Sunday, 8th September 2024

ಡಾ.ಸಿ.ಎನ್.ಮಂಜುನಾಥ್ ಸಂದರ್ಶನ: ವೈದ್ಯಕೀಯ ವಲಯಕ್ಕೆ ಸಿಕ್ಕ ಗೌರವ, ಮಾನ್ಯತೆ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆರು ದಿನ ಬಾಕಿ ಇರುವಾಗ ದಸರಾ ಉದ್ಘಾಟಕರ ಹೆಸರು ಆಯ್ಕೆ ಮಾಡ ಲಾಗಿದೆ. 2020ರ ದಸರಾವನ್ನು ಕರೋನಾ ವಾರಿಯರ್ ಆಗಿರುವ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಉದ್ಘಾಟಿಸಲಿದ್ದಾರೆ. ಕರೋನಾ ವಾರಿಯರ್ಸ್‌ನಿಂದ ಈ ಬಾರಿ ನಾಡದೇವಿಗೆ ಪುಷ್ಪಾರ್ಚನೆ ಆಗಲಿದೆ. ವಿಶ್ವವಾಣಿ ಜತೆಗಿನ ಸಂದರ್ಶನದಲ್ಲಿ ಡಾ. ಸಿ.ಎನ್. ಮಂಜುನಾಥ್ ಮನದಾಳದ ಮಾತುಗಳನ್ನು ಹಂಚಿ ಕೊಂಡಿದ್ದಾರೆ.

*ದಸರಾ ಉದ್ಘಾಟನೆಗೆ ನಿಮ್ಮ ಆಯ್ಕೆ ಕುರಿತು ಏನು ಹೇಳಲು ಬಯಸುತ್ತೀರಾ?

ನಾನು ಮೈಸೂರಿನಲ್ಲಿ ಪಿಯುಸಿ ಓದುವಾಗ ಸಯ್ಯಾಜಿರಾವ್ ರಸ್ತೆಯಲ್ಲಿ ನಿಂತು ಜಂಬೂಸವಾರಿ ವೀಕ್ಷಿಸುತ್ತಿದ್ದೆ. ಆದರೆ, ಬೆಟ್ಟ ದಲ್ಲಿ ನಡೆಯುವ ಉದ್ಘಾಟನೆ ಕಾರ್ಯಕ್ರಮ ವೀಕ್ಷಿಸಿರಲಿಲ್ಲ. ಈಗ ಉದ್ಘಾಟನೆಗೆ ಅವಕಾಶ ಲಭಿಸಿದೆ. ಕರೋನಾ ವಾರಿಯರ್ಸ್ ಆದ ನನ್ನನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಸಂತಸ ಮೂಡಿಸಿದೆ. ವಿಶ್ವ ಪ್ರಸಿದ್ಧ ದಸರಾ ಸರಳವಾಗಿ ಆಚರಿಸಲು ಸರಕಾರ ಮತ್ತು ದಸರಾ ಸಮಿತಿ ನಿರ್ಧರಿಸಿದೆ.

*ಕರೋನಾ ನಡುವೆ ದಸರಾ ಆಚರಣೆ ಕುರಿತು ನಿಮ್ಮ ಅಭಿಪ್ರಾಯವೇನು?
ಕರೋನಾ ಪರಿಸ್ಥಿತಿಯಲ್ಲಿ ದಸರಾ ನಡೆಯುತ್ತಿದೆ. ಹೀಗಾಗಿ, ಸಾರ್ವಜನಿಕರು ಸರಕಾರದೊಂದಿಗೆ ಕೈ ಜೋಡಿಸಿ ಸಹಕರಿಸಬೇಕು. ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆಗಳನ್ನು ಪಾಲಿಸಬೇಕು. ಈ ಹಿನ್ನೆಲೆಯಲ್ಲಿ ಸುರಕ್ಷತೆ ಸಹ ಬಹಳ ಮುಖ್ಯ. ಸಲಹೆ ಗಳನ್ನು ಪಾಲಿಸಿದಿದ್ದರೆ ಹಬ್ಬದ ಮೂಲಕ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಸರಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಎಲ್ಲರಿಗೂ ಚಿಕಿತ್ಸಾ ಸೌಲಭ್ಯ ನೀಡಿದೆ. ಸರಕಾರದ ಜತೆ ಜನರ ಸಹಕಾರ ಬಹಳ ಮುಖ್ಯ. ಆಗ ಸೋಂಕು ನಿಯಂತ್ರಣ ಮಾಡಲು ಸಾಧ್ಯ. ಕರೋನಾಗೆ ನಿಖರವಾದ ಲಸಿಕೆ ಇಲ್ಲ. ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಸೋಂಕು ಹೇಗೆ ತಡೆಗಟ್ಟಬೇಕು ಎಂಬ ಕಾರ್ಯಾಚರಣೆ ನಡೆಯುತ್ತಿದೆ.

*ಉದ್ಘಾಟನಾ ಭಾಷಣದಲ್ಲಿ ಯಾವೆಲ್ಲ ವಿಷಯ ಪ್ರಸ್ತಾಪಿಸುತ್ತಿರಾ?
ವಿಶ್ವದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡಬೇಕಾಗುತ್ತದೆ. ಅದರಲ್ಲೂ ಕರೋನಾ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಕರೋನಾ ವಾರಿಯರ್ಸ್ ಯಾವ ರೀತಿ ಕೆಲಸ ಮಾಡುತ್ತಿದ್ದಾರೆ, ವೈದ್ಯರು ಜೀವ ಮುಡಿಪಾಗಿಟ್ಟು ಶ್ರಮಿಸು ತ್ತಿರುವುದು, ಅವರ ಮಾನಸಿಕ ಸ್ಥಿತಿಗತಿಗಳೇನು? ಜತೆಗೆ ಮೈಸೂರು ಯದುವಂಶ ರಾಜಮನೆತನದ ಕೊಡುಗೆಗಳೇನು ಎಂಬುದರ ಬಗ್ಗೆ ಪ್ರಸ್ತಾಪಿಸಲಾಗುತ್ತದೆ. ಏಕೆಂದರೆ ಮೈಸೂರಿಗೆ ತನ್ನದೆ ಆದ ಇತಿಹಾಸವಿದೆ. ಮಹರಾಜರು ಮಾಡುತ್ತಿದ್ದ ದಸರಾ ಇವತ್ತು ಜನತಾ ದಸರಾ ಆಗಿದೆ. ಜನ ಸಾಮಾನ್ಯರ ಮಹರಾಜರು ಆಗಿದ್ದರು. ಪ್ರಸಕ್ತ ವಿದ್ಯಮಾನದಲ್ಲಿ ಯಾವ ರೀತಿ ಜೀವನ ನಡೆಸಬೇಕು, ಹೇಗೆ ಬದಲಾಗಬೇಕು, ಜೀವನ ಶೈಲಿ ಹೇಗೆ ಬದಲಾಗಿದೆ. ಇದರಿಂದ ಆರೋಗ್ಯ ಸಮಸ್ಯೆೆಗಳೇನು ಈ ಕುರಿತು ಮಾತನಾಡ ಬೇಕಾಗು ತ್ತದೆ.

*ಕರೋನಾಗೆ ಚಿಕಿತ್ಸೆ ಕಂಡು ಹಿಡಿಯಲಾಗುತ್ತಿದೆಯೇ? ಹಾಗಾದರೆ ಎಷ್ಟು ದಿನಗಳಾಗಬಹುದು?

ರೋಗ ಲಕ್ಷಣಗಳು ಇರುವವರು ತುರ್ತಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ತೆಗೆದುಕೊಳ್ಳಬೇಕು. ಕರೋನಾ ಸೋಂಕಿತರಿಗೆ ಉಚಿತವಾಗಿ ಔಷಧ ನೀಡಲಾಗುತ್ತಿದೆ. ಸದ್ಯಕ್ಕೆ ನಮ್ಮಲ್ಲಿ ಲಸಿಕೆ ಇಲ್ಲ. ಲಸಿಕೆ ಕಂಡು ಹಿಡಿಯಲು ಆರೇಳು ತಿಂಗಳು ಆಗಬಹುದು. ಅಲ್ಲಿಯ ತನಕ ನಮ್ಮಲ್ಲಿರುವ ಲಸಿಕೆ ಎಂದರೆ ಮಾಸ್ಕ್. ಮಾಸ್ಕ್ ಬಳಕೆ ಸರಿಯಾಗಿರಬೇಕು. ಮಾತನಾಡುವ ಸಂದರ್ಭದಲ್ಲಿ, ಅದನ್ನು ಶುಚಿ ಗೊಳಿಸಿ ಮರು ಬಳಕೆ ಮಾಡುವ ವಿಧಾನ ತಿಳಿದಿರಬೇಕು. ಕೆಮ್ಮು, ನೆಗಡಿ ಬಂದಾಗ ಮಾಸ್ಕ್ ತೆಗೆದಾಗ ಅದರ ಬಗ್ಗೆ ಉದ್ದೇಶ ಹಾಳಾಗುತ್ತದೆ. ಸರಕಾರ ಮತ್ತು ಪ್ರಜೆಗಳ ಸಹಭಾಗಿತ್ವ ಇದ್ದರೆ ಕರೋನಾ ನಿಯಂತ್ರಣ ಮಾಡಬಹುದಾಗಿದೆ.

*ನಿಮ್ಮನ್ನು ಆಯ್ಕೆ ಮಾಡಿದ ಸರಕಾರಕ್ಕೆ ಏನು ಹೇಳಲು ಬಯಸುತ್ತೀರಾ?

ನನ್ನನ್ನು ದಸರಾ ಉದ್ಘಾಟನೆಗೆ ಆಹ್ವಾನ ನೀಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವ ಸೋಮಶೇಖರ್ ಅವರಿಗೆ ಅಭಿನಂದನೆ. ನಮ್ಮನ್ನು ಉದ್ಘಾಟನೆ ಮಾಡಲು ಆಯ್ಕೆ ಮಾಡಿರುವುದರಿಂದ ಸರಕಾರ ವೈದ್ಯಕೀಯ ವಲಯಕ್ಕೆ ಕೊಟ್ಟ ಗೌರವ ಹಾಗೂ ಮಾನ್ಯತೆ. ಸರಕಾರಕ್ಕೆ ಕರೋನಾ ವಾರಿಯರ್ಸ್ ಬಗ್ಗೆ ಇರುವ ಕಾಳಜಿ ತೋರಿಸು ತ್ತದೆ. ಇತಿಹಾಸದಲ್ಲಿ ಪ್ರಥಮ ಬಾರಿಗೆ ದಸರಾ ಉದ್ಘಾಟನೆ ಮಾಡಲು ವೈದ್ಯರಿಗೆ ಅವಕಾಶ ಕಲ್ಪಿಸಿದೆ. ಸರಕಾರ ಈ ಕ್ಷೇತ್ರವನ್ನು ಗುರುತಿಸಿದೆ. ಎಲ್ಲ ವೈದ್ಯಕೀಯ ಸಮುದಾಯ ಅವರ ಪರವಾಗಿ ಸರಕಾರಕ್ಕೆ ಧನ್ಯವಾದ ಹೇಳುತ್ತೇನೆ.

Leave a Reply

Your email address will not be published. Required fields are marked *

error: Content is protected !!