Wednesday, 6th December 2023

ಚಿತ್ರೀಕರಣ ಮುಗಿಸಿದ ಶಭಾಷ್ ಬಡ್ಡಿಮಗ್ನೆ

ಕಿಶನ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಕಾಶ್ ನಿರ್ಮಿಸುತ್ತಿರುವ ಶಭಾಷ್ ಬಡ್ಡಿಮಗ್ನೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮೂಡಿಗೆರೆಯ ಕೊಟ್ಟಿಗೆಹಾರ, ಬಾಳೂರು, ಕೊಡಿಗೆ ಜಲಪಾತ ಸುತ್ತಮತ್ತಲಿನ ಸುಂದರ ಪರಿಸರದಲ್ಲಿ ಶೂಟಿಂಗ್ ನಡೆಸಲಾಗಿದೆ.

ಬಿ.ಎಸ್.ರಾಜಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ತನ್ನ ವಿಭಿನ್ನ ರೀತಿಯ ವರ್ತನೆಯಿಂದಾಗಿ ಇಲ್ಲಿ ಶಭಾಷ್ ಬಡ್ಡಿಮಗ್ನೆ ಅನಿಸಿಕೊಂಡರೆ, ನಾಯಕಿಯಾಗಿ ಪ್ರಿಯಾ ಬಣ್ಣಹಚ್ಚಿದ್ದಾರೆ.

ಸಾಮ್ರಾಟ್ ಶೆಟ್ಟಿ ಹಾಗೂ ಕಾವ್ಯಶ್ರೀ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಂಕರ್ ಅಶ್ವತ್ಥ್, ರವಿತೇಜ, ಮಿತ್ರ, ಪ್ರಕಾಶ್ ತುಮ್ಮಿನಾಡು, ರಮೇಶ್ ರೈ ಕುಕ್ಕವಳ್ಳಿ, ಈಶ್ವರ್ ಶೆಟ್ಟಿ, ಮೂಗು ಸುರೇಶ್, ಶೋಭಾ ಶೆಟ್ಟಿ, ಸುಧಾ, ಸವಿತಾ, ಗೀತಾ ವಸಂತ್, ಮಮತಾ ರಾಜಶೇಖರ್ ಹೀಗೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಚಿತ್ರದಲ್ಲಿ ನಾಲ್ಕು ಹಾಡು ಗಳಿದ್ದು ಎಸ್.ಪಿ.ಭೂಪತಿ ಸಂಗೀತ ಸಂಯೋಜಿಸಿದ್ದಾರೆ.

ಕವಿರಾಜ್ ಹಾಗೂ ನಿರ್ದೇಶಕ ರಾಜಶೇಖರ್ ಸಾಹಿತ್ಯ ರಚಿಸಿದ್ದಾರೆ. ಛಾಯಾಗ್ರಹಣ ಅಣಜಿ ನಾಗರಾಜ್ ಅವರದಾಗಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಶಭಾಷ್ ಬಡ್ಡಿ ಮಗನೇ ತೆರೆಗೆ ಬರಲಿದೆ.

error: Content is protected !!