Sunday, 8th September 2024

ನಾಚಿಕೆಗೇಡಿನ ಸಂಗತಿ

ಕರೋನ ನಂತರದಲ್ಲಿ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.

ಇದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಜತೆಗೆ ಬೆಂಕಿ ಕೆಂಡವೇ ಗಾಯದ ಮೇಲೆ ಬಿದ್ದಂತಾಗಿದೆ. ಅಡುಗೆ ಇಂಧನದ ಬೆಲೆಯು ಫೆಬ್ರವರಿ ಆರಂಭದಿಂದ ಕೊನೆಯವರೆಗೂ ಅಂದ್ರೆ ಕೇವಲ ಒಂದೇ ತಿಂಗಳಲ್ಲಿ 125 ರು. ಬೆಲೆ ಏರಿಕೆ ಆಗಿರುವುದರಿಂದ ಸಾರ್ವಜನರಿಕರು ಕಂಗಾಲಾಗಿದ್ದಾರೆ. ಕೇಂದ್ರ ಯೋಜನೆಯಲ್ಲಿ ಉಚಿತವಾಗಿ ಸಿಕ್ಕ ಸಿಲಿಂಡರನ್ನು ಮೂಲೆಗೆ ಎಸೆದು ಮಂಕಾಗಿ ಕೂತಿದ್ದಾರೆ. ಬಡವರು, ಬೆಲೆ ಏರಿಕೆಯಲ್ಲಿ ಬರಿ ಸಿಲಿಂಡರ್‌ನ ಕತೆಯಷ್ಟೆ ಅಲ್ಲ ಅಡುಗೆ ಎಣ್ಣೆ, ಬೇಳೆಕಾಳುಗಳು, ಪೆಟ್ರೋಲ, ಡೀಸೆಲ್ ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರ ಜೀವ ಹಿಂಡಿ ಸಿಪ್ಪೆಯಾಗಿಸುತ್ತಿದೆ.

ಒಂದು ಸರಕಾರ ಸಾಮಾನ್ಯ ಜನರ ಜೀವನವನ್ನ ದೃಷ್ಟಿಯಲ್ಲಿಟ್ಟುಕೊಂಡು ಅಧಿಕಾರ ನಡೆಸಬೇಕೆ ಹೊರತು ಬಂಡವಾಳ
ಶಾಹಿಗಳ ಅಣತೆಯಂತೆ ಅಧಿಕಾರ ನಡೆಸಬಾರದು ಎಂಬ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೂರ ದೃಷ್ಟಿಯಿಂದ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯ ವ್ಯಾಪರದ ತುಲನೆ ಮಾಡಿ ಬೆಲೆ ಇಳಿಕೆಗೆ  ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದು ಕೇಂದ್ರ ಸರಕಾರದ ಕರ್ತವ್ಯ, ಆದರೆ ಅದೆಲ್ಲವನ್ನು ಮರೆತು ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಳ್ಳುವುದು ನಾಚಿಕೆಗೇಡಿನ ಸಂಗತಿ.

– ಸುರೇಶ್ ಯಳ್ಳಾರ್ತಿ

 

Leave a Reply

Your email address will not be published. Required fields are marked *

error: Content is protected !!