ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಬ್ಬ ಭಕ್ತನಿದ್ದನು. ಅವನು ಭಗವಂತನ ಹೆಸರು ಜಪಿಸುತ್ತ ಜೀವನ ಕಳೆಯುತ್ತಿದ್ದ. ಆದರೆ, ಭಗವಂತನಿಂದ ಎಂದೂ
ಏನನ್ನೂ ಬೇಡಿರಲಿಲ್ಲ. ಒಂದು ದಿನ ಅವನು ಶ್ರೀಕೃಷ್ಣನ ಗುಡಿಗೆ ಹೋದ. ಆದರೇನು ಅಲ್ಲಿ ಅವನಿಗೆ ಭಗವಂತ ಕಾಣಲೇ ಇಲ್ಲ. ಆಗ ಅವನು ತನ್ನ ಸುತ್ತಲಿದ್ದ ಭಕ್ತರಲ್ಲಿ ಕೇಳತೊಡಗಿದ ಭಕ್ತ: ‘ಇಂದು ಭಗವಂತ ಎಲ್ಲಿ ಹೋದ..??’ ಆ ಜನವೆಲ್ಲ ಅವನಿನ್ನು ಕುತೂಹಲದಿಂದ ನೋಡ ತೊಡಗಿದರು.
ಜನರು: ‘ಇದೇನು.. ಭಗವಂತ ಇಲ್ಲೇ ಇದ್ದಾನಲ್ಲ..! ನಿನ್ನ ಎದುರ..!, ನಿನಗೆ ಕಾಣುತ್ತಿಲ್ಲವೇ..? ಕುರುಡುನಾಗಿರು ವೆಯೇನು’ ಎಂದು ಹೇಳಿದರು. ‘ನಾನು ಇದೆಲ್ಲ ನೋಡುತ್ತಿರುವೆ. ನನಗಿದೆಲ್ಲ ಕಾಣುತ್ತಿದೆ. ಆದರೆ, ಭಗವಂತ ಮಾತ್ರ ಕಾಣಲೋಲ್ಲ. ಇದು ಹೀಗೇಕೆ..!? ಅವನ ಮಾತು ಕೇಳಿ ಅವರ ಅಂತಃಕರಣ ಪಾಪಪ್ರಜ್ಞೆಯಿಂದ ತುಂಬಿ ಬಂದಿತು. ಅವರು ಯೋಚಿಸತೊಡಗಿದರು. ಆತ ಯೋಚಿಸತೊಡಗಿದ ‘ನನ್ನ ತಲೆಯ ಮೇಲೆ ಪಾಪದ ಹೊರೆ ಹೆಚ್ಚಾಗಿದೆ.
ಹೀಗಾಗಿ ನನಗೆ ಭಗವಂತ ಕಾಣುತ್ತಿಲ್ಲ. ಭಗವಂತನ ಯಾವ ಸೇವೆಗೂ ಬಾರದ ಈ ಶರೀರ ಅಂತ್ಯಗೊಳಿಸುವೆ. ಕೊನೆಗೂ ಇಂಥ ಶರೀರದ ಉಪಯೋಗವಾದರೂ ಏನು..?’ ಎಂದು ಯೋಚಿಸಿ ಅವನು ಯಮುನೆಯಲ್ಲಿ ಮುಳು ಗಲು ಹೊರಟ. ಅದೇ ಸಮಯದಲ್ಲಿ ಅಂತರ್ಯಾಮಿ ಭಗವಂತನು ಒಬ್ಬ ಬ್ರಾಹ್ಮಣನ ವೇಷ ಧರಿಸಿ ಕುಷ್ಟ ರೋಗಿ ಯೊಬ್ಬನ ಬಳಿ ತಲುಪಿ ‘ಹೀಗೆ ಈ ರೀತಿಯಾಗಿ ಒಬ್ಬ ಭಕ್ತ ಯಮುನೆಯಲ್ಲಿ ಮುಳುಗಿ ತನ್ನನ್ನು ಅಂತ್ಯ ಗೊಳಿಸಲು ಹೊರಟಿzನೆ. ಅವನ ಆಶೀರ್ವಾದದಲ್ಲಿ ಬಹಳ ಶಕ್ತಿ ಇದೆ. ಅವನು ನಿನಗೆ ಆಶೀರ್ವಾದ ಮಾಡಿದರೆ ನಿನ್ನ ಕುಷ್ಟ ರೋಗವು ಕೂಡಲೇ ನಿರ್ನಾಮವಾಗುವುದು’ ಎಂದು ಹೇಳಿದ.
ಬ್ರಾಹ್ಮಣ ಹೇಳಿದ ಮಾತು ಕೇಳಿ ಆ ಕುಷ್ಟ ರೋಗಿಯು ಯಮುನೆಯ ಹತ್ತಿರ ಧಾವಿಸಿ ಹೋದ. ಅಲ್ಲಿ ಆ ಭಕ್ತನನ್ನು ಕುಷ್ಟರೋಗಿಯು ಅವನ ಕಾಲು ಹಿಡಿದು ಆಶೀರ್ವಾದ ಕೇಳ ತೊಡಗಿದ. ಆಗ ಭಕ್ತನು ಹೇಳುತ್ತಾನೆ: ‘ಸಹೋದರ, ನಾನೇ ಪಾಪಿ, ಭಗವಂತನನ್ನು ಕಾಣದೆ ಕಂಗಾಲಾಗಿದ್ದೇನೆ! ನನ್ನ ಆಶೀರ್ವಾದದಿಂದ ನಿನಗೆನಾಗಬೇಕಿದೆ..!?’ ಆದರೂ ಒಪ್ಪದ ಆ ಕುಷ್ಟ ರೋಗಿಯು ಆ ಭಕ್ತನ ಕಾಲು ಹಿಡಿದು ನಾನಾ ವಿಧವಾಗಿ ಆಶೀರ್ವಾದ ಮಾಡಲು ವಿನಂತಿಸುತ್ತಲೇ ಇದ್ದ. ಕೊನೆಗೆ ಆ ಭಕ್ತನು, ‘ಭಗವಂತ ನಿನ್ನ ಇಚ್ಛೆ ಪೂರ್ಣಗೊಳಿಸಲಿ’ ಹೀಗೆ ಹೇಳುತ್ತಲೇ ಅವನ ಕುಷ್ಟವು ಮಾಯವಾಗಿ ಹೋಯಿತು.
ಇದನ್ನು ನೋಡಿದ ಭಕ್ತ: ‘ಈ ಚಮತ್ಕಾರ ಹೇಗಾಯಿತು..!?’ ಎಂದು ಅಚ್ಚರಿಯಿಂದ ಸ್ತಬ್ದನಾಗಿ ನಿಂತುಬಿಟ್ಟ.
ಅದೇ ಕ್ಷಣ ಅಲ್ಲಿ ಸಾಕ್ಷಾತ್ ಭಗವಂತ ಪ್ರತ್ಯಕ್ಷನಾದ. ತನ್ನ ಕಣ್ಣಿಂದ ಭಗವಂತನನ್ನು ನೋಡಿ ತನ್ನನ್ನು ತಾನು
ನಿಯಂತ್ರಿಸದಾದ ಆ ಭಕ್ತ. ಅಳುತ್ತಳುತ್ತಾ ಭಗವಂತನ ಚರಣಗಳ ಮೇಲೆ ಬಿದ್ದುಬಿಟ್ಟ. ಭಗವಂತ ಅವನನ್ನು ಎದ್ದು ನಿಲ್ಲಿಸಿದ. ಆಗ ಆ ಭಕ್ತನು ಭಗವಂತನನ್ನು ಕೇಳಿದ ‘ಪರಮಾತ್ಮನೇ, ಇದೆಂಥ ಲೀಲೆ ಮೊದಮೊದಲು ಗುಡಿಯಲ್ಲಿ ಕಾಣಲಿಲ್ಲ. ಮತ್ತು ಈಗ ಇಲ್ಲಿ ಅನಾಯಾಸವಾಗಿ ನಿನ್ನ ದರ್ಶನ ಪ್ರಾಪ್ತವಾಯಿತು..!’ ಅದಕ್ಕೆ ಭಗವಂತ ಹೇಳಿದ ‘ಮಗನೇ ಜೀವನಪೂರ್ತಿ ನೀ ನನ್ನ ಜಪ ಮಾಡಿದೆ, ಯಾವತ್ತೂ ಏನನ್ನೂ ನನ್ನ ಬಳಿ ಕೇಳಲಿಲ್ಲ.
ಹೀಗಾಗಿ ನನ್ನ ಮೇಲೆ ನಿನ್ನ ಋಣಭಾರ ಬಹಳವಾಗಿತ್ತು. ಆದ್ದರಿಂದ ನಿನ್ನ ಮುಂದೆ ಬರಲು ನನಗೆ ಸಂಕೋಚ ಎನಿಸುತ್ತಿತ್ತು. ಇಂದು ನೀನು ಆ ಕುಷ್ಟರೋಗದವನನ್ನು ಉದ್ಧರಿಸಲು ಆಶೀರ್ವಾದ ಮಾಡಿದ್ದರಿಂದ ಆ ಪುಣ್ಯದ -ಲದಲ್ಲಿ ಸ್ವಲ್ಪವಾಗಿ ನೀನು ಬೇಡಿದಂತಾಯಿತು. ಅದರಿಂದ ನಾನು ಸ್ವಲ್ಪ ಋಣಮುಕ್ತನಾಗಿ ನಿನ್ನ ಮುಂದೆ
ಪ್ರಕಟನಾದೆ’.
ಆಗ ಆ ಭಕ್ತನ ಅಂತಕರಣ ತುಂಬಿ ಬಂದಿತು. ಭಗವಂತನ ನಾಮ ಸ್ಮರಣೆ ಮಾಡಿಯೂ ಅವನಿಂದ ಯಾವ
ಫಲವನ್ನು ಅಪೇಕ್ಷಿಸದೆ ಇರುವ ಭಕ್ತರೇ ಧನ್ಯರು. ಅಂಥವರಿಗೆ ಆ ಭಗವಂತನೇ ಋಣಿಯಾಗಿ ಇರುತ್ತಾನೆ. ಅಂಥವರ ಪಾದ ಮುಟ್ಟಿ ಆಶೀರ್ವಾದ ಪಡೆದರೆ ಅದಕ್ಕಿಂತ ಹೆಚ್ಚಿನ ಸೌಭಾಗ್ಯ ಇನ್ನೊಂದಿಲ್ಲ. ಇಂತಹ ಭಕ್ತಿ ನಮ್ಮೆಲ್ಲರದ್ದೂ ಆಗಲಿ.
ಇದನ್ನೂ ಓದಿ: #RoopaGururaj