ಮುಂಬೈ: ಆರ್ಯನ್ ಖಾನ್ ಕೇವಲ ಡ್ರಗ್ಸ್ ಸೇವಿಸಲ್ಲ, ಡ್ರಗ್ಸ್ ಕಳ್ಳಸಾಗಣೆ ಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಎನ್’ಸಿಬಿ ಮಂಗಳವಾರ ಆರೋಪಿಸಿದೆ.
ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿ ಸಿ, ತಿಂಗಳ ಆರಂಭದಲ್ಲಿ ಬಂಧಿತರಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದೆ.
ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಎಂಬ ಮಹಿಳೆ ತನಿಖೆ ಯ ದಾರಿತಪ್ಪಿಸುವ ಪ್ರಯತ್ನದಲ್ಲಿ ಪ್ರಕರಣದ ಸಾಕ್ಷಿ ಮತ್ತು ಸಾಕ್ಷ್ಯಗಳನ್ನು ತಿರುಚುತ್ತಿದ್ದಾರೆ ಎಂದು ಎನ್ ಸಿಬಿ ಬಾಂಬೆ ಹೈಕೋರ್ಟ್ ಗೆ ತಿಳಿಸಿದೆ.
ಆರ್ಯನ್ ಖಾನ್ ಅವರು ಹೈಕೋರ್ಟ್ನಲ್ಲಿ ಸಲ್ಲಿಸಿದ ಜಾಮೀನು ಅರ್ಜಿಗೆ ಪ್ರತಿಕ್ರಿಯೆಯಾಗಿ ಎನ್ಸಿಬಿ ಮಂಗಳವಾರ ತನ್ನ ಅಫಿಡವಿಟ್ ಸಲ್ಲಿಸಿದೆ ಮತ್ತು ಪ್ರಕರಣದ ತನಿಖೆಯ ದಾರಿತಪ್ಪಿಸುವ ದುರುದ್ದೇಶದಿಂದ ತನಿಖೆಯನ್ನು ಹಾಳು ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಡ್ರಗ್ಸ್ ನಿಗ್ರಹ ಸಂಸ್ಥೆ ಅಫಿಡವಿಟ್ನಲ್ಲಿ ತಿಳಿಸಿದೆ.
ನ್ಯಾಯಮೂರ್ತಿ ಎನ್ ಡಬ್ಲ್ಯು ಸಾಂಬ್ರೆ ಅವರ ಏಕ ಸದಸ್ಯ ಪೀಠ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ.