ಅನಿಸಿಕೆ
ಬಾಲಾಜಿ ಕುಂಬಾರ
ರಾಜ್ಯದ ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರ ಮಳೆಯಾದ ಕಾರಣ ಜನಜೀವನ ಸಂಪೂರ್ಣ ತೀವ್ರ ಸಂಕಷ್ಟಕ್ಕೆ ಸಿಲುಕಿzರೆ. ರೈತರು ಬೆಳೆದ ಸೋಯಾಬಿನ್ ಬಣವೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ, ಕಟಾವಿಗೆ ಬಂದ ಕಬ್ಬು ನೆಲ ಕಚ್ಚಿದೆ.
ತೊಗರಿ, ಹತ್ತಿ, ಜೋಳ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ತುಂಬಾ ಕಂಗಾಲಾಗಿದ್ದಾರೆ. ತೀವ್ರ ಮಳೆ, ಬಿರುಗಾಳಿಯಿಂದಾಗಿ ಜನಜೀವನ ಬೀದಿಗೆ ಬಂದಿದೆ. ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿ ರಾಜ್ಯದ ಹಲವು ಭಾಗದ ಹಲವಾರು ಗ್ರಾಮಗಳು ಜಲಾವೃತ ಗೊಂಡಿವೆ. ಪುಟ್ಟ ಮಕ್ಕಳು , ವೃದ್ಧರು ಸೇರಿ ಅನೇಕ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿ ಅನ್ನ ನೀರಿಲ್ಲದೆ ಪರದಾಡು ವಂತಾಗಿದೆ.
ಕಳೆದ ಆರೇಳು ತಿಂಗಳಿಂದ ಕರೋನಾದ ಸಂಕಷ್ಟ ದಿನಗಳು ಮಾಸುವ ಮುನ್ನವೇ ಮತ್ತೆ ಈ ಅತಿವೃಷ್ಟಿ ರಾಜ್ಯಕ್ಕೆ ವಕ್ಕರಿಸಿದೆ. ಹಳ್ಳಗಳು ನದಿಗಳಂತೆ ತುಂಬಿ ಹರಿಯುತ್ತಿವೆ, ನದಿ, ಕೆರೆಗಳು ಗರಿಷ್ಠ ಮಟ್ಟ ಮೀರಿವೆ, ನೀರಿನ ರಭಸಕ್ಕೆ ರಸ್ತೆಗಳು ಸಂಪೂರ್ಣ ಕೊಚ್ಚಿಹೋಗಿವೆ. ಇದರಿಂದ ಅದೆಷ್ಟೋ ಹಳ್ಳಿಗಳ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.
ಪ್ರವಾಹಕ್ಕೆ ಒಳಗಾದ ಬಹುತೇಕ ಗ್ರಾಮಗಳ ನೂರಾರು ಮನೆಗಳು ನೆಲಕ್ಕೆ ಕುಸಿದಿವೆ. ಇನ್ನುಳಿದ ಮನೆಗಳು ನೀರುಪಾಲಾಗಿವೆ. ಹಿಂದೆಂದೂ ಕಾಣದ ಇಂತಹ ಭಯಾನಕ ಮಳೆಯ ಆರ್ಭಟಕ್ಕೆ ಜನರು ಚಿಂತಾಜನಕರಾಗಿzರೆ. ಸದ್ಯಕ್ಕೆ ‘ಬದುಕುಳಿದರೆ ಸಾಕಪ್ಪಾ’ ಎಂದು ಜೀವ ಕೈಯಲ್ಲಿ ಹಿಡಿದುಕೊಂಡು ತಮ್ಮ ಅಳಲು ತೋಡಿಕೊಳ್ಳುತ್ತಿzರೆ. ‘ಕೈಗೆ ಬಂದ ತುತ್ತು ಬಾಯಿಗೆ ಬರದಂತೆ’ ಆಗಿರುವ ರೈತರು ತುಂಬಾ ಸಂಕಷ್ಟಕ್ಕಿಡಾಗಿzರೆ. ಜನ ಜೀವನ ಮತ್ತು ಜಾನುವಾರು ರಕ್ಷಣೆಗಾಗಿ ಸರಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅನೇಕ ಕಡೆಗಳಲ್ಲಿ ಗಂಜಿಕೇಂದ್ರಗಳನ್ನು ತೆರೆಯುವಂತೆ ಮಾಡಬೇಕು.
ಅತಿವೃಷ್ಟಿಗೆ ಹಾನಿಗೊಳಗಾದ ರೈತರ ಬೆಳೆ ಸಮಗ್ರ ವರದಿಯನ್ನು ಸಂಗ್ರಹಿಸಬೇಕಾಗಿದೆ. ಅತಿವೃಷ್ಟಿ ಘೋಷಣೆ ಜತೆಗೆ ಪ್ರತಿ ಜಿಗೂ ವಿಶೇಷ ಪ್ಯಾಕೇಜ್ ಘೋಷಿಸುವ ಅಗತ್ಯವಿದೆ. ಅನೇಕ ಕಡೆಗಳಲ್ಲಿ ಮಳೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ರೈತರಿಗೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕಾಗಿದೆ. ಜಲಾವೃತಗೊಂಡಿರುವ ಗ್ರಾಮದ ಜನರಿಗೆ ರಕ್ಷಿಸಲು ಅಗತ್ಯಕ್ರಮ ಕೈಗೊಳ್ಳ ಬೇಕು. ಅತಿವೃಷ್ಟಿಗೆ ಒಳಗಾದ ಜನ – ಜಾನುವಾರು ಸಂರಕ್ಷಣೆಗಾಗಿ ಸರಕಾರ ಆದ್ಯತೆ ನೀಡಬೇಕು.