Sunday, 8th September 2024

ವಿಶೇಷಚೇತನ ಅಭಿವೃದ್ದಿ ನಿಗಮ ಸ್ಥಾಪಿಸಿ

ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ವಿಕಲಚೇತನರಿದ್ದಾರೆ. ಈ ಸಮುದಾಯವು ಕೂಡ ಇತರೆ ಸಮುದಾಯಗಳಂತೆ ಶೈಕ್ಷಣಿಕವಾಗಿ,  ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯದಿಂದಲೂ ಕೂಡ ಅತಿ ಹೆಚ್ಚಾಗಿ ಹಿಂದುಳಿದಿರುವ ಒಂದು ಸಮುದಾಯವಾಗಿದೆ. ಕುಟುಂಬದವರ ನಿರ್ಲಕ್ಷ್ಯ, ಸಮಾಜದ ಕಡೆಗಣನೆ, ಎಲ್ಲಾ ರೀತಿಯ ಅವಹೇಳನಗಳನ್ನು ಸಹಿಸಿಕೊಂಡು ಮೆಟ್ಟಿ ನಿಂತು ಬದುಕ ಬೇಕಾದ ವಿಶೇಷಚೇತನರ ಹೋರಾಟದ ಬದುಕು ನಿಜಕ್ಕೂ ಶೋಚನೀಯ.

ರಾಜ್ಯದ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸರಕಾರ ವಾರ್ಷಿಕವಾಗಿ ಸಾವಿರಾರು ಕೋಟಿ ಹಣವನ್ನು ಮೀಸಲಿಟ್ಟರೂ, ಅನೇಕ ಯೋಜನೆಗಳಿಂದಲೂ ಕೂಡ ವಂಚಿತರಾಗಿದ್ದಾರೆ. ಇಂದಿಗೂ ಕೂಡ ಕಟ್ಟಕಡೆಯ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಬಿಜೆಪಿ ಸರಕಾರ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದಂತೆ ವಿಕಲಚೇತನರಿಗೂ ಕೂಡ ಅಭಿವೃದ್ಧಿ ನಿಗಮ ಸ್ಥಾಪಿಸಿ ಈ ಸಮಾಜದ ಜನರನ್ನು ಮುಖ್ಯವಾಹಿನಿಗೆ ತರುವಂಥ ಕೆಲಸ ಮಾಡಬೇಕಾಗಿದೆ.

-ಮುರುಗೇಶ ಡಿ.ದಾವಣಗೆರೆ

Leave a Reply

Your email address will not be published. Required fields are marked *

error: Content is protected !!