಮಾರಕವಾಗ ಬಹುದು.

ತಲೆ ನೋವಾಗಿರುವ ಬೆಂಗಳೂರು ಟ್ರಾಫಿಕ್
ಕೆಲಸದ ಗಡಿಬಿಡಿ ಒಂದು ಕಡೆ ಆದ್ರೆ ಈ ಬೆಂಗಳೂರು ಟ್ರಾಪಿಕ್ ತಲೆನೋವು ಇನ್ನೊಂದು ಕಡೆ. ಎಲ್ಲರೂ ಕೆಲಸಗಾರರೇ ತುಂಬಿರುವ ನಗರ ಅಂದ್ರೇ ಅದು ಬೆಂಗಳೂರು ಎಲ್ಲರಿಗೂ ಅವರದ್ದೆ ಆದ ಗಡಿಬಿಡಿ ಕೆಲಸ ನಾನು ಮೊದಲಿಗೆ ಹೋಗಬೇಕು ಅನ್ನೊ ಆತುರದಲ್ಲಿ ಎಲ್ಲರು ಹೋಗಿ ಸಿಗೋದು ಈ ಟ್ರಾಫಿಕ್‌ನಲ್ಲೇ. ಇವಾಗ ಇದು ಎಲ್ಲರಿಗೂ ಕಿರಿ ಕಿರಿ ಉಂಟು ಮಾಡಿದ್ರು ಈ ಟ್ರಾಫಿಕ್‌ಗೆ ಎಲ್ಲರು ಹೊಂದಿಕೊಂಡಿದ್ದಾರೆ.

-ಶ್ರೀದೇವಿ ಮುಧೋಳ ಬೆಂಗಳೂರು

ಭೂಕಂಪನಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ
ಕಲಬುರಗಿ ಜಿಯ ಚಿಂಚೋಳಿ ತಾಲೂಕಿನ ಸುಲೇಪೇಟ ಹೂಬಳಿ ಘಟಕದ ವ್ಯಾಪ್ತಿಗೆ ಬರುವ ಗಡಿಕೇಶ್ವ ಗ್ರಾಮದಲ್ಲಿ ನಿರಂತರ ವಾಗಿ ಪದೇ ಪದೇ ಆಗುತ್ತೀರುವ ಭೂಕಂಪನದಿಂದ ಗ್ರಾಮದ ಜನತೆ ಬೆಚ್ಚಿ ಬಿದ್ದಿದಾರೆ. ಚಿಂಚೋಳಿ ತಾಲೂಕಿನ ಸುತ್ತ ಮುತ್ತ ಗ್ರಾಮಗಳಿಗಿಂತ ಗಡಿಕೇಶ್ವರ ಗ್ರಾಮದಲ್ಲಿ ವಿಪರೀತ ತೀರ್ವವಾಗಿ ಭೂಕಂಪಿಸುತ್ತದೆ.

ಭೂಕಂಪನದ ಸುದ್ದಿ ಮಾಧ್ಯಮಗಳಲ್ಲಿ ಆಗಾಗ ವರದಿಯಾಗುತ್ತಿರುತ್ತದೆ. ಆದರೂ ಇಲ್ಲಿನ ಜನರಿಗೆ ಸ್ಥಳಾಂತರ ಮಾಡಿಸುವು ದಾಗಲಿ ಅಗತ್ಯ ನೆರವುವಾಗಲಿ ಸೂಕ್ತ ಸೌಕರ್ಯ ದೂರೆತಿಲ್ಲ. ಗ್ರಾಮದ ಜನ ಆಕ್ರೋಶ ಪ್ರತಿಭಟನೆ ಒತ್ತಾಯ ಮಾಡಿದ ನಂತರ ಗ್ರಾಮಕ್ಕೆ ಜಿಡಳಿತ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಕಂದಾಯ ಸಚಿವರು ಭೇಟಿ ಮಾಡಿ ಪರಿಶಿಲನೆ ಮಾಡಿದ ನಂತರ ಶೇಡ್ ಗಂಜಿಕೇಂದ್ರ ತೇರೆದರೂ, ತಾತ್ಕಲಿಕ ಸಾಮೂಹಿಕವಾಗಿ ಶೆಡ್ ನಿರ್ಮಿಸಿ ವಸತಿ ವ್ಯವಸ್ಥೆ ಕಲ್ಪಿಸಿದಾರೆ ಈ ಹಿಂದೆ ಶೆಡ್‌ಗಳು ನಿರ್ಮಸದೇ ಇರುವುದರಿಂದ ಗ್ರಾಮದ ಜನ ಹೊರಗಡೆ ಮಲಗಿಕೊಂಡು ಆತಂಕದಲ್ಲಿಯೇ ಬದುಕುತ್ತಿದ್ದಾರೆ.

ಗ್ರಾಮದಲ್ಲಿ ದಶಕದಿಂದ ಭೂಕಂಪಿಸುತ್ತದೆ ಹಿಂದಿನ ಸರಕಾರವೇ ಮಾಡಬೇಕಿತ್ತು. ಆದರೆ ಮಾಡಿಲ್ಲ. ಹೋಗಲಿ, ಈಗಿರುವ ಸರಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಗ್ರಾಮದ ಜನರ ಬದುಕೂ ಮೂರಾಬಟ್ಟೆಯಾಗಿದೆ ಭೂಕಂ ಪನ ಎಲ್ಲಿ ಸಂಭವಿಸುತ್ತದೆ. ರಕ್ಷಣೆ ಮಾಡಿಕೊಳ್ಳುವ ವಿಚಾರ ದಲ್ಲಿ ಜನಜಾಗೃತಿ ಮೂಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳ ಬೇಕಾದ ದಿನ
ಇದು. ಇಂತಹ ಅಪಾಯದ ಸ್ಥಿತಿಯಲ್ಲಿ ಸರಕಾರವು ಜನರ ರಕ್ಷಣೆಗೆ ನಿಲ್ಲಬೇಕು. ಅದು ಬಿಟ್ಟು ಎಲ್ಲಾ ರಾಜಕೀಯ ಪಕ್ಷದವರು ಉಪಚುನಾವಣೆಯಲ್ಲಿ ಮುಳುಗಿ ಹೋಗಿದ್ದಾರೆ. ಇನ್ನಾದರೂ ಎಲ್ಲಾ ರಾಜಕರಾಣಿಗಳು ಭೂಕಂಪನದ ಕುರಿತು ಗಂಭೀರವಾಗಿ ಪರಿಗಣಿಸಿ ಶಾಶ್ವತ ಕ್ರಮಕ್ಕೆ ಮುಂದಾಗಬೇಕು.

– ಸಂತೋಷ ಜಾಬೀನ್ ಸುಲೇಪೇಟ,ಕಲಬುರಗಿ

ಪಾಲಕರೇ ಎಚ್ಚರ

ಶಾಲೆಗಳು ಪ್ರಾರಂಭವಾಗುತ್ತಿರುವ ಬೆನ್ನಲ್ಲೇ ಕರೋನಾ ಕೂಡ ಹೆಚ್ಚುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಜಾಗರೂಕತೆಯಿಂದ ಶಾಲೆಗಳಿಗೆ ಕಳುಹಿಸಬೇಕು. ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಮಕ್ಕಳಿಗೆ ಸೋಂಕಿನ ಬಗ್ಗೆ ಹಾಗೂ ಕರೋನಾದ ಬಗ್ಗೆ ಜಾಗೃತಿ ನೀಡಬೇಕು. ಇಂದಿನ ದಿನಗಳಲ್ಲಿ ಬಸ್ ರೈಲುಗಳಲ್ಲಿ ಜನರು ಸಂಚರಿಸುವುದನ್ನು ನೋಡಿದರೆ ಕರೋನಾ ಎನ್ನುವುದು ಇತ್ತು ಎನ್ನುವುದೇ ಮರೆತಿರುವಂತೆ ಕಾಣುತ್ತಿದೆ. ಜನಸಾಮಾನ್ಯರೂ ಸಹಿತ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವ್ಯವಹರಿಸುವುದು ಉತ್ತಮ.
-ಸರ್ವೋತ್ತಮ ಮಂಗಳೂರು

Leave a Reply

Your email address will not be published. Required fields are marked *

error: Content is protected !!