Saturday, 27th July 2024

ಮತ ಬ್ಯಾಂಕ್ ತಪ್ಪುವ ಭಯದಿಂದ ರಾಹುಲ್ ರಾಮಮಂದಿರಕ್ಕೆ ಭೇಟಿ ನೀಡಲಿಲ್ಲ: ಶಾ ವಾಗ್ದಾಳಿ

ಧುಲೆ: ”ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಮತ ಬ್ಯಾಂಕ್ ಕಳೆದುಕೊಳ್ಳುವ ಭಯದಿಂದ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲಿಲ್ಲ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

”ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸುವ 370 ನೇ ವಿಧಿಯ ರದ್ದತಿಯನ್ನು ರಾಹುಲ್ ವಿರೋಧಿಸಿದರು. ಕಾಂಗ್ರೆಸ್ ನಾಯಕನ ನಿಲುವಿನ ಬಗ್ಗೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಅಭಿಪ್ರಾಯ ಏನು” ಎಂದು ಪ್ರಶ್ನಿಸಿದರು.

‘ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹಿಂದುತ್ವ ಸಿದ್ಧಾಂತವಾದಿ ವೀರ್ ಸಾವರ್ಕರ್ ಅವರನ್ನು ಅವಮಾನಿಸಿದ್ದಾರೆ. ಇದರ ಬಗ್ಗೆ ಠಾಕ್ರೆ ಏನು ಹೇಳುತ್ತಾರೆ? ನಾನು ಸ್ಪಷ್ಟೀಕರಣವನ್ನು ಬಯಸುತ್ತೇನೆ. ಸ್ಟಾಲಿನ್ ನೇತೃತ್ವದ ಡಿಎಂಕೆ ವಿಪಕ್ಷ ಬಣದ ಒಂದು ಘಟಕವಾಗಿದ್ದು, ಅವರ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ. ಉದ್ಧವ್ ಅವರನ್ನು ಒಪ್ಪುತ್ತಾರೆಯೇ?” ಎಂದು ಪ್ರಶ್ನಿಸಿದರು.

”ರಾಹುಲ್ ಗಾಂಧಿಯವರನ್ನು ನಾಯಕರನ್ನಾಗಿ 20 ಪ್ರಯತ್ನಗಳನ್ನು ಮಾಡಲಾಗಿದೆ. ಅವರು ಚಂದ್ರಯಾನವನ್ನು ಹೇಗೆ ಪ್ರಾರಂಭಿಸುತ್ತಾರೆ? ಅವರು ಅಥವಾ ಅವರ ಸರ್ಕಾರ ಎಂದಾದರೂ ಪಾಕಿಸ್ಥಾನಕ್ಕೆ ತಕ್ಕ ಉತ್ತರ ನೀಡಬಹುದೇ? ಅವರು ದೇಶದಲ್ಲಿ ನಕ್ಸಲಿಸಂ ಅಥವಾ ಭಯೋತ್ಪಾದನೆಯನ್ನು ಕೊನೆಗೊಳಿಸಬಹುದೇ? ಅವರು ಭಾರತವನ್ನು ಸಮೃದ್ಧಗೊಳಿಸಬಹುದೇ?” ಎಂದು ಪ್ರಶ್ನೆಗಳ ಸುರಿಮಳೆ ಗೈದರು.

Leave a Reply

Your email address will not be published. Required fields are marked *

error: Content is protected !!