Sunday, 8th September 2024

ಸೀತೆ ಪಾತ್ರಕ್ಕೆ ಕರೀನಾ ಬೇಡ

ತೈಮೂರ್ ಮಂಗೋಲಿಯಾ ಮೂಲದ ಭಾರತದ ಮೇಲೆ ಆಕ್ರಮಣ ಮಾಡಿದ ಮತಾಂಧ ಮುಸಲ್ಮಾನ ದಾಳಿಕೋರ. ಇಂತಹವನ ಹೆಸರನ್ನು ಸೈಫ್ ಅಲಿ ಖಾನ್- ಕರೀನಾ ತಮ್ಮ ಮಗನಿಗೆ ಇಟ್ಟಿದ್ದಾರೆ.

ಭಾರತೀಯ ಮೇಲೆ ದಾಳಿ ಮಾಡಿ ದಾಳಿಕೋರನ ಹೆಸರು ತೈಮೂರ್ ಆಗಿದೆಯಂದು ಆ ಹೆಸರಿಟ್ಟಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾದಾಗಲೂ ತಲೆ ಕೆಡಿಸಿಕೊಳ್ಳದ ಈ ದಂಪತಿ, ಹಿಂದೂ ವಿರೋಧ ಹೇಳಿಕೆಗಳನ್ನು ಕೊಡುತ್ತ ಹೋದರು. ಸೈಫ್- ಕರೀನಾ ದಂಪತಿಗಳಲ್ಲಿ ತುಸು ದೇಶಭಕ್ತಿ ಇದ್ದಿದ್ದಾರೆ ಇಲ್ಲಿನ ಹಿಂದೂ ಜನರ ಬಗ್ಗೆ ಗೌರವಿಸುತ್ತಿದ್ದರು ಮತ್ತು ತಮ್ಮ ಮಗನಿಗೆ ದಾಳಿಕೋರ ನೊಬ್ಬನ ಹೆಸರು ಇಡುತ್ತಿರಲಿಲ್ಲ.

ತಪ್ಪು ಮನವರಿಕೆ ತಕ್ಷಣ ತಮ್ಮ ಮಗನಿಗೆ ಬೇರೊಂದು ಹೆಸರು ಇಡುತ್ತಿದ್ದರು. ಆದರೆ ಇವರು ವಾಕ್ ಸ್ವಾತಂತ್ರ್ಯ ದುರುಪಯೋಗ ಪಡಿಸಿಕೊಂಡು ತಮ್ಮ ಮಗನಿಗೆ ತೈಮೂರ್ ಹೆಸರಿಟ್ಟಿರುವುದನ್ನು ಸಮರ್ಥನೆಗೆ ಮುಂದಾದರು. ಹಿಂದೂ ವಿರೋಧ ಹೇಳಿಕೆಗಳು, ಹಿಂದೂ ಧಾರ್ಮಿಕ ನಂಬಿಗಳ ಬಗ್ಗೆ ಗೌರವ ಇಲ್ಲದ ನಟಿ ಕರೀನಾ ಹಿಂದೂಗಳ ಆರಾದ್ಯ ದೈವ ಪ್ರಭು ಶ್ರೀರಾಮನ ಧರ್ಮ ಪತ್ನಿ ಯಾದ ’ಸೀತೆ’ ಕುರಿತಾದ ಚಿತ್ರದಲ್ಲಿ ನಾಯಕಿ ’ಸೀತಾ’ ಪಾತ್ರಕ್ಕೆ ಆಯ್ಕೆ ಮಾಡಿರುವುದು ನಿಜಕ್ಕೂ ಸೋಜಿಗ.

’ಸೀತಾ’ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ತಮ್ಮ ನಿಲುವು ಬದಲಿಸಿ ಕರೀನಾಳ ಬದಲು ಬೇರೊಬ್ಬ ನಟಿಯನ್ನು ಸೀತೆ
ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು. ಹಿಂದೂ ವಿರೋಧಿ ನಟಿಯನ್ನು ಸೀತೆ ಪಾತ್ರದಲ್ಲಿ ನೋಡಲು ಯಾವೊಬ್ಬ ಹಿಂದುವೂ ನೋಡಲು ಇಚ್ಛಿಸುವುದಿಲ್ಲ.
– ಶ್ರೀರಂಗ ಪುರಾಣಿಕ್ ವಿಜಯಪುರ

ಸಲಹೆ ಪಾಲನೆ ಕರೋನಾ ನಿಯಂತ್ರಣಕ್ಕೆ ಅಸ್ತ್ರ
ಮನೆಯಲ್ಲಿ ಒಬ್ಬರು ಅಸ್ವಸ್ಥರಾದರೆ ಮನೆಯ ಯಜಮಾನ ತಕ್ಷಣ ವೈದ್ಯರ ಸಲಹೆ ಪಡೆದು ಅದನ್ನು ಗುಣ ಪಡಿಸಲು ವೈದ್ಯರು ವಿಽಸುವ ಔಷಧ ಮತ್ತು ಪಥ್ಯ ಪಾಲಿಸುತ್ತಾನೆ. ಕುಟುಂಬ ಸದಸ್ಯರಲ್ಲಿ ಯಾರೂ ಇದಕ್ಕೆ ಚಕಾರ ಎತ್ತುವುದಿಲ್ಲ. ಅದು ಬೇಡ ಇದು ಕೊಡಿ ಎಂದು ಸಲಹೆ ನೀಡಿದರೆ ಯಜಮಾನನಿಗೆ ಕೆಟ್ಟದನ್ನು ಬಯಸುವವನು ಅವನಾಗಿರಬೇಕು. ಈಗಾಗಲೇ ದೇಶದಲ್ಲೇ ಅತಿ ಹೆಚ್ಚು ಸೋಂಕಿತರಿರುವ ರಾಜ್ಯ ಎಂದು ಖ್ಯಾತವಾಗಿದೆ.

ತಮ್ಮ ಕ್ಷೇತ್ರದಲ್ಲಿ ಸೋಂಕಿನ ಪಾಸಿಟಿವಿಟಿ ಮಿತಿ ಮೀರಿದ್ದರೂ ಲಾಕ್ ಡೌನ್ ಹಿಂತೆಗೆದು ಕೊಳ್ಳಿ ಎನ್ನುವವರಿಗೆ ಸಾಂಕ್ರಮಿಕ ರೋಗದ ಭಯಾನಕತೆ ತಿಳಿದಿಲ್ಲ. ಮತ್ತು ಪಾಸಿಟಿವಿಟಿ ರೇಟ್ ತಮ್ಮದೇ ಕೈ ಚಳಕದಿಂದ ಕಡಿಮೆ ಮಾಡಿ ಲಾಕ್‌ಡೌನ್ ತೆಗೆಯಿರಿ ಎನ್ನುವವರೂ ಇರಬಹುದು. ಈ ಸಂಖ್ಯೆಯ ಸತ್ಯಾಸತ್ಯತೆ ಮೇಲೆ ನಿಗಾ ಅತಿ ಮುಖ್ಯ. ಲಾಕ್‌ಡೌನ್ ವಿಷಯದಲ್ಲಿ ತಜ್ಞರ ಸಲಹೆ ಯನ್ನು ಅವರೊಡನೆ ಚರ್ಚಿಸಿ ಅದೇ ಅಂತಿಮವಾಗಿ ಅನುಷ್ಟಾನವಾಗಲಿ.
– ಸತ್ಯಬೋಧ ಬೆಂಗಳೂರು

ಮುಂಗಾರು ಬಿತ್ತನೆ ಅನ್ನದಾತ ಚುರುಕು

ಮುಂಗಾರು ರೋಹಿಣಿ ಮಳೆಯ ಆರಂಭದಿಂದ ಬಿತ್ತನೆಕಾರ್ಯ ಆರಂಭದಿಂದಲೇ ಸುಮಾರು 30 ರಿಂದ 40 ದಿನಗಳ ಕಾಲ ನಿರಂತರ ಬಿತ್ತನೆ ಕಾರ್ಯ ನಡೆಯುತ್ತದೆ. ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಈ ಬಾರಿ ಗರಿಷ್ಠ ಉಷ್ಣಾಂಶವು ದಾಖಲಾಗಿದ್ದು ಏಪ್ರಿಲ್ -ಮೇನಲ್ಲಿ ವಾಡಿಕೆಗಿಂತ 2.30 ಸೆಲ್ಸಿಯಸ್ ಏರಿಕೆಯಾಗಿದ್ದರಿಂದ ಇದು ಮುಂಗಾರಿಗೆ ವರವಾಗಿ ಪರಿಣಮಿಸಲಿದೆ ಬಿಸಿಲಿನ ಹೆಚ್ಚಳವು ಮುಂಗಾರಿನಲ್ಲಿ ಅಧಿಕ ಮಳೆಯನ್ನು ತರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಜೂನ್ ತಿಂಗಳಲ್ಲಿ ಬೆಳೆಯುವ ಬೆಳೆ ಜೋಳ-ತೊಗರಿ, ಶೇಂಗಾ-ತೊಗರಿ ಸಾಲುಗಳ ಪ್ರಮಾಣದಲ್ಲಿ ಅಂತರ್ ಬೆಳೆಯಾಗಿ ಎರಡು ಬೆಳೆ ಪದ್ಧತಿಯನ್ನು ಅನುಸರಿಸಿದ್ದಲ್ಲಿ ಮೊದಲನೆಯ ಬೆಳೆಯಾಗಿ ಹೈಬ್ರಿಡ್ ಸಜ್ಜೆ, ಹೆಸರು, ಅಲಸಂದೆ ಅಥವಾ ಉದ್ದು ಬೆಳೆ ಗಳನ್ನು ಬಿತ್ತನೆ ಮಾಡಿ ಜುಲೈ 3ನೇ ವಾರದೊಳಗೆ ಶೇಂಗಾ, ತೊಗರಿ ಮಾಧ್ಯಮವಾದಿ ತಳಿ ರಾಗಿ, ಸಾಮೆ, ಬರಗಲ, ಹರಳು ಕೊನೆಯ ವಾರದಲ್ಲಿ ಹತ್ತಿ ಬೆಳೆಯನ್ನು ಬೆಳೆಯಬೇಕೆಂದು ಬಹುತೇಕವಾಗಿ ಎಲ್ಲರೂ ವಿಚಾರ ಮಾಡುತ್ತೇವೆ.

ಬಹುತೇಕ ನಮ್ಮ ರೈತರು ಕೃಷಿ ಕಾರ್ಯದಲ್ಲಿ ಮೈಗಳ್ಳ ತನದಿಂದ ಕೂಡಿದವರಾಗಿದ್ದಾರೆ ಹೆಚ್ಚು ಶ್ರಮಪಡುವ ಗೋಜಿಗೇಕೆ ಹೋಗಬೇಕು ಎಂಬ ನಿಲುವಿನಿಂದಾಗಿಯೇ ಕೃಷಿ ಭೂಮಿ ಬಂಜರಾಗಿದೆ. ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಜಗಕೆ ಮತ್ತು ಯುಗಕ್ಕೆ ನಿರಂತರವಾಗಿ ದವಸ ಧಾನ್ಯಗಳನ್ನು ನೀಡಬೇಕಾದ ಜವಾಬ್ದಾರಿ ರೈತರಾದ ನಮ್ಮ ಮೇಲಿದೆ ಎಂದರಿತು ನಾವು ಸದಾ
ಕ್ರಿಯಾಶೀಲರಾಗಿರಬೇಕು.
– ಅಶೋಕ್ ಉಕ್ಕಿಸಲ

ಜನರ ಸಮಸ್ಯೆಗೆ ಹೆಚ್ಚು ಗಮನಹರಿಸಿ
ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಇದೀಗ ಕರೋನಾ, ಪ್ರಕೃತಿ ವಿಕೋಪದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಬದಲು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವತ್ತ ಹೆಚ್ಚು ಗಮನಹರಿಸಿದಂತೆ. ಅಧಿಕಾರಕ್ಕೆ ಬಂದಿರುವ ಶಾಸಕರು ಹಾಗೂ ಸಚಿವರು, ಒಳಜಗಳ ಮಾಡಿಕೊಳ್ಳದೇ, ಜನರ ಅಭಿವೃದ್ಧಿಯತ್ತ ಹೆಚ್ಚು ಗಮನಹರಿಸಬೇಕಿದೆ.

ಬಿಜೆಪಿಯಲ್ಲಿ ಎದ್ದಿರುವ ಗೊಂದಲ ನಿವಾರಣೆಗೆ ಇದೀಗ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬಂದಿದ್ದಾರೆ. ಬಂದ ಕೂಡಲೇ ಸಚಿವರ ಮೌಲ್ಯಮಾಪನ ಮಾಡಲು ಶುರುಮಾಡಿದ್ದಾರಂತೆ. ಆದರೆ ಇದು ಮಾಡುತ್ತಿರುವುದು ಪಕ್ಷದೊಳಗಿನ ಆಂತರಿಕ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಹೊರತು, ಜನರ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಅಲ್ಲ. ಕರೋನಾ ಸಂಕಷ್ಟ ದಿಂದ ಈಗಾಗಲೇ ಕಂಗೆಟ್ಟಿರುವ ರಾಜ್ಯದ ಜನರಿಗೆ ಸರಕಾರದ ವತಿಯಿಂದ ಯಾವ ರೀತಿ ಪರಿಹಾರ ನೀಡಬೇಕು ಎನ್ನುವ ಬಗ್ಗೆ ಯೋಚಿಸಬೇಕಿದೆ. ಬಿಜೆಪಿ ನಾಯಕರು ಇನ್ನಾದರೂ ತಮ್ಮ ಆಂತರಿಕ ಕಿತ್ತಾಟವನ್ನು ಕೈಬಿಟ್ಟು, ರಾಜ್ಯದ ಜನರ ಆಶೋತ್ತರಗಳಿಗೆ ಉತ್ತರಿಸುವ ಕೆಲಸವನ್ನು ಮಾಡಲಿ. ಇದರೊಂದಿಗೆ ಮುಂದೆ ಬರಲಿರುವ ಮುಂಗಾರು ಮಳೆಯಿಂದ ಆಗಬಹುದಾದ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಕೆಲಸವನ್ನು ಆರಂಭಿಸಲಿ.
– ಪ್ರಸಾದ್ ಮಂಡ

Leave a Reply

Your email address will not be published. Required fields are marked *

error: Content is protected !!