Sunday, 8th September 2024

ಹರಾಜು ಪ್ರಕ್ರಿಯೆ ಸಂವಿಧಾನಬದ್ಧವಲ್ಲ

ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಹಳ್ಳಿಗಳು ರಾಜಕೀಯ ಚಟುವಟಿಕೆಗಳ ಕೇಂದ್ರಗಳಾಗಿ ಮಾರ್ಪಟ್ಟಿವೆ.

ಇನ್ನು ಕೆಲವೊಂದು ಪಂಚಾಯ್ತಿಗಳ ಎಲ್ಲಾ ಸ್ಥಾನಗಳಿಗೆ ಅವಿರೋಧ ಆಯ್ಕೆ ಮತ್ತು ಹರಾಜು ಪ್ರಕ್ರಿಯೆ ನಡೆಯುತ್ತಿರುವುದು ಸರಿಯಾದ ನಡೆಯಲ್ಲ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯ್ತಿಯ ನಾಲ್ಕು ಸ್ಥಾನಗಳಿಗೆ ಬರೋಬ್ಬರಿ 26 ಲಕ್ಷ ರುಪಾಯಿಗಳಿಗೆ ಹರಾಜು ಹಾಕುವ ಗ್ರಾಮ ಪಂಚಾಯ್ತಿ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಿಜಕ್ಕೂ ಸಂವಿಧಾನ ವಿರೋಧಿ ನಡೆ.

ಪಂಚಾಯತ್ ರಾಜ್ ವ್ಯವಸ್ಥೆಯ ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ಅವಿರೋಧ ಆಯ್ಕೆ ಮತ್ತು ಹರಾಜು ಪ್ರಕ್ರಿಯೆಗಳು ಹೆಚ್ಚುತ್ತಿರುವುದು ಪ್ರಜಾಪ್ರಭುತ್ವ ಅಪವಾದವೇ ಸರಿ. ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣದ ವಿರುದ್ಧದ ಇಂಥ ಕುದುರೆ ವ್ಯಾಪಾರದ ವಿರುದ್ಧ ರಾಜ್ಯ ಚುನಾವಣೆ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ದಲಿತ, ಹಿಂದುಳಿದ ಜಾತಿಗಳನ್ನು ರಾಜಕೀಯವಾಗಿ ವಂಚಿಸಿ ಉಳ್ಳವರು ರಾಜಕೀಯ ಸರ್ವಾಧಿಕಾರ ಪ್ರದರ್ಶಿಸುತ್ತಿರುವುದು ಸಂವಿಧಾನ ವಿರೋಧಿ ಆಯ್ಕೆ ಪ್ರಕ್ರಿಯೆ ಹೊರತು ಪ್ರಜಾತಂತ್ರ ಶಾಸನಬದ್ಧವಲ್ಲ.

-ಬಾಲಾಜಿ ಕುಂಬಾರ

Leave a Reply

Your email address will not be published. Required fields are marked *

error: Content is protected !!