ರಾಕಸಾಪದ ನೂತನ ಆಡಳಿತ ಮಂಡಳಿಯ ಆಯ್ಕೆಗೆ ನವೆಂಬರ್ ಕಡೆಯವಾರ ಸರಕಾರಕ್ಕೆ ಪತ್ರ ಬರೆಯಲಾಗುವುದೆಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ನೀಡಿರುವ ಹೇಳಿಕೆಯಲ್ಲಿ ಹುನ್ನಾರ ಅಡಗಿದೆ. 3 ವರ್ಷಕ್ಕೆ ಮತ ಕೇಳಿ ಗೆದ್ದು ಜನತಂತ್ರ ವ್ಯವಸ್ಥೆಯ ವಿರುದ್ಧವಾಗಿ 5 ವರ್ಷ ವಿಸ್ತರಿಸಿಕೋಡಿರುವುದು ಸಾಲದು ಎಂದು ಮತ್ತೆ ಮುಂಬರುವ ಮಾರ್ಚ್ 3ರ ಬಳಿಕ ಮತ್ತೆ ಆರು ತಿಂಗಳು ಅಧಿಕಾರ ವಿಸ್ತರಿಸಿಕೊಳ್ಳುವ ಹುನ್ನಾರವಿದು.
ಕಸಾಪದ ಚುನಾವಣಾ ಉಪ ನಿಬಂಧನೆಯಲ್ಲಿ ಚುನಾವಣಾಧಿಕಾರಿ ಆದವರು ಮತದಾನದ ದಿನಾಂಕಕ್ಕೆ ಮೂರು ತಿಂಗಳು ಮೊದಲು ಚುನಾವಣಾ ಪ್ರಕ್ರಿಯೆ ಆರಂಭ ಮಾಡಬೇಕು. 65 ದಿನಗಳ ಮೊದಲು ಅರ್ಹ ಸದಸ್ಯ ಮತದಾರರ ಪೂರ್ವಭಾವಿ
ಪಟ್ಟಿ ಪ್ರಕಟಿಸಬೇಕು ಎಂದಿದೆ. ಹಿಂದಿನ ಚುನಾವಣೆಗಳ ಸಂದರ್ಭದ ಅನುಭವದಿಂದ ಹೇಳುವುದಾದರೆ ಅವಧಿ ಮುಗಿಯುವ ಮುನ್ನ ನಾಲ್ಕೈದು ತಿಂಗಳ ಮೊದಲೇ ಪತ್ರ ಬರೆದಿದ್ದರೂ ಕನ್ನಡ ಭವನ ದಿನದ ಸಚಿವಾಲಯಕ್ಕೆ ಪತ್ರ ವಿಳಂಬವಾಗಿ ಹೋಗಿ ಸರಕಾರ ಚುನಾವಣಾಧಿಕಾರಿ ನೇಮಕ ಮಾಡುವುದು ತಡವಾಗಿದ್ದಿದೆ.
ಹೀಗಿರುವಾಗ ನವೆಂಬರ್ ಕಡೇವಾರದಲ್ಲಿ ಪತ್ರ ಬರೆದರೆ ಸರಕಾರ ಒಂದು ವಾರದಲ್ಲಿ ಚುನಾವಣಾಧಿಕಾರಿ ನೇಮಕ ಮಾಡಿ ಅವರು ಡಿ.3ಕ್ಕೆ ಮುನ್ನ ಅಧಿಕಾರ ವಹಿಸಿಕೊಂಡು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗುವುದು ಸಾಧ್ಯವೇ ಇಲ್ಲ. ಹೀಗಾಗಿ ಈ ಚುನಾವಣೆ ನೆಪದಲ್ಲಿ 5 ವರ್ಷದ ಬಳಿಕವೂ ಅವರೇ ಅಧಿಕಾರದಲ್ಲಿ ಮುಂದುವರಿಯುವ ಉದ್ದೇಶ ಹೊಂದಿರುವುದು
ಖಚಿತ. ಆದ ಕಾರಣ ಪ್ರಜ್ಞಾವಂತ ಕಸಾಪ ಸದಸ್ಯರು ಈ ಕೂಡಲೇ ಪತ್ರ ಬರೆಯಬೇಕೆಂದು ಒತ್ತಾಯಿಸಬೇಕಾಗಿದೆ. ಸಂಸ್ಕೃತಿ ಇಲಾಖೆ ನಿರ್ದೇಶಕರು ಬೇಗ ಪತ್ರ ಬರೆಯಲು ಸೂಚಿಸಬೇಕೆಂದು ಒತ್ತಾಯಿಸುವೆ
– ರಾಮಣ್ಣ ಕೋಡಿಹೊಸಹಳ್ಳಿ, ಹಿರಿಯ ಪತ್ರಕರ್ತರು.