ಮಹಿಳೆಯರ ದಿನಚರಿಗೆ ಅವಶ್ಯ ಎನಿಸಿದ ಪರಿಕರಿವಾಗಿ ಪರಿಚಯಗೊಳ್ಳುತ್ತಿರುವ ಈ ಕಪ್‌ನ್ನು ತಯಾರಿಸುವ ದಿಟ್ಟ ಹೆಜ್ಜೆ ಇಟ್ಟ ಈ ಯುವತಿಯದ್ದು ಒಂದು ಸಾಹಸೋದ್ಯಮವೇ ಸರಿ.
ವಿನುತಾ ಹೆಗಡೆ ಶಿರಸಿ
ಮಹಿಳೆಯರ ಬದುಕಲ್ಲಿ ತಿಂಗಳಲ್ಲಿ ಬರುವ ನಾಲ್ಕು ದಿನದ ಮುಟ್ಟು ಕಿರಿಕಿರಿಯ ನೋವು. ಇದನ್ನು ಅನುಭವಿಸುವ ಮಹಿಳೆ
ಯರಿಗೇ ಗೊತ್ತು ಅದೆಂತಹ ಶಿಕ್ಷೆ ಎಂದು. ಈ ದಿನಗಳಲ್ಲಿ ಮಹಿಳೆಯರಿಗೆ ಇದೊಂದು ಸವಾಲೇ ಸರಿ.
ದೈಹಿಕ ಕಿರಿಕಿರಿ ಸಹಿಸಿಕೊಂಡು ಮಾನಸಿಕ ಧೈರ್ಯ ತಂದುಕೊಂಡು ಕಾರ್ಯ ನಿರ್ವಹಿಸುವ ತಾಳ್ಮೆ ಹೇಳಿಕೊಳ್ಳುತ್ತಿರುವಂತ ದ್ದಲ್ಲದಿದ್ದರೂ ಅದು ಸಾಮಾನ್ಯ ಮಹಿಳೆಯ ಅಸಾಮಾನ್ಯ ಗಟ್ಟಿತನವಂತೂ ಹೌದು. ಮುಟ್ಟಿನ ಸಮಯದಲ್ಲಿ ಕಲೆ ಬಟ್ಟೆಯಲ್ಲಿ ತಗಲದಂತೆ ಹೆಣ್ಣುಮಕ್ಕಳು, ಮಹಿಳೆಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಆದರೆ, ಈ ಪ್ಯಾಡ್‌ಗಳನ್ನು ಹೆಚ್ಚಾಗಿ ಪ್ಲಾಸ್ಟಿಕ್ ಗಳಿಂದ ನಿರ್ಮಿಸಲಾಗಿದ್ದು, ಅಪಾಯಕಾರಿ ರಸಾಯನಿಕಗಳನ್ನು ಇದರಲ್ಲಿ ಬಳಸ್ತಾರೆ.
ಇದರಿಂದಾಗಿ ಕ್ಯಾನ್ಸರ್, ಸಂತಾನವಾಗದಿರೋದು, ಗರ್ಭಕೋಶದ ಸಮಸ್ಯೆ ಹಾಗೂ ಇತರ ಸ್ತ್ರೀ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ, ಪರಿಸರಕ್ಕೂ ಇದು ಬಹಳಷ್ಟು ಮಾರಕವಾಗಿದೆ. ಈ ಕಾರಣದಿಂದಾಗಿ ಇಲ್ಲೋರ್ವ ಯುವತಿ ಈ ಉತ್ಪನ್ನಕ್ಕೆ ಪರ್ಯಾಯವಾಗಿ ಹಾಗೂ ಆರೋಗ್ಯಯುತವಾದ ಪ್ರಾಡಕ್ಟ್ ತಯಾರು ಮಾಡಿದ್ದಲ್ಲದೇ, ಮಹಿಳೆಯರು, ಕಾಲೇಜು ಯುವತಿಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾಳೆ.
ಆರೋಗ್ಯ ಹಾಗೂ ಪರಿಸರಕ್ಕೆ ಹಾನಿ ಮಾಡೋ ಸ್ಯಾನಿಟರಿ ಪ್ಯಾಡ್ ಬದಲು ಕಾಂಫಿ ಕಪ್ ತಯಾರಿಕೆಗೆ ಕೈ ಹಾಕಿದ್ದಾರೆ ಉತ್ತರ ಕನ್ನಡದ ದಿವ್ಯಾ ಗೋಕರ್ಣ. ಮಹಿಳೆಯರು ಬಳಸೋ ಸ್ಯಾನಿಟರಿ ಪ್ಯಾಡ್ ಹೆಚ್ಚಾಗಿ ಪ್ಲಾಸ್ಟಿಕ್‌ಗಳಿಂದ ಮಾಡಲ್ಪಟ್ಟಿದೆ ಹಾಗು ಇದರಲ್ಲಿ ಹಲವು ಕೆಮಿಕಲ್‌ಗಳನ್ನು ಬಳಸಲಾಗುತ್ತದೆ.
ಇದರಿಂದಾಗಿ ಸರಿಯಾದ ಸಮಯದಲ್ಲಿ ಮುಟ್ಟಾಗದಿರೋದು, ತುರಿಕೆ, ರ್ಯಾಷಸ್, ಸಂತಾನವಾಗದ ಸಮಸ್ಯೆ, ಗರ್ಭಕೋಶದ ಸಮಸ್ಯೆ, ಸರ್ವಿಕ್ಸ್, ಯುಟೇರಿಯನ್ ಕ್ಯಾನ್ಸರ್ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಪ್ಲಾಸ್ಟಿಕ್ ಹಾಗೂ ಕೆಮಿಕಲ್
ಬಳಸುವುದರಿಂದ ಪರಿಸರಕ್ಕೆ ಹಾನಿ. ಈ ಕಾರಣದಿಂದ ಸ್ಯಾನಿಟರಿ ಪ್ಯಾಡ್‌ಗಳಿಗೆ ಪರ್ಯಾಯವಾಗಿ ಉತ್ತರಕನ್ನಡ ಜಿಲ್ಲೆಯ ಶಿರಸಿಯ ನಿವಾಸಿ ದಿವ್ಯಾ ಗೋಕರ್ಣ ತಾವೇ ಖುದ್ದಾಗಿ ಇಂಡಿಯಾ ಮೇಡ್ ಉತ್ಪನ್ನವನ್ನು ತಯಾರಿಸುತ್ತಿದ್ದಾರೆ. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಮಾಡಿರುವ 29 ವರ್ಷದ ದಿವ್ಯಾ, ಉಷಾ ಗೋಕರ್ಣ ಹಾಗೂ ದಿವಂಗತ ರಾಜು ಗೋಕರ್ಣ ಅವರ ಇಬ್ಬರು ಮಕ್ಕಳಲ್ಲಿ ಕಿರಿಯವರು. ವುಮನ್ ಎಂಪವರ್ ಮೆಂಟ್ ವಿಷಯದಲ್ಲಿ ಡಿಪ್ಲೋಮಾ ಕೂಡಾ ಮಾಡುತ್ತಿದ್ದಾರೆ.
ಬಹುಕಾಲ ಬಾಳಿಕೆ
ಈಕೆ ಉತ್ಪಾದಿಸುತ್ತಿರೋ ಈ ಉತ್ಪನ್ನದ ಹೆಸರು ಕಾಂಫಿ ಕಪ್. ಮೆಡಿಕಲಿ ಅಪ್ರೂವ್ಡ್ ಸಿಲಿಕಾನ್‌ನಿಂದ ನಿರ್ಮಿಸಲ್ಪಟ್ಟ ಈ ಕಾಂಫಿ
ಕಪ್, ಮಟ್ಟಿನ ಸಮಯದಲ್ಲಿ ಮಹಿಳೆಯರು ಧರಿಸಬಹುದಾದ ಆರೋಗ್ಯಕರ ಹಾಗೂ ಸುರಕ್ಷಿತ ಉತ್ಪನ್ನ. ಸಾಮಾನ್ಯವಾಗಿ
ಒಂದು ತಿಂಗಳಲ್ಲಿ ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು, ಮಹಿಳೆಯರು 10-12 ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಪ್ರತೀ
ತಿಂಗಳು ಇದಕ್ಕೆ ಅಷ್ಟೇ ಬೆಲೆ ಕೊಟ್ಟು ಖರೀದಿಸಬೇಕು. ಆದರೆ, ಕಾಂಫಿ ಕಪ್ ಒಂದು ಬಾರಿ ಖರೀದಿಸಿದರೆ ಸುಮಾರು 10 ವರ್ಷಗಳ ಕಾಲ ಉಪಯೋಗಿಸಬಹುದಾಗಿದೆ. ಕಳೆದ ಒಂದು ವರ್ಷ ದಿಂದ ಈ ಕಾಂಫಿಕಪ್ ತಯಾರಿ ಬಗ್ಗೆ ಸಿದ್ಧತೆ ನಡೆಸುತ್ತಿದ್ದ ದಿವ್ಯಾ, ಕಳೆದ 5 ತಿಂಗಳಿಂದ ಇದನ್ನು ಬೆಂಗಳೂರಿನ ತಮ್ಮ ಘಟಕದಲ್ಲಿ ತಯಾರಿಸಿ, ಇದರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಈಗಾಗಲೇ ಸುಮಾರು 8 ಮಂದಿ ಮಹಿಳೆಯರು ಇವರಡಿಯಲ್ಲಿ ಕೆಲಸ ಮಾಡುತ್ತಿದ್ದು, ಮೆಡಿಕಲ್ ರೆಪ್ರೆಸೆಂಟೇಟಿವ್ಸ್ ಇವುಗಳನ್ನು ಮಾರಾಟ ಕೂಡಾ ಮಾಡುತ್ತಿದ್ದಾರೆ. ಈ ಕಾಂಫಿಕಪ್ ಉತ್ಪನ್ನ ತಯಾರಿಯ ಹಿಂದೆ ದಿವ್ಯಾ ಗೋಕರ್ಣ ಅವರ ಬೇರೆಯೇ ಅನುಭವವಿದೆ. ಸ್ಯಾನಿಟರಿ ಪ್ಯಾಡ್ ಬಳಕೆಯಿಂದ ಸಮಸ್ಯೆ ಆಗುವುದು ಅವರಿಗೆ ತಿಳಿದಿತ್ತು. ಇದಕ್ಕೆ ಪರಿಹಾರಾರ್ಥವಾಗಿ ಸಾಮಾಜಿಕ ಜಾಲತಾಣದಲ್ಲಿ ಹುಡುಕಿ, ‘ಮೆನ್‌ಸ್ಟ್ರುವಲ್ ಕಪ್’ ಬಗ್ಗೆ ತಿಳಿದುಕೊಂಡರು.
ಆನ್‌ಲೈನ್ ಮೂಲಕ ಈ ಕಪ್‌ಅನ್ನು ಖರೀದಿಸಿ ಬಳಸಿದರಾದರೂ, ಅದು ತುಂಬಾ ಒರಟಾಗಿತ್ತು. ಈ ಕಪ್‌ಗಳಲ್ಲೂ ಬೇರೆ
ಬೇರೆ ಬ್ರಾಂಡ್‌ಗಳಿವೆ ಎಂದು ಅರಿತ ಅವರು, ಆನ್‌ಲೈನ್‌ನಲ್ಲಿ ಸಿಗೋ ಶೇ. 98ರಷ್ಟು ಬ್ರಾಂಡ್‌ಗಳು ಚೀನಾದಿಂದ ಅಮದು
ಮಾಡಲಾಗುವಂತದ್ದು ಎಂಬ ಮಾಹಿತಿ ಪಡೆದುಕೊಂಡರು.
ಸ್ಥಳೀಯ ತಯಾರಿಕೆ
ಒಂದು ಮೆನ್‌ಸ್ಟ್ರುವಲ್ ಕಪ್‌ಗಾಗಿ ಚೀನಾವನ್ನು ಯಾಕೆ ಅವಲಂಬಿಸಬೇಕು? ಸ್ಥಳೀಯವಾಗಿ ನಾವೇ ಯಾಕೆ ತಯಾರಿಸ
ಬಾರದು ಎಂದು ತನ್ನಲ್ಲೇ ತಾನೇ ಪ್ರಶ್ನಿಸಿ ಭಾರತೀಯ ಬ್ರಾಂಡ್ ತಯಾರಿಸೋ ನಿರ್ಧಾರಕ್ಕೆ ಬಂದರು. ಅಹ್ಮದಾಬಾದ್‌ನ ಈ
ಕಪ್‌ಗಳನ್ನು ತಯಾರಿಸೋ ಘಟಕವನ್ನು ಸಂಪರ್ಕಿಸಿದ ದಿವ್ಯಾ, ಅವರಿಂದ ಮಾಹಿತಿ ಪಡೆದು ಬೆಂಗಳೂರಿನಲ್ಲಿ ತನ್ನದೇ ಘಟಕ
ಸ್ಥಾಪಿಸಿದ್ದಾರೆ. ಅಲ್ಲಿಂದ ಉತ್ಪನ್ನ ಶಿರಸಿಗೆ ವರ್ಗಾಯಿಸಲ್ಪಡುತ್ತಿದ್ದು, ಜಿಲ್ಲೆಯ ಹೆಣ್ಣು ಮಕ್ಕಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಶಿರಸಿಯಲ್ಲಿ ಇವುಗಳು ಪೌಚ್, ಪ್ಯಾಕಿಂಗ್ ಆಗಿ ಬಳಿಕ ರಾಜ್ಯದಲ್ಲಿ ವಿವಿಧೆಡೆ ಅಗತ್ಯವಿದ್ದವರ ಕೈ ಸೇರುತ್ತಿದೆ.
ಪ್ರತೀ ತಾಲೂಕು, ಜಿಲ್ಲೆಯ ಜನರಿಗೆ ಉಚಿತ ಮಾಹಿತಿ ನೀಡುತ್ತಿರುವ ದಿವ್ಯಾ, ಈ ಕಾಂಫಿ ಕಫ್‌ನ ಉಪಯೋಗಗಳ ಬಗ್ಗೆ ಮಾಹಿತಿ ಕೂಡಾ ನೀಡುತ್ತಿದ್ದಾರೆ. ಈ ಕಾಂಫಿ ಕಪ್‌ಗಳನ್ನು 10 ವರ್ಷಗಳ ಬಳಸಬಹುದಾಗಿದ್ದು, ಮುಟ್ಟಾದ ಸಮಯದಲ್ಲಿ ನಿರಂತರ 12 ಗಂಟೆಗಳ ಕಾಲ ಬಳಸಬಹುದು. ಯಾವುದೇ ಚಟುವಟಿಕೆಯಲ್ಲಿ ತೊಡಗಿದರೂ ಯಾವ ರೀತಿಯ ಸಮಸ್ಯೆ ಯೂ ಆಗುವುದಿಲ್ಲ. 12 ಗಂಟೆಗಳ ಬಳಿಕ ಇದನ್ನು ಸ್ವಚ್ಛಗೊಳಿಸಿ ಬಿಸಿ ನೀರಿನಲ್ಲಿ ಹಾಕಿ ಮತ್ತೆ ಉಪಯೋಗ ಮಾಡಿಕೊಳ್ಳಬಹುದು.
ದಿವ್ಯಾ ಅವರ ಈ ಕಾರ್ಯಕ್ಕೆ ಸರಕಾರಿ ವೈದ್ಯರು, ಶಿಕ್ಷಕಿಯರು ಕೂಡಾ ಸಾಥ್ ನೀಡುತ್ತಿದ್ದಾರೆ. ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಹಾಗೂ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ದೇಸೀಯ ಆರೋಗ್ಯಕರ ಉತ್ಪನ್ನ ಕಾಂಫಿ ಕಪ್ ತಯಾರಿಸುತ್ತಿರುವ ದಿವ್ಯಾ ಗೋಕರ್ಣ ಅವರ ಉದ್ದೇಶ ನಿಜಕ್ಕೂ ಅನನ್ಯ.
ಆರೋಗ್ಯಕರ
ಈ ಕಾಂಫಿಕಪ್‌ನಲ್ಲಿ ಸೈಜ್‌ಗಳಿದ್ದು, ವೈದ್ಯರು ಕೂಡಾ ಇವುಗಳನ್ನು ಬಳಸಲಾರಂಭಿಸಿದ್ದಾರೆ. ಆಯುರ್ವೇದ ವೈದ್ಯ ಡಾ.ರವಿ ಕಿರಣ್ ಪಟವರ್ಧನ್ ಹೇಳುವ ಪ್ರಕಾರ ಇದು ಮಹಿಳೆಯರಿಗೆ ಉತ್ತಮ ಕಪ್ ಆಗಿದ್ದು, ಇದರ ಬಳಕೆಯ ಸಮಯದಲ್ಲಿ ಮಾತ್ರ ಸರಿಯಾಗಿ ಕ್ರಮ ಕೈಗೊಳ್ಳಬೇಕು ಅಲ್ಲದೇ ಅದರ ಸ್ವಚ್ಛತೆಯ ಬಗ್ಗೆೆಯೂ ಗಮನ ಹರಿಸಬೇಕು ಎಂದು.
ಕೋಟ್
ಇದನ್ನು ಕೇವಲ ಬ್ಯುಸಿನೆಸ್ ಆಗಿ ಮುಂದುವರಿಸುವ ಬದಲು, ಸಮಾಜಕ್ಕೆ, ಪರಿಸರಕ್ಕೆ ಕೊಡುಗೆಯಾಗಿ ನೀಡಬೇಕು ಅನ್ನೋದು ಉದ್ದೇಶ. ನಾನು ಒಂದು ಹಂತ ತಲುಪಿದ ಬಳಿಕ ಬಡ ಜನರಿಗೆ ಇವುಗಳನ್ನು ಉಚಿತವಾಗಿ ನೀಡಬೇಕೆನ್ನುವ ಉದ್ದೇಶ ಕೂಡಾ ಹೊಂದಿದ್ದೇನೆ
– ದಿವ್ಯಾ ಗೋಕರ್ಣ