ಮಂಜುನಾಥ.ಕೆ ಬೆಂಗಳೂರು
ಒಂದೇ ಸೂರಿನ ಅಡಿ ಎಲ್ಲಾ ವಸ್ತುಗಳನ್ನು ಖರೀದಿಸಬಹುದಾದ ಮತ್ತು ಮನರಂಜನೆಯನ್ನು ಸಹ ಪಡೆಯಬಹುದಾದ ಮಾಲ್
ಸಂಸ್ಕೃತಿಯು ಇಂದು ನಗರಗಳ ಮುಖ್ಯ ಆಕರ್ಷಣೆ ಎನಿಸಿದೆ.
ಸಣ್ಣ ಗುಂಡು ಸೂಜಿಯಿಂದ ಹಿಡಿದು ದೊಡ್ಡ ಗಾತ್ರದ ಉಪಕರಣದವರೆಗೂ ಎಲ್ಲಾ ಬಗೆಯ ವಸ್ತುಗಳು ಸಿಗುವ ಸ್ಥಳವೆಂದರೆ ಅದುವೇ ಮಾಲ್. ಮಾಲ್‌ಗಳು ಪ್ರಾರಂಭವಾದ ದಿನಗಳಲ್ಲಿ ಅದನ್ನು ವಿರೋಧಿಸಿದ ಜನ ನಂತರ ತಮಗೆ ತಿಳಿಯದ ಹಾಗೆ ಮಾಲ್
ಸಂಸ್ಕೃತಿಗೆ ಒಗ್ಗಿಕೊಂಡರು. ನಂತರ ಮಾಲ್‌ಗಳ ಕಡೆ ಹೆಚ್ಚು ಆಕರ್ಷಿತರಾದರು. ಮಾಲ್‌ಗಳಿಗೆ ಹೋಗದೇ ಹೋದರೆ ತಮ್ಮ ವೀಕ್ ಎಂಡ್ ಕೊನೆಗೊಳ್ಳುವುದಿಲ್ಲ ಎಂಬ ಮನಸ್ಥಿತಿಗೆ ಜನ ಬಂದು ಬಿಟ್ಟಿದ್ದಾರೆ.
ಮಾಲ್ ಗಳಲ್ಲಿ ಸಿಗದೇ ಇರುವ ವಸ್ತುಗಳೇ ಇಲ್ಲ. ಫುಡ್ ಕೋರ್ಟ್‌ನಿಂದ ಹಿಡಿದು ಮನೋರಂಜನೆಯವರೆಗೂ ಎಲ್ಲಾ ಬಗೆಯ ಸೇವೆ ಮತ್ತು ಸೌಲಭ್ಯವನ್ನು ಮಾಲ್ ಗಳಲ್ಲಿ ಕಲ್ಪಿಸಲಾಗಿರುತ್ತದೆ. ಜನರನ್ನು ಆಕರ್ಷಿಸುವ ಮಾಲ್‌ಗಳು ಒಂದೇ ಸೂರಿನಡಿಯಲ್ಲಿ ಬಹಳಷ್ಟು ಸೇವೆ ಮತ್ತು ಸೌಲಭ್ಯವನ್ನು ಕಲ್ಪಿಸುವುದು ಮಾಲ್‌ಗಳ ಉದ್ದೇಶ. ಅದು ಜನರಿಗೆ ಹೆಚ್ಚು ಇಷ್ಟವಾಗುತ್ತದೆ. ಇಲ್ಲಿ ತಮಗೆ ಬೇಕಾದ ವಸ್ತುಗಳನ್ನು ತಾವೇ ಆರಿಸಿಕೊಳ್ಳಲು ಗ್ರಾಹಕರಿಗೆ ಸ್ವತಂತ್ರವಿರುತ್ತದೆ. ‘
ಗ್ರಾಹಕರಿಗೆ ಆಯ್ಕೆಯ ಅವಕಾಶಗಳು ಹೆಚ್ಚಾಗಿರುತ್ತದೆ. ಜತೆಗೆ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ಸಿಗುವುದರಿಂದ ಸಮಯದ ಉಳಿತಾಯವಾಗುತ್ತದೆ. ಇದರಿಂದಾಗಿ ಮಾಲ್‌ಗಳು ಜನರನ್ನು ಹೆಚ್ಚು ಆಕರ್ಷಿಸುತ್ತದೆ. ಕರೋನದಿಂದ ಭಣಗುಟ್ಟಿದ ಮಾಲ್‌ಗಳು
ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಮಾಲ್‌ಗಳು ಕರೋನಾ ಬಂದಾಗಿನಿಂದ ಭಣಗುಡುತ್ತಿದ್ದು, ಸದ್ಯ ಕೊಂಚ ಚೇತರಿಸಿ ಕೊಳ್ಳುತ್ತಿದೆ. ಲಾಕ್‌ಡೌನ್ ಸಮಯದಲ್ಲಿ 3-4 ತಿಂಗಳು ಮಾಲ್‌ಗಳ ಬಾಗಿಲು ತೆರೆಯಲಿಲ್ಲ. ಇದರಿಂದಾಗಿ ಮಾಲ್‌ನ ಉದ್ಯೋಗಿಗಳಿಗೆ, ವ್ಯಾಪಾರಿಗಳಿಗೆ ಹಾಗೂ ಮಾಲೀಕರಿಗೆ ದೊಡ್ಡ ಮಟ್ಟದ ಆರ್ಥಿಕ ಹೊಡೆತ ಬಿದ್ದಿದ್ದು, ಇದೀಗ ಹಂತ ಹಂತವಾಗಿ
ಚೇತರಿಸಿಕೊಳ್ಳುತ್ತಿದ್ದಾರೆ.
ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತೆ ಜನರನ್ನು ಮಾಲ್ ನತ್ತ ಬರುವಂತೆ ಮಾಡಲಾಗುತ್ತಿದೆ.
ಬೆಂಗಳೂರಿನ ಪ್ರಮುಖ ಮಾಲ್‌ಗಳು ಮೆಗ್ರಾತ್ ರಸ್ತೆಯಲ್ಲಿರುವ ಗರುಡ ಮಾಲ್, ಕೋರಮಂಗಲದ ಫೋರಂ ಮಾಲ್, ಮಲ್ಲೇಶ್ವರದ ಮಂತ್ರಿ ಸ್ಕ್ವೇರ್ ಮಾಲ್, ಯುಬಿ ಸಿಟಿ ಮಾಲ್, ಮೈಸೂರು ರಸ್ತೆಯ ಗೋಪಾಲನ್ ಮಾಲ್, ಗೋಪಾಲನ್ ಆರ್ಕೇಡ್, ಯಶವಂತಪುರದ ಬಳಿ ಇರುವ ಓರೆಯನ್ ಮಾಲ್, ಬನ್ನೇರುಘಟ್ಟ ರಸ್ತೆಯಲ್ಲಿರುವ ರಾಯಲ್ ಮೀನಾಕ್ಷಿ ಮಾಲ್, ವೈಟ್‌ಫೀಲ್ಡ್ ನ ಇನ್ ಆರ್ಬಿಟ್ ಮಾಲ್, ವೈಟ್‌ಫಿಲ್ಡ್‌ನ ನ್ಯೂ ಫೋರಂ ವ್ಯಾಲಿ ಮಾಲ್, ಮಾಗಡಿ ರಸ್ತೆಯ ಬಳಿ ಇರುವ ಜಿ.ಟಿ.ಮಾಲ್ ಸೇರಿದಂತೆ ಮುಂತಾದವು ನಗರದಲ್ಲಿರುವ ಪ್ರಮುಖ ಮಾಲ್‌ಗಳಾಗಿವೆ.
ಮಾಲ್ ಸಂಸ್ಕೃತಿಯ ಉಗಮ
1950 ರಲ್ಲಿ ಅಮೆರಿಕಾದ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳೆಯತೊಡಗಿತು. ಜನರಲ್ಲಿ ಹೆಚ್ಚಿನ ಹಣ ಸಂಗ್ರಹವಾಗತೊಡಗಿತು. ಹೀಗಾಗಿ 1956ರಲ್ಲಿ ಅಮೆರಿಕಾದ ಪ್ರಥಮ ಮಾಲ್ ಎದಿನಾ ಎನ್ನುವ ನಗರದಲ್ಲಿ ಸೌತ್ ಡೇಲ್ ಸೆಂಟರ್ ಅಥವಾ ಸೌತ್ ಲ್ಯಾಂಡ್ ಮಾಲ್ ಎನ್ನುವ ಹೆಸರಿನಲ್ಲಿ ಗ್ರಾಹಕರಿಗೆ ತೆರೆದುಕೊಳ್ಳುತ್ತದೆ. ಇದು ಗ್ರಾಹಕರ ಮನಸ್ಸನ್ನು ಬಹಳ ಬೇಗ ಆಕರ್ಷಿಸುತ್ತದೆ. ಈ ಮಾಲ್‌ನ ಪರಿಕಲ್ಪನೆ ಮತ್ತು ವಿನ್ಯಾಸ ಮಾಡಿ ಗ್ರಾಹಕರಿಗೆ ನೀಡಿದ್ದು ವಿಕ್ಟರ್ ಡೇವಿಟ್ ಗ್ರೂಯೆನ್ ಎನ್ನುವ ಸಮಾಜವಾದ
ಸಿದ್ದಾಂತದ ಆರಾಧಕ.
ಮಾಲ್‌ಗಳು ಹೆಚ್ಚು ಆಕರ್ಷಕವಾಗಲು ಒಂದು ಸೂಪರ್ ಮಾರ್ಕೆಟ್ ಇನ್ನೊಂದು ರೆಸ್ಟೋರೆಂಟ್ ಕಾರಣವಾಗಿತ್ತು. ಅಲ್ದಿ ಎನ್ನುವ ಸೂಪರ್ ಮಾರ್ಕೆಟ್ ಮತ್ತು ಮ್ಯಾಕ್ ಡೊನಾಲ್ಡ್. ಇವುಗಳ ಕೆಲಸ ಜನರನ್ನು ಸೆಳೆಯುವುದಾಗಿತ್ತು. ಹೀಗೆ ಇವುಗಳ ಪ್ರಖ್ಯಾತಿಯಿಂದ ಮಾಲ್‌ಗೆ ಬಂದ ಜನ ಬೇರೆ ಅಂಗಡಿಯಲ್ಲಿ ಕೂಡ ಕೊಳ್ಳಲು ಶುರು ಮಾಡುತ್ತಾರೆ. ಅಂದರೆ ಒಂದೇ
ಸೂರಿನಡಿ ಯಲ್ಲಿ ಬಹಳಷ್ಟು ಸೇವೆ ಮತ್ತು ಸೌಲಭ್ಯವನ್ನು ಕಲ್ಪಿಸುವುದು ಮಾಲ್‌ಗಳ ಉದ್ದೇಶ.
ಕಡಿಮೆ ಸಮಯದಲ್ಲಿ ಇದು ಬಹಳಷ್ಟು ಪ್ರಸಿದ್ಧಿ ಪಡೆಯಿತು. ಎಷ್ಟರ ಮಟ್ಟಿಗೆ ಎಂದರೆ 1956ರ ಅಕ್ಟೋಬರ್‌ನಲ್ಲಿ ಒಂದು ಮಾಲ್ ಇದದ್ದು 1960 ರ ವೇಳೆಗೆ ಅಂದರೆ ಕೇವಲ ನಾಲ್ಕು ವರ್ಷದಲ್ಲಿ 4,500 ಮಾಲ್‌ಗಿಂತ ಹೆಚ್ಚಿನ ಮಾಲ್‌ಗಳು ಅಮೇರಿಕಾದಲ್ಲಿ ಇರುತ್ತವೆ.
ಮಾಲ್‌ಗಳ ಉನ್ನತಿ
1975ರ ವೇಳೆಗೆ ಅಮೆರಿಕದ ಒಟ್ಟು ಖರೀದಿಯಲ್ಲಿ 33 ಪ್ರತಿಶತ ಖರೀದಿ ಮಾಲ್‌ಗಳಲ್ಲಿ ಆಗುತ್ತಿತ್ತು. 1980ರಲ್ಲಿ ಮಾಲ್‌ಗಳಲ್ಲಿ ಸಿನಿಮಾ ಥಿಯೇಟರ್ ಕೂಡ ಶುರು ಮಾಡಿದರು. ಹೀಗಾಗಿ ಮಾಲ್‌ಗಳು ಇನ್ನಷ್ಟು ಹೆಚ್ಚಿನ ಆಕರ್ಷಣೆ ಹೊಂದಿ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾದವು. 1992ರಲ್ಲಿ ಅಮೇರಿಕಾದಲ್ಲಿ ಮೆಗಾ ಮಾಲ್‌ಗಳನ್ನು ಪರಿಚಯಿಸಲಾಗುತ್ತದೆ. ಇಲ್ಲಿ ಖರೀದಿ ಜತೆಗೆ ಗ್ರಾಹಕನ ಮನರಂಜನೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಇಂತಹ ಮಾಲ್ ಸಂಸ್ಕೃತಿ ನಮ್ಮ ನಗರದಲ್ಲೂ ಬೆಳೆದು, ಬಹಳಷ್ಟು ಜನರ ಅವಶ್ಯಕತೆಯನ್ನು ಪೂರೈಸುತ್ತಿರುವುದು ವಿಶೇಷ.
ನಗರದ ಪ್ರಮುಖ ಮಾಲ್
ಗರುಡ ಮಾಲ್ ಬೆಂಗಳೂರು ನಗರದ ಪ್ರಮುಖ ಶಾಪಿಂಗ್ ಮಾಲ್‌ಗಳಲ್ಲಿ ಒಂದಾಗಿದೆ. ಇದು ನಗರದ ಎರಡನೇ ಅತ್ಯಂತ ಹಳೆಯ ಮಾಲ್. 75 ಸಾವಿರ ಚದರ ಮೀಟರ್ ವಿಸ್ತೀರ್ಣವಿದ್ದು, 6 ಅಂತಸ್ತು ಹೊಂದಿದೆ. ಇದರಲ್ಲಿ ಸುಮಾರು 120 ಮಳಿಗೆಗಳಿವೆ. ಇಲ್ಲಿ
ಮನೋರಂಜನಾ ವಲಯ, ಆಹಾರ ಪ್ರಿಯರಿಗಾಗಿ ಫುಡ್‌ಕೋರ್ಟ್ ಕೂಡ ಇದೆ.