Sunday, 8th September 2024

ಜಾತ್ರೆಗೆ ಅವಕಾಶ ನೀಡಿ

ಉತ್ತರ ಕರ್ನಾಟಕ ಭಾಗದ ಅತಿದೊಡ್ಡ ಜಾತ್ರೆಗಳಂದಾದ ಹಿಂದಿನ ಬಳ್ಳಾರಿ ಜಿಯ (ಈಗ ವಿಜಯನಗರ ಜಿ) ಇತಿಹಾಸ ಪ್ರಸಿದ್ಧ ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವವು ಮಾರ್ಚ್ 7ರಂದು ನಡೆಯಬೇಕಿದ್ದು, ಕರೋನಾ ಎರಡನೇ ಅಲೆಯ ಭೀತಿಯ
ಹಿನ್ನೆಲೆಯಲ್ಲಿ ಜಾತ್ರೋತ್ಸವವನ್ನು ಜಿಡಳಿತ ರದ್ದುಗೊಳಿಸಿರುವುದು ಲಕ್ಷಾಂತರ ಸಂಖ್ಯೆಯ ಭಕ್ತರಲ್ಲಿ ನಿಜಕ್ಕೂ ಬೇಸರ ತರಿಸಿದೆ.

ಸರಕಾರದ ಈ ಆದೇಶ ಕೋಟ್ಯಂತರ ಭಕ್ತರ ಮನಸ್ಸನ್ನು ಭಾವನಾತ್ಮಕವಾಗಿ ಘಾಸಿಗೊಳಿಸಿದೆ. ಈಗಾಗಲೇ ಕರೋನಾಗೆ ಲಸಿಕೆ ಕಂಡುಹಿಡಿದು ಲಸಿಕೆ ವಿತರಣೆ ಮೊದಲ ಹಂತ ಯಶಸ್ವಿಯಾಗಿ ಮುಗಿದಿದ್ದು ಎರಡನೇ ಹಂತಕ್ಕೆ ಕಾಲಿರಿಸಿದೆ. ರಾಜಕೀಯ ಸಮಾವೇಶಗಳು, ಧಾರ್ಮಿಕ ಸಮ್ಮೇಳನಗಳು, ಚಿತ್ರಮಂದಿರಗಳು ತುಂಬಿ ತುಳುಕುತ್ತಿದ್ದು ದಿನಂಪ್ರತಿ ಪ್ರತಿಭಟನೆಗಳು ಎಗ್ಗಿಲ್ಲದೆ
ನಡೆಯುತ್ತಿವೆ. ಜತೆಗೆ ಶಾಲಾ ಕಾಲೇಜುಗಳು ಪ್ರಾರಂಭವಾಗಿ ಯಥಾಸ್ಥಿತಿಗೆ ಮರಳಿವೆ, ಬಸ್‌ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ.

ಹೀಗಿರುವಾಗ ಕೇವಲ ಕರೋನಾ ನೆಪವೊಡ್ಡಿ ಜಾತ್ರೆಯನ್ನು ರದ್ದುಪಡಿಸಿರುವುದು ಖಂಡನಾರ್ಹ. ಈ ಜಾತ್ರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯ ಮೂಲಕ ತೆರಳಿ ತಮ್ಮ ಹರಕೆಯನ್ನು ಸಲ್ಲಿಸುತ್ತಾರೆ. ಇತ್ತೀಚೆಗೆ ನಡೆದ ಹಲವಾರು ಮೀಸಲಾತಿ ಹೋರಾಟಗಳಲ್ಲಿ ಲಕ್ಷಾಂತರ ಸಂಖ್ಯೆಯ ಜನರು ಭಾಗವಹಿಸಿದ್ದರು ಆಗ ಮಾತ್ರ ಕರೋನಾ ಹರಡದೆ ಇದ್ದಿದ್ದು ಈಗ ಜಾತ್ರೆಯಲ್ಲಿ ಮಾತ್ರ ಹರಡುವುದೇ? ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿದಿದೆ. ಈಗಾಗಲೇ ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆಗಳು, ಯಶಸ್ವಿಯಾಗಿ ನಡೆದಿರುವ ಉದಾಹರಣೆಯೂ ಇದೆ.

ರಾಜ್ಯ ಸರಕಾರ ಜಾತ್ರೆಗೆ ಅನುಮತಿ ನೀಡದೇ ಇದ್ದಲ್ಲಿ ಪವಾಡಪುರುಷ ಶ್ರೀಗುರು ಕೊಟ್ಟೂರೇಶ್ವರ ಕೆಂಗಣ್ಣಿಗೆ ಗುರಿಯಾಗಿ ರಾಜ್ಯಸರಕಾರಕ್ಕೆ ಮತ್ತು ರಾಜ್ಯಕ್ಕೆ ಖೇಡಾಗುವುದಂತೂ ಸತ್ಯ. ಕೋಟ್ಯಂತರ ಜನರ ಆರಾಧ್ಯದೈವ ಆಗಿರುವ ಶ್ರೀಗುರುಕೊಟ್ಟೂ ರೇಶ್ವರ ಜಾತ್ರೆಗೆ ರಾಜ್ಯ ಸರಕಾರ ದಯಮಾಡಿ ಅನುಮತಿ ನೀಡಿ ಭಕ್ತರ ಕೃಪೆಗೆ ಪಾತ್ರರಾಗಬೇಕಾಗಿದೆ.
-ಮುರುಗೇಶ ಡಿ, ದಾವಣಗೆರೆ

Leave a Reply

Your email address will not be published. Required fields are marked *

error: Content is protected !!