ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಲು, ಅಧಿಕ ಫಾಲೋವರ್ಸ್‌ಗಳನ್ನು ಹೊಂದಲು ಕೆಲವರು ಅಸಾಧ್ಯವಾದ ಸಾಹಸಗಳನ್ನು ಮಾಡುವ ಮೂಲಕ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ರೀಲ್ಸ್ ಮಾಡಲು ತಮ್ಮ ಜೀವವನ್ನು ಲೆಕ್ಕಿಸದೆ ಸ್ಟಂಟ್ ಮಾಡಿ ತಮ್ಮ ಪ್ರಾಣಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ. ಇಂತಹ ಅನೇಕ ಘಟನೆಗಳು ನಡೆದರೂ ಕೂಡ ಜನರಿಗೆ ಇನ್ನೂ ಬುದ್ಧಿ ಬಂದಿಲ್ಲ. ಇತ್ತೀಚೆಗೆ ಯುವಕಯೊಬ್ಬ ರೀಲ್ಸ್‌ಗಾಗಿ ಹಾವಿನೊಂದಿಗೆ ಸ್ಟಂಟ್ ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral video)ಆಗಿದೆ.
ಮೃತ ಯುವಕನನ್ನು 23 ವರ್ಷದ ಶಿವ ಎಂದು ಗುರುತಿಸಲಾಗಿದೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬನ್ಸ್ವಾಡಾ ಮಂಡಲದ ದೇಸಾಯಿಪೇಟೆಯಲ್ಲಿ ಆರು ಅಡಿ ಉದ್ದದ ನಾಗರಹಾವೊಂದು ಜನರು ವಾಸವಿರುವ ಪ್ರದೇಶಕ್ಕೆ ಬಂದಿದೆ. ಆಗ ಸ್ಥಳೀಯರು ಭಯಭೀತರಾಗಿ ಸಹಾಯಕ್ಕಾಗಿ ಶಿವನಿಗೆ ಮಾಹಿತಿ ನೀಡಿದ್ದಾರೆ. ಈ ಪ್ರದೇಶದ ನಿವಾಸಿಯಾಗಿರುವ ಶಿವ ಹಾವನ್ನು ಹಿಡಿಯುತ್ತಿದ್ದ ಕಾರಣ ಆತ ಅಲ್ಲಿಗೆ ಬಂದು ಹಾವನ್ನು ಹಿಡಿದಿದ್ದಾನೆ. ಆದರೆ ಆತ ಅದನ್ನು ದೂರದಲ್ಲಿ ಬಿಟ್ಟು ಬರುವ ಬದಲು ಅವನು ನಾಗರಹಾವಿನೊಂದಿಗೆ ಸಾಹಸಕ್ಕೆ ಕೈ ಹಾಕಿದ್ದಾನೆ.
నోట్లో పాముతో స్టంట్.. యువకుడు మృతి
— ChotaNews (@ChotaNewsTelugu) September 6, 2024
విష సర్పంతో విన్యాసం చేస్తూ ఓ యువకుడు ప్రాణాలు పోగొట్టుకున్నాడు. కామారెడ్డి జిల్లా దేశాయిపేట గ్రామంలో ఈ ఘటన జరిగింది. గ్రామంలోని డబుల్ బెడ్ రూమ్ ఇళ్ల సముదాయంలోకి 6 ఫీట్ల నాగుపాము వచ్చింది. స్నేక్ క్యాచర్ శివ దాన్ని పట్టుకొని తల… pic.twitter.com/BicjZqimeg
ಇತರರು ಹಾವಿನೊಂದಿಗೆ ರೀಲ್ಸ್ ಮಾಡುತ್ತಿದ್ದದನ್ನು ನೋಡಿದ ಶಿವು ತಾನೂ ಕೂಡ ಹಾವಿನೊಂದಿಗೆ ರೀಲ್ಸ್ ಮಾಡುವುದಕ್ಕೆ ಮುಂದಾಗಿದ್ದಾನೆ. ಹಾವನ್ನು ತನ್ನ ಹಲ್ಲುಗಳಿಂದ ಹಿಡಿದು ಯತ್ನಿಸಿದ ಶಿವು ಅದರ ಜೊತೆ ಸಿಕ್ಕಾಪಟ್ಟೆ ಸಾಹಸಕ್ಕೆ ಮುಂದಾಗಿದ್ದಾನೆ. ಹಾವಿನೊಂದಿಗೆ ಪೋಸ್ ಕೊಟ್ಟಿದ್ದಲ್ಲದೇ ಅದನ್ನು ವಿಡಿಯೊ ಕೂಡ ಮಾಡಿದ್ದಾನೆ.ಆದರೆ ಹಾವನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡಿದ್ದಾಗ ಅದು ಕಚ್ಚಿದ್ದು ಆತನ ಅರಿವಿಗೆ ಬಂದಿರಲಿಲ್ಲ.
ಶಿವ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಾಗ ಹಾವು ಅವನನ್ನು ಕಚ್ಚಿದೆ ಎಂದು ಇತರರು ಗಮನಿಸಿದ್ದಾರೆ. ತಕ್ಷಣ ಅವನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವನು ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬಾನ್ಸ್ವಾಡಾ ಪ್ರದೇಶ ಆಸ್ಪತ್ರೆಗೆ ಸಾಗಿಸಲಾಯಿತು.
ಇದನ್ನೂ ಓದಿ:ಯುವತಿಯ ಕರೆಗೆ ಓಗೊಟ್ಟು ಹೋಟೆಲ್‌ಗೆ ಹೋದ ಯುವಕ; ಮುಂದೆ ನಡೆದದ್ದೇ ಬೇರೆ…
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾವಿನಂತಹ ವಿಷಜಂತುಗಳ ಜೊತೆ ಸರಸವಾಡುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ವಿಡಿಯೊ ತಿಳಿಸುತ್ತದೆ. ಅದಕ್ಕಾಗಿಯೇ ನಮ್ಮ ಹಿರಿಯರು ಹಾವಿನೊಂದಿಗೆ ಎಂದಿಗೂ ಸರಸವಾಡಬೇಡಿ ಎಂದು ಬುದ್ಧಿ ಹೇಳುತ್ತಿದ್ದರು!