Saturday, 27th July 2024

ಜೋಗದ ಸೊಬಗು ಮರುಕಳಿಸಿ

ಅಭಿಮತ

ಕೆ.ಪ್ರಹ್ಲಾದ್ ರಾವ್

ಜೋಗದಲ್ಲಿ ಇತ್ತೀಚೆಗೆ ನೀರನ್ನು ಪಂಪ್ ಮಾಡುವುದರ ಮೂಲಕ ಗತ ವೈಭವ ಮರು ಕಳಿಸಿದೆ. ಶೇಖರಿಸಿಟ್ಟ ನೀರನ್ನು ಪಂಪ್ ಮಾಡುವುದರಿಂದ ರಾಜ್ಯದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದು ಮತ್ತೊಂದು ಅನುಕೂಲ. ಪ್ರತಿದಿನ 11 ಗಂಟೆಗಳ ಕಾಲ 1,250 ಕ್ಯೂಸೆಕ್ ನೀರನ್ನು ಬಿಡುತ್ತಿರುವುದರಿಂದ ಜೋಗದ ಕಣಿವೆಯಲ್ಲಿ ಕಾರ್ಯ ಜರುಗುತ್ತಿದೆ.

ಇದೊಂದು ಗೇಮ್ ಚೇಂಜರ್ ಆಗಿದೆ. ಇದರಿಂದ ಜೋಗದ ಪ್ರಾಂತದಲ್ಲಿ ಪರಿಸರ ಸಂರಕ್ಷಣೆ ಜತೆಗೆ ಅಭಿವೃದ್ಧಿ ಕಾರ್ಯಗಳು
ಹಿಂದೆಂದಿಗಿಂತಲೂ ಈಗ ಆಗುತ್ತಿದೆ. ಅಲ್ಲದೆ, ಜೋಗದ ಜಲಪಾತದ ವೈಭವವನ್ನು ನೋಡಲು ಪ್ರವಾಸಿಗರು ವರ್ಷ ಪೂರ್ತಿ ಭೇಟಿ ನೀಡುತ್ತಾರೆ. ಜತೆಗೆ 3489 ಮೆಗಾವ್ಯಾಟ್ ಶಕ್ತಿಯ ಉತ್ಪಾದನೆ ಆಗಿ ದಖನ್ ಪ್ರಸ್ಥಭೂಮಿಯಲ್ಲಿ ಕಳೆರಂಗೇರಿದೆ. ನೀರನ್ನು ಪಂಪ್ ಮಾಡುವ ಕಲ್ಪನೆಯು ಪುರ್ನಬಳಕೆಯ ನೀರನ್ನು ಬಳಸುವ ಮಟ್ಟವನ್ನು ಹೊಂದಿದೆ. ಈ ಕಾರ್ಯವು ಪರೋಕ್ಷವಾಗಿ ಶರಾವತಿ ಹೈಡಲ್ ಯೋಜನೆಗೆ ಸಹಾಯಕವಾಗಿದೆ. ಅಲ್ಲದೆ ಶರಾವತಿ ನೀರನ್ನು ಉಳಿಸಿದಂತೆ ಆಗಿದೆ. ಇದರ ಸ್ವಲ್ಪಭಾಗ ನೀರನ್ನು ಪ್ರತಿದಿನ ಲಿಂಗನಮಕ್ಕಿ ಅಣೆಕಟ್ಟಿಗೆ ಒದಗಿಸಿದರೆ ಅಲ್ಲಿನ ಖದರೆ ಬೇರೆಯಾಗಿರುತ್ತದೆ. 1250 ಕ್ಯೂಸೆಕ್ ನೀರನ್ನು ಕಣ್ತುಂಬಿಕೊಳ್ಳಬಹುದು.
ಈ ರೀತಿಯಾದ ಶರಾವತಿ ನೀರನ್ನು ಪಂಪ್ ಮಾಡುವ ಯೋಜನೆಯು ರಾಜ್ಯದ ಜನಕ್ಕೆ ಸಹಾಯವಾಗಲಿದೆ. ಮತ್ತೊಂದೆಡೆ ಜೋಗದ ವೈಭವ ಸದಾಕಾಲ ಇರಲಿದೆ. ಇದೊಂದು ಅದ್ಯುದ್ಭುತ ಕಲ್ಪನೆಯೇ ಸರಿ. ಈ ತೆರೆನಾದ ಯೋಜನೆಯಿಂದ  ಜೋಗ ದಲ್ಲಿನ ಪ್ರವಾಸಿತಾಣಗಳು ಜನರಿಂದ ತುಂಬಿರುತ್ತದೆ ಅಲ್ಲಿನ ವ್ಯಾಪಾರ ವಹಿವಾಟಿಗೆ ಸಹಾಯಕವಾಗುತ್ತದೆ.

1250 ಕ್ಯೂಸೆಕ್ ನೀರನ್ನು ಜೋಗಕ್ಕೆ ಬಿಡುವುದರಿಂದ ಎಲ್ಲಾ ದಿನಗಳಲ್ಲೂ ಜೋಗದ ಕನಸನ್ನು ನನಸು ಮಾಡಬಹುದು. ಜತೆಗೆ 2.000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಮಾಡಬಹುದು. ಈ ತೆರನಾದ ಜಲವನ್ನು ಕೋಯ್ಲು ಮಾಡಿದರೆ ಪ್ರಪಂಚ ದಲ್ಲಿಯೇ ಮೊಟ್ಟಮೊದಲ ಬಾರಿಗೆ ಮಾಡಿದ ಹೆಮ್ಮೆ ನಮ್ಮದಾಗುತ್ತದೆ. ಆದ್ದರಿಂದ ಸಂಬಂಧಪಟ್ಟವರು ಇದನ್ನು ಕಾರ್ಯ ರೂಪಕ್ಕೆ ತಂದರೆ ಉತ್ತೇಜನದ ಜತೆಗೆ ಜೋಗದ ಸಿರಿ ಯನ್ನು ವರ್ಷ ಪೂರ್ತಿ ಕಣ್ತುಂಬಿಕೊಳ್ಳಬಹುದಾಗಿದೆ. ಜತೆಗೆ ಪ್ರವಾಸೋದ್ಯ ಮವು ಬೆಳೆಯುತ್ತದೆ. ಹೀಗೆ ಮಾಡಿದರೆ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ.

Leave a Reply

Your email address will not be published. Required fields are marked *

error: Content is protected !!