Tuesday, 3rd December 2024

ಜೋಗಕ್ಕೆ ಜೀವಕಳೆ

* ರಕೀಬ್ ಆರ್

ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ನಡುವೆ ಇರುವ ಜೋಗ ಜಲಪಾತವು, ಮಳೆಗಾಲದಲ್ಲಿ ಮೈದುಂಬಿದಾಗ ಅಧ್ಬುತ ಎನಿಸುತ್ತದೆ. ಬೀಳುವ ನೀರಿನಿಂದೆದ್ದ ಮೋಡಸ್ವರೂಪಿ ನೀರಾವಿಯಿಂದಾಗಿ, ಜಲಪಾತವು ವೀಕ್ಷಕರೊಂದಿಗೆ ಆಡುವ ಕಣ್ಣಾಾಮುಚ್ಚಾಾಲೆಯು, ಜಲಪಾತದ ನೋಟಕ್ಕೆೆ ಇನ್ನಷ್ಟು ಮೆರುಗನ್ನು ನೀಡುತ್ತದೆ.

ಪ್ರಕೃತಿ ರಮಣೀಯ, ಹಸಿರನ್ನು ಹೊದ್ದು ನಿಂತಿರುವ ಬೆಟ್ಟಗಳು , ನಳನಳಿಸುವ ಝರಿಗಳು, ಭಯಾನಕ ಕಾಡುಗಳು, ಕಲ್ಪನೆಗೆ ತರಲಾಗದಷ್ಟು ಪ್ರಕೃತಿ ಸೌಂದರ್ಯ. ಅಬ್ಬಾಾ! ನೆನೆಸಿಕೊಂಡರೆ ಈಗಲೂ ಮೈ ಜುಮ್ಮೆೆನಿಸುತ್ತದೆ. ಅಂದು ಭಾನುವಾರ ಮುಂಜಾನೆ ಸೂರ್ಯ ಹುಟ್ಟುವ ಮುನ್ನವೇ ಮನೆಯಿಂದ ಹೊರಟಿದ್ದೆವು. ಮಂದವಾಗಿ ಸುರಿಯುತ್ತಿಿದ್ದ ಇಬ್ಬನಿ ಭುವಿಯನ್ನು ಮುತ್ತಿಿಕ್ಕುತ್ತಿಿದ್ದರೆ, ಸಂಚರಿಸುತ್ತಿಿದ್ದ ಕಾರು ಮಂದ ಬೆಳಕಿನೊಂದಿಗೆ ಮುನ್ನುಗ್ಗುತ್ತಿಿತ್ತು. ನಿದ್ದೆ ನೀರಲ್ಲಾಯಿತು ಎಂಬ ಕೊರಗು ಮನದಲ್ಲಿದ್ದರೂ, ಅದಕ್ಕಿಿಂತ ಮಿಗಿಲಾಗಿ ಬಹಳ ವರ್ಷದ ಕನಸು ನನಸಾಗುವ ಸಮಯವು ಸಮೀಪಿಸಿದೆ ಎಂಬ ಸಂತೋಷವಿತ್ತು.

ಸೂರ್ಯನು ಯಾರ ಅಡೆ-ತಡೆಯು ಇಲ್ಲದೆ ಮೆಲ್ಲಮೆಲ್ಲನೆ ಮೇಲೇರತೊಡಗಿದ್ದಾನೆ. ಮಳೆಗಾಲವಾದ ಕಾರಣ ತುಂತುರು ಮಳೆ ಅದಾಗಲೆ ಸುರಿಯತೊಡಗಿದೆ. ರೈತರು ದಾರಿಯುದ್ಧಕ್ಕೂ ದನ-ಕರುಗಳೊಡನೆ ದಿನನಿತ್ಯ ಚಟುವಟಿಕೆಯತ್ತ ಧಾವಿಸುತ್ತಿಿದ್ದರೆ, ಹೆಂಗಳೆಯರು ಗೋಣಿ ಚೀಲವನ್ನು ಹೊತ್ತುಕೊಂಡು ಗದ್ದೆಯತ್ತ ಚಲಿಸುವ ಅವಸರದಲಿದ್ದಾರೆ. ಸೂರ್ಯ ನೆತ್ತಿಿಗೇರುವ ಮುನ್ನ ಜೋಗದ ಮಣ್ಣಿಿಗೆ ಕಾಲೂರಿದೆವು. ಅದಾಗಲೇ ಸಮಯ 10 ದಾಟಿದ್ದರೂ ಮುಂಜಾನೆಯ ಅನುಭವ. ವಾಹನ ನಿಲ್ಲಿಸಲು ಕೂಡಾ ಸ್ಥಳಾವಕಾಶ ಇಲ್ಲ. ಅಷ್ಟೊೊಂದು ಪ್ರವಾಸಿಗರು. ಕಾರನ್ನು ಕಿ.ಮೀ ಗಳಷ್ಟು ದೂರ ನಿಲ್ಲಿಸಿ ಮೆಲ್ಲನೆ ನಡೆಯತೊಡಗಿದೆವು. ಅಲ್ಲಿನ ವಾತಾವರಣಕ್ಕೆೆ ಹೊಂದಿಕೊಳ್ಳದೆ ಮೈ ನಡುಕ ಆರಂಭವಾಗಿತ್ತು. ಬಿಸಿಬಿಸಿ ಟೀ ಕುಡಿದರೂ ಸಾಲದೆನಿಸಿತು. ಹಿಮದಿಂದ ಕವಿದಿದ್ದ ಜಲಪಾತ ಗಾಳಿಯ ರಭಸಕ್ಕೆೆ ಮಾಯುವುದು, ಮತ್ತೆೆ ಅದೇ ರೀತಿ ಕವಿಯುವುದು ಆಟವಾಗಿ ಮಾರ್ಪಟ್ಟಿಿತ್ತು. ಅದೆಷ್ಟು ಸುಂದರ ಜಲಪಾತ. ರಾಜ, ರಾಣಿ, ರೋರರ್ , ರಾಕೆಟ್ ವಿಭಾಗಗಳಾಗಿ ಜಿಗಿಯುತ್ತಿಿರುವುದನ್ನು ಕಂಡು ಗೆಳೆಯ ಮಲೆನಾಡಿನ ಕುರಿತಿರುವ ಕಥೆ, ಕವನಗಳು. ಲೇಖನಗಳು ಯಾವುದೂ ಕೂಡಾ ಕಲ್ಪನಾ ಶಕ್ತಿಿಯಿಂದ ಉದ್ಭವಿಸಿದಲ್ಲ, ಬದಲಾಗಿ ಅದೆಲ್ಲ ಬರಹಗಾರರ ಅನುಭವವೇ ಸರಿ.

ನಯನ ಮನೋಹರ ಜೋಗ ಜಲಪಾತ ಏಷ್ಯಾಾ ಖಂಡದಲ್ಲೇ ಅತೀ ಎತ್ತರದಿಂದ ಧುಮುಕುವ ಜಲಪಾತಗಳ ಪೈಕಿ ಎರಡನೇ ಸ್ಥಾಾನವನ್ನು ಗಿಟ್ಟಿಿಸಿಕೊಂಡಿದೆ. ಅದಲ್ಲದೇ ದೇಶದಾದ್ಯಂತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿಿದೆ. ಮಲೆನಾಡಿನ ಜನತೆಗೆ ಆಸರೆಯಾಗಿ ಮಾರ್ಪಟ್ಟಿಿದೆ. ಜೋಗ ಜಲಪಾತದ ನೈಜರೂಪವನ್ನು ದರ್ಶಿಸಲು ಮಳೆಗಾಲವೇ ಸೂಕ್ತಸಮಯ. ಕನ್ನಡಿಗರಾದ ಪ್ರತಿಯೊಬ್ಬರು ದರ್ಶಿಸಲೇ ಬೇಕಾದ ಸ್ಥಳಗಳ ಪೈಕಿ ಇದು ಕೂಡಾ ಒಂದು.

ಮಳೆಗಾಲದಲ್ಲಿ ಸೂಪರ್
ಶರಾವತಿ ನದಿಯು ಸುಮಾರು 900 ಅಡಿ ಎತ್ತರದಿಂದ ಧುಮುಕುವ ಜೋಗ ಜಲಪಾತವು ವಿಶ್ವದ ಅತಿ ಸುಂದರ ದೃಶ್ಯಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಮಳೆ ಬಂದಾಗ ಮಾತ್ರ ಜೋಗದ ದೃಶ್ಯವೈಭವ ಮೇಳೈಸುತ್ತದೆ; ಜಲಪಾತಕ್ಕಿಿಂತ ಮೇಲ್ಭಾಾಗದಲ್ಲಿ ವಿದ್ಯುತ್ ತಯಾರಿಸಲೆಂದು ಲಿಂಗನಮಕ್ಕಿಿ ಅಣೆಕಟ್ಟನ್ನು ಕಟ್ಟಿಿರುವುದರಿಂದಾಗಿ, ಆ ಅಣೆಕಟ್ಟು ತುಂಬಿ, ಗೇಟುಗಳನ್ನು ತೆಗೆದಾಗ ಭರಪೂರ ನೀರು; ಬೇಸಿಗೆಯಲ್ಲಿ ಜೋಗ ಸಹಜವಾಗಿ ಸೊರಗುತ್ತದೆ. ಆದ್ದರಿಂದ ಜೋಗ ನೋಡಲು ಜೂನ್‌ನಿಂದ ನವೆಂಬರ್ ಸೂಕ್ತ ಕಾಲ.

ಬೆಂಗಳೂರಿನಿಂದ ನೇರ ರೈಲು

ಕರ್ನಾಟಕದ ರಾಜಧಾನಿಯಿಂದ ಪ್ರತಿ ರಾತ್ರಿಿ ಜೋಗ ಜಲಪಾತಕ್ಕೆೆ ನೇರವಾದ ರೈಲು ಇದೆ ಎಂದು ನಗರದ ಬಹುಜನರಿಗೆ ಗೊತ್ತಿಿಲ್ಲ. ಬೆಂಗಳೂರು-ತಾಳಗುಪ್ಪ ಎಕ್‌ಸ್‌‌ಪ್ರೆೆಸ್ ರೈಲು ಪ್ರತಿರಾತ್ರಿಿ ಬೆಂಗಳೂರಿನಿಂದ ಹೊರಟು, ಬೆಳಿಗ್ಗೆೆ ತಾಳಗುಪ್ಪ ತಲುಪುತ್ತದೆ. ತಾಳಗುಪ್ಪದಿಂದ ಜೋಗ ಜಲಪಾತಕ್ಕೆೆ ಕೇವಲ 12 ಕಿಮೀ ದೂರ. ಅಲ್ಲಿಂದ ಜೋಗಕ್ಕೆೆ ಆಟೊ, ಟ್ಯಾಾಕ್ಸಿಿ, ಬಸ್ ಸೌಕರ್ಯ ಇದೆ. ಬೆಳಿಗ್ಗೆೆ ತಾಳಗುಪ್ಪ ತಲುಪಿದ ರೈಲು, ಅದೇ ರಾತ್ರಿಿ ಅಲ್ಲಿಂದ ಹೊರಟು ಮರುದಿನ ಬೆಳಿಗ್ಗೆೆ ಬೆಂಗಳೂರು ತಲುಪುತ್ತದೆ. ಜಲಪಾತನ್ನು ಮತ್ತು ಸುತ್ತಲಿನ ತಾಣಗಳನ್ನು ನೋಡಿದ ಜನರು, ಅದೇ ರೈಲಿನಲ್ಲ ರಾತ್ರಿಿ ವಾಪಸಾಗಬಹುದು. ಜೋಗ ಜಲಪಾತದ ಬಳಿಗೆ ಸಾಗುವ ಈ ರೈಲನ್ನು ‘ಜೋಗಫಾಲ್‌ಸ್‌ ಎಕ್‌ಸ್‌‌ಪ್ರೆೆಸ್’ ಎಂದು ಮರುನಾಮಕರಣ ಮಾಡಬೇಕೆಂಬ ಒಂದು ಒತ್ತಾಾಯ ಮಲೆನಾಡಿನ ಈ ಭಾಗದ ಜನರಲ್ಲಿದೆ. ಅದರಿಂದಾಗಿ, ಜೋಗ ನೋಡಲು ಹೆಚ್ಚು ಜನರ ಗಮನ ಸೆಳೆದು, ಇಲ್ಲಿನ ಪ್ರವಾಸೋದ್ಯಮಕ್ಕೆೆ ಇಂಬು ನೀಡಿದಂತಾಗುತ್ತದೆ.