Wednesday, 27th November 2024

ವಿಶ್ವದ ಟಾಪ್‌ ಟೆಕ್‌ ತಾಣ ಬೆಂಗಳೂರು !

ಟೆಕ್ ಟಾಕ್‌

ಬಡೆಕ್ಕಿಲ ಪ್ರದೀಪ

ತಂತ್ರಜ್ಞಾನ ಬೆಳವಣಿಗೆಯ ಕ್ಷೇತ್ರದಲ್ಲಿ ಬೆಂಗಳೂರು ಕಳೆದ ವರ್ಷ ಮೊದಲ ಸ್ಥಾನವನ್ನು ಪಡೆದಿದೆ ಎಂಬ ವಿಚಾರವು ಹೆಮ್ಮೆ ತರುವಂತಹದ್ದು. ತರಬೇತಿ ಪಡೆದ, ನಿಷ್ಠಾವಂತ ತಂತ್ರಜ್ಞರ ಸುಲಭ ಲಭ್ಯತೆಯೇ ಇದಕ್ಕೆ ಮುಖ್ಯ ಕಾರಣ.

*ಬೆಂಗಳೂರಿನಲ್ಲಿ ಸುಮಾರು 67,000 ಐ.ಟಿ. ಸಂಸ್ಥೆಗಳು ನೋಂದಣಿಗೊಂಡಿವೆ. ಇವುಗಳಲ್ಲಿ ಸುಮಾರು 12,000 ಸಂಸ್ಥೆಗಳು
ಸಕ್ರಿಯವಾಗಿವೆ.
*ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್‌, ಔಟರ್ ರಿಂಗ್ ರೋಡ್, ದೊಮ್ಮಲೂರು, ಬನ್ನೇರುಘಟ್ಟ ರಸ್ತೆ, ಕೋರಮಂಗಲ ಮತ್ತು
ಮೈಸೂರು ರಸ್ತೆಯಲ್ಲಿ ಹೆಚ್ಚು ಸಂಸ್ಥೆಗಳು ಕೇಂದ್ರೀಕೃತಗೊಂಡಿವೆ.
*81 ಎಕರೆ ವಿಸ್ತಾರದ ಆವರಣ ಹೊಂದಿರುವ ಇನ್ಫೋಸಿಸ್ ಬೆಂಗಳೂರಿನ ಬಹು ದೊಡ್ಡ ಐ.ಟಿ.ಸಂಸ್ಥೆ. ಟಿಸಿಎಸ್, ವಿಪ್ರೋ ಸಹ ಇಲ್ಲಿನ ದೊಡ್ಡ ಸಂಸ್ಥೆಗಳೆನಿಸಿವೆ.
*1985ರಲ್ಲಿ ಆರಂಭಗೊಂಡ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್‌ (ಸೋನಾ ಟವರ್, ಮಿಲ್ಲರ‍್ಸ್‌ ರಸ್ತೆ) ಬೆಂಗಳೂರಿನ ಮೊದಲ ಬಹು ರಾಷ್ಟ್ರೀಯ ಐಟಿ ಸಂಸ್ಥೆ.

ಬೆಂಗಳೂರಿಗೆ ಭಾರತದ ಐಟಿ ರಾಜಧಾನಿ ಎಂಬ ಹೆಸರು ಬಂದದ್ದು ಇಂದು ನಿನ್ನೆಯೇನಲ್ಲ. ಇದನ್ನು ಭಾರತದ ಸಿಲಿಕಾನ್ ಸಿಟಿ ಎಂದು ಕರೆಯುವ ವಾಡಿಕೆ ದಶಕಗಳಿಂದಲೇ ಇದೆ. ಆದರೆ ಇದೆಲ್ಲಾ ಈ ನಗರಿಗೆ ಸಿಗುತ್ತಿರುವುದಕ್ಕೆ ಅದೇನೋ ಕಾರಣ ಇದ್ದೇ ಇದೆ, ಹಾಗಾಗಿಯೇ ವರ್ಷ ಕಳೆದರೂ ಈ ಒಂದು ಕಾಲದ ಉದ್ಯಾನ ನಗರಿಗೆ ಮತ್ತೊಮ್ಮೆ ತಂತ್ರಜ್ಞಾನದಲ್ಲಿ ಭಾರಿ ಬಿರುಸಿನಲ್ಲಿ
ಬೆಳೆಯುತ್ತಿರುವ ನಗರಿ ಎನ್ನುವ ಪಟ್ಟ ಗಿಟ್ಟಿದೆ!

ಲಂಡನ್, ಬರ್ಲಿನ್, ಮ್ಯೂನಿಕ್, ಪ್ಯಾರಿಸ್ ನಂತಹ ನಗರಗಳ ತಂತ್ರಜ್ಞಾನ ಬೆಳವಣಿಗೆಯ ವೇಗವನ್ನೂ ಮೀರಿ ಬೆಂಗಳೂರು ವಿಶ್ವದ ಅತಿ ವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನ ನಗರಿ ಎನ್ನುವ ಪಟ್ಟವನ್ನು ತನ್ನದಾಗಿಸಿ ಕೊಂಡಿದೆ.

ಡೀಲ್‌ರೂಮ್.ಕೋ ಅನ್ನುವ ವೆಬ್‌ಸೈಟ್ ಹಾಗೂ ಲಂಡನ್ ಎಂಡ್ ಪಾರ್ಟ್‌ ನರ್ಸ್ ಎನ್ನುವ ಕಂಪೆನಿ ಜೊತೆ ಸೇರಿ ನಡೆಸಿದೆ. ಈ ಸಮೀಕ್ಷೆಯಲ್ಲಿ ಉಳಿದ ಮುಂದುವರಿದ ದೇಶಗಳ ಮುಂಚೂಣಿ ನಗರಗಳನ್ನೂ ಹಿಂದಿಕ್ಕಲು ಬೆಂಗಳೂರು ಹಲವಾರು ಕಾರಣಗಳನ್ನು ಹೊಂದಿದೆ ಎಂಬ ವಿಚಾರ ಪ್ರಚುರಗೊಂಡಿದೆ.

ಕೋವಿಡ್‌ನಲ್ಲೂ ಬೆಳವಣಿಗೆ 2016ರಿಂದ 2020ರವರೆಗೆ ಏರುಗತಿಯಲ್ಲೇ ಸಾಗಿರುವ ಬೆಂಗಳೂರಿನ ತಂತ್ರಜ್ಞಾನ ಸಂಬಂಧಿ ಬಂಡವಾಳ ಹೂಡಿಕೆಯು ಅಂದಿನ 1.3 ಬಿಲಿಯನ್ ಡಾಲರ್‌ನಿಂದ ಹಿಡಿದು ಕಳೆದ ವರ್ಷದ 7.2 ಶತಕೋಟಿ ಡಾಲರ್, ಅಂದರೆ
5.4 ಪಟ್ಟು ಏರಿಕೆಯನ್ನು ಕಂಡಿದೆ ಅಂದರೆ ಎಂಥವರ ಗಮನವನ್ನೂ ಸೆಳೆಯುವಂತ ಬೆಳವಣಿಗೆಯಾಗಿದೆ. ಅದೂ ಕೂಡ ಕೋವಿಡ್19ನ ಕಷ್ಟದ ಪರಿಸ್ಥಿತಿಯಿದ್ದರೂ ಬೆಳವಣಿಗೆ ಕುಂಠಿತಗೊಳ್ಳದೇ ಇರುವುದು ಗಮನಾರ್ಹ.

ನಗರದ ಉತ್ತಮ ಮೂಲಭೂತ ಸೌಲಭ್ಯಗಳು ಹಾಗೂ ತಂತ್ರಜ್ಞಾನ ಸಂಬಂಧಿ ಕೆಲಸಗಾರರ ಸುಲಭದ ಲಭ್ಯತೆ ಇದಕ್ಕೆ ಕಾರಣ ಎನ್ನಲಾಗಿದೆ. ಇನ್ನು ಈ ಕೆಲಸಗಾರರು ಗಣನೀಯವಾಗಿ ಕಡಿಮೆ ಖರ್ಚಿನಲ್ಲಿ ಲಭ್ಯವಿರುವುದೂ ಇನ್ನೊಂದು ಕಾರಣವೂ ಆಗಿದೆ. ಒಂದನ್ನೊಂದು ಅವಲಂಬಿಸಿ ಬೆಳೆಯುವ ಸಂಸ್ಥೆಗಳು, ಇನ್ನೊಂದು ಕಂಪೆನಿಯು ಎಲ್ಲಿದೆಯೋ ಅದೇ ಸ್ಥಳದ ಹತ್ತಿರದಲ್ಲಿ ತನ್ನ ವ್ಯವಸ್ಥೆಯನ್ನು ತೆರೆಯಲು ಆಶಿಸುವುದೂ ಇದಕ್ಕೆ ಕಾರಣವೂ ಹೌದು.

ಎರಡನೆಯ ಸ್ಥಾನ ಲಂಡನ್
ಇನ್ನು ಭಾರತದ ಇನ್ನೊಂದು ನಗರ ಮುಂಬೈ 1.2 ಬಿಲಿಯನ್ ಡಾಲರ್ ಹೂಡಿಕೆ ಕಂಡು 6ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಅದೇ ವೇಳೇ ಚೀನಾದ ಶಾಂಘೈ, ಶೆನ್‌ಝೆನ್, ಬೀಜಿಂಗ್ 10, 11 ಹಾಗೂ 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ. ಆದರೆ ಲಂಡನ್ ಬೆಂಗಳೂರಿನ ನಂತರ ಎರಡನೇ ಸ್ಥಾನವನ್ನು ಗಳಿಸಿರುವುದು ಗಮನಾರ್ಹವೆನಿಸಿದೆ.

ಇದರೊಂದಿಗೆ 2020ರಲ್ಲಿ ವೆಂಚರ್ ಕ್ಯಾಪಿಟಲ್‌ನಲ್ಲಿ ಹೂಡಲಾಗಿರುವ ಬಂಡವಾಳವು 10 ಶತಕೋಟಿ ಡಾಲರ್ ಮೀರಿದ್ದು, ಇದೊಂದು ಸಾರ್ವಕಾಲಿಕ ದಾಖಲೆ. ಈ ವಿಸಿ (ವೆಂಚರ್ ಕ್ಯಾಪಿಟಲಿಸ್ಟ್‌)ಗಳ ರಾಂಕಿಂಗ್‌ನಲ್ಲಿ ಬೆಂಗಳೂರಿಗೆ ಆರನೇ ಸ್ಥಾನ,
ಇಲ್ಲಿ ಬೀಜಿಂಗ್ ಹಾಗೂ ಸ್ಯಾನ್ ಫ್ರಾನ್ಸಿಸ್ಕೋಗೆ ಮೊದಲೆರಡು ಸ್ಥಾನ ಸಿಕ್ಕಿದೆ. ಇದು ಕೂಡ ಬೆಂಗಳೂರು ತನ್ನೆೆಡೆಗೆ ಆಕರ್ಷಿಸು ತ್ತಿರುವ ಬಂಡವಾಳಕ್ಕೆ ಹಿಡಿದ ಕನ್ನಡಿಯೆನಿಸಿಕೊಂಡಿದೆ.

ಮುಂಬೈ ಈ ಪೈಕಿ 21ನೇಸ್ಥಾನದಲ್ಲಿದ್ದರೆ, ಲಂಡನ್ 5ನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ ಹೇಳುವುದಾದರೆ, ತಂತ್ರಜ್ಞಾನ ಬೆಳೆಯುತ್ತಿರುವ ವೇಗವು ಬೆಂಗಳೂರನ್ನು ಮೊದಲ ಸ್ಥಾನದಲ್ಲಿ ಕುಳ್ಳಿರಿಸಿದರೂ, ಈ ಸಮೀಕ್ಷೆಯ ಪ್ರಕಾರ ಲಂಡನ್ 2016ರಿಂದ
2020ರವರೆಗೆ ಏರುಗತಿಯನ್ನು ಕಂಡು ಒಟ್ಟಾರೆ ಬಂಡವಾಳ ಹೂಡಿಕೆಯನ್ನು 10.5 ಶತಕೋಟಿ ಡಾಲರ್‌ಗೇರಿಸಿಕೊಂಡಿರುವುದು ಗಮನಿಸಬೇಕಾಗಿರುವ ಅಂಶ. ಅದು 2016ರಲ್ಲಿ ಗಳಿಸಿದ ಬಂಡವಾಳ 3.5 ಶತಕೋಟಿ ಡಾಲರ್.

ಇದೂ ಕೂಡ ಬ್ರೆಕ್ಸಿಟ್‌ನ ಅಡೆತಡೆಗಳ ನಡುವೆಯೂ ಇಷ್ಟು ಉತ್ತಮವಾಗಿ ಏರಿಕೆ ಕಂಡಿರುವುದು ಲಂಡನ್‌ಗೆ ಖುಷಿ ನೀಡಿದೆ. ಇದರೊಂದಿಗೆ ಯೂರೋಪ್‌ನ ತಂತ್ರಜ್ಞಾನ ಕೇಂದ್ರವಾಗಿ ಅದು ಬೆಳೆಯುತ್ತಿರುವುದರ ಸೂಚನೆ ತೋರಿಸಿದೆ. ಭಾರತದ ಜೊತೆ ಲಂಡನ್ ಬೆಳೆಸಿಕೊಂಡಿರುವ ವ್ಯವಹಾರ ಹಾಗೂ ತಂತ್ರಜ್ಞಾನದ ಸಂಬಂಧವೂ ಅದಕ್ಕೂ ಭಾರತಕ್ಕೂ ಈ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆಯನ್ನು ನೀಡುವಲ್ಲಿ ಸಹಕಾರಿಯಾಗಲಿದೆ ಅನ್ನುತ್ತಾರೆ ತಜ್ಞರು.

ಒಟ್ಟಾರೆಯಾಗಿ ಉತ್ತಮ ತಂತ್ರಜ್ಞಾನ, ಬಂಡವಾಳ ಹಾಗೂ ಅದಕ್ಕೆ ತಕ್ಕುದಾದ ಮೂಲಭೂತ ವ್ಯವಸ್ಥೆಗಳನ್ನು ಹೊಂದಿರುವ
ಮೂಲಕ ಬೆಂಗಳೂರು ಇದೀಗ ತಂತ್ರಜ್ಞಾನ ಲೋಕದಲ್ಲಿ ವಿಶ್ವದ ಗಮನ ಸೆಳೆಯುವುದನ್ನು ಮುಂದುವರೆಸಿದೆ. ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುವ ಮೂಲಕ ಇನ್ನಷ್ಟು ಬೆಳವಣಿಗೆಯನ್ನು ಕಾಣಬೇಕಾಗಿದೆ.

ಅದರಿಂದ ಮಾತ್ರವೇ ಈ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಎಲ್‌ಜಿ ನಿಲ್ಲಿಸಲಿದೆ ಫೋನ್ ತಯಾರಿ ಇಲೆಕ್ಟ್ರಾನಿಕ್ ತಯಾರಿಕಾ ದೈತ್ಯ ಎಲ್‌ಜಿ ಒಂದು ಕಾಲದಲ್ಲಿ ತನ್ನೆಲ್ಲಾ ಇಲೆಕ್ಟ್ರಾನಿಕ್ ವಸ್ತುಗಳಿಗೆ ಭಾರೀ ಬೇಡಿಕೆಯನ್ನಿಟ್ಟುಕೊಂಡಿದ್ದ,
ಮೊಬೈಲ್, ಸ್ಮಾರ್ಟ್ ಫೋನ್‌ಗಳ ಪೈಕಿಯೂ ಉತ್ತಮ ಹೆಸರನ್ನು ಗಳಿಸಿದ್ದ ಕಂಪೆನಿಯಾಗಿದ್ದರೂ, ಇಂದಿನ ಹೊಸ ಬದಲಾ ವಣೆಯ ಗಾಳಿಯನ್ನು ತಡೆಯಲಾಗದೆ, ಕುಂಠಿತ ಸೇಲ್‌ಸ್‌‌ಗಳಿಂದಾಗಿ ಶೀಘ್ರ ತನ್ನ ಮೊಬೈಲ್ ತಯಾರಿ ಹಾಗೂ ಮಾರಾಟವನ್ನು ನಿಲ್ಲಿಸುವ ಸಾಧ್ಯತೆಗಳು ದಟ್ಟವಾಗಿದೆ.

ಸಧ್ಯದ ಪರಿಸ್ಥಿತಿಯಲ್ಲಿ ನಮ್ಮ ಸೇಲ್ಸ್ ಅಷ್ಟೊಂದು ಉತ್ತಮವಾಗಿಲ್ಲದಿರುವುದರಿಂದ ನಾವು ಶೀಘ್ರದಲ್ಲಿಯೇ ಈ ನಿಟ್ಟಿನಲ್ಲಿ
ನಿರ್ಧಾರವನ್ನು ಕೈಗೊಳ್ಳಬೇಕಿದೆ ಸಂಸ್ಥೆಯ ವಕ್ತಾರರು ಹೇಳಿದ್ದಾಾರೆ. ಒಂದು ಕಾಲದಲ್ಲಿ ಎಲ್‌ಜಿ ಸ್ಮಾರ್ಟ್‌ಫೋನ್ ಸೇಲ್ಸ್ನಲ್ಲಿ ವಿಶ್ವದಲ್ಲಿಯೇ 3ನೇ ಸ್ಥಾನದಲ್ಲಿದ್ದು, ಕಳೆದ ವರ್ಷ 7ನೇ ಸ್ಥಾನವನ್ನೂ ಪಡೆಯುವಲ್ಲಿ ವಿಫಲವಾಗಿತ್ತು. ಅದು ಈಗಾಗಲೇ 4.5 ಶತಕೋಟಿ ಡಾಲರ್ ಅಂದರೆ 32 ಸಾವಿರ ಕೋಟಿ ರೂಪಾಯಿಯನ್ನು ಈ ಬ್ಯುಸಿನೆಸ್‌ನಿಂದಾಗಿ ಕೈಚೆಲ್ಲಿ ಕೂತಿದೆ.

ದೈತ್ಯ ಸಂಸ್ಥೆಯಾದ ಎಲ್‌ಜಿಗೆ ಇದು ದೊಡ್ಡ ತಲೆನೋವಲ್ಲದಿದ್ದರೂ, ಇದರಲ್ಲಿ ಕೆಲಸ ಮಾಡುತ್ತಿದ್ದವರ ಬಗ್ಗೆ ಚಿಂತೆ ಮೂಡಿದೆ. ಈ ವಿಭಾಗದ ಒಟ್ಟಾರೆ 60 ಶೇಕಡಾ ಮಂದಿಯನ್ನು ಬೇರೆ ವಿಭಾಗಗಳಿಗೆ ವರ್ಗಾಯಿಸುವುದಾಗಿ ಹೇಳಿರುವ ಕಂಪೆನಿ ಉಳಿದ 40  ಶೇಕಡಾ ಮಂದಿಯ ಬಗ್ಗೆ ಚಕಾರವೆತ್ತಿಲ್ಲ. ಮುಂದಿನ ದಿನಗಳಲ್ಲಿ ಕಾರ್ ಕಂಪೋನೆಂಟ್‌ಗಳನ್ನು ತಯಾರಿಸುವತ್ತ ಎಲ್‌ಜಿ
ಕೈ ಹಾಕಲಿದೆ ಎನ್ನಲಾಗಿದೆ.

ಬೆಂಗಳೂರು ಎಂದರೆ ಏಕೆ ಇಷ್ಟ?
ಕಳೆದ ಶತಮಾನದಲ್ಲಿ ಬೆಂಗಳೂರಿನ ತಂಪು ಹವೆಯನ್ನು ಕಂಡು ಉತ್ತರ ಭಾರತದ ಬಹಳಷ್ಟು ಜನ ಬೆಂಗಳೂರಿಗೆ ವಲಸೆ ಬಂದರು. ವಿದೇಶೀ ಸಂಸ್ಥೆಗಳಿಗೆ ಮತ್ತು ಜನರಿಗೆ ಸಹ ಬೆಂಗಳೂರಿನ ಸೆಕೆಯನ್ನು ಸಹಿಸುವುದು ಸುಲಭ ಎಂದನಿಸಿತು. ಇದರ ಜತೆ, ಇಲ್ಲಿನ ಮೃದು ಸ್ವಭಾವದ ಜನ, ತಂತ್ರಜ್ಞಾನದಲ್ಲಿ ತರಬೇತಿ ಪಡೆದವರ ಲಭ್ಯತೆ ಮೊದಲಾದ ಅಂಶಗಳು ಬೆಂಗಳೂರಿನ
ಬೆಳವಣಿಗೆಗೆ ಪೂರಕ ಎನಿಸಿತು. ತಂತ್ರಜ್ಞಾನ ಕ್ಷೇತ್ರದಲ್ಲಿ ಈಗ ಬೆಂಗಳೂರಿನ ಬೆಳವಣಿಗೆ ಮೊದಲ ಸ್ಥಾನದಲ್ಲಿದೆ ಎಂದರೆ, ಕಳೆದ ಎರಡು ಮೂರು ದಶಕಗಳಿಂದ ಇಲ್ಲಿ ಕಲ್ಪಿಸಲಾದ ಪೂರಕ ವಾತಾವರಣವೂ ಒಂದು ಪ್ರಮುಖ ಕಾರಣ.

ಟೆಸ್ಲಾ ಪ್ರವೇಶ
ಇತ್ತೀಚೆಗಷ್ಟೇ ಅಮೆರಿಕಾದ ಕಾರ್ ತಯಾರಿಕಾ ದೈತ್ಯ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ನೆಲೆಯಾಗಿ ಹಾಗೂ ತಂತ್ರಜ್ಞಾನದ ಮೂಲ ಸೇತುವಾಗಿ ಬೆಂಗಳೂರನ್ನು ಆಯ್ದುಕೊಂಡಿದ್ದಲ್ಲದೆ, ಮುಂದಿನ ದಿನಗಳಲ್ಲಿ ತನ್ನ ಆರ್ ಎಂಡ್ ಡಿ ಕೇಂದ್ರವನ್ನೂ ಇಲ್ಲೇ ತೆರೆಯುವ ಕುರಿತು ಇರಾದೆ ವ್ಯಕ್ತಪಡಿಸಿದೆ. ಇದಷ್ಟೇ ಅಲ್ಲದೆ, ನೋಕಿಯಾ, ಝೂಮ್ ಇತ್ಯಾದಿ ಕಂಪೆನಿಗಳೂ ತಮ್ಮ
ಸಂಶೋಧನಾ ಕೇಂದ್ರಗಳನ್ನು ಬೆಂಗಳೂರಿನಲ್ಲೇ ತೆರೆದಿವೆ.