Tuesday, 3rd December 2024

ಇಂದೋರಿನ ಖಾದ್ಯ ಸಂತೆ ಸರಾಫಾ ಬಜಾರ್‌

ಇಲ್ಲಿ ದೊರೆಯುವ ನಾನಾ ತಿಂಡಿ ತಿನಿಸುಗಳನ್ನು ಸವಿಯುವುದೇ ಒಂದು ವಿಶಿಷ್ಟ ಅನುಭವ. ಬೆಂಕಿಯ ಜ್ವಾಲೆ ಗಳೇಳುವ ‘ಫಾರ್ ಪಾನ್’ ಸಹ ಇಲ್ಲಿ ಜನಪ್ರಿಯ!

ಮಂಜುನಾಥ ಡಿ. ಎಸ್.

ಇಂದೋರಿಗೆ ಭೇಟಿಯಿತ್ತಿದ್ದ ಸಂದರ್ಭದಲ್ಲಿ ಒಂದು ಸಂಜೆ ನಮ್ಮ ಅತಿಥೇ ಯರು ಸಾಮಾನ್ಯ ಪ್ರವಾಸಿಗರಿಗೆ ಅಪರಿಚಿತವಾದ ಅಪರೂಪದ ಸ್ಥಳಕ್ಕೆ ಕರೆದೊಯ್ದಿದ್ದರು.

ಅದುವೇ ಸರಾಫಾ ಬಜಾರ್. ಬೆಂಗಳೂರಿನ ಅವೆನ್ಯೂ ರಸ್ತೆ, ಚಿಕ್ಕಪೇಟೆ, ಬಳೇಪೇಟೆ ಪ್ರದೇಶಗಳಂತೆ ಕಿರು ರಸ್ತೆಗಳಿಂದ ಹಾಗು ನಾನಾಬಗೆಯ ಅಸಂಖ್ಯಾತ ಮಳಿಗೆಗಳಿಂದ ಕೂಡಿದ ಸ್ಥಳ ಇದಾಗಿದೆ. ಸಾಧಾರಣ ಜವಳಿಯಿಂದ ಹಿಡಿದು ಬೆಲೆಬಾಳುವ ಆಭರಣ ಗಳ ತನಕ ಎಲ್ಲವನ್ನೂ ವಿಕ್ರಯಿಸುವ ಅಂಗಡಿಗಳ ಸಮೂಹವೇ ಇಲ್ಲಿದೆ. ಇದರನು ವಿಶೇಷ ಎಂಬ ಪ್ರಶ್ನೆ ನಿಮ್ಮಗಲೇ ಮೂಡಿರ ಬಹುದು. ಮುಂದೆ ಓದಿದಾಗ ನಿಮ್ಮ ಪ್ರಶ್ನೆಗೆ ಖಂಡಿತವಾಗಿ ಉತ್ತರ ಸಿಗುತ್ತದೆ.

ಸಂಜೆ ಈ ಅಂಗಡಿಗಳು ಮುಚ್ಚುತ್ತಿದ್ದಂತೆ ಅವುಗಳ ಮುಂದೆ ತಿಂಡಿ ತಿನಿಸುಗಳ ತಾತ್ಕಾಲಿಕ ಅಂಗಡಿಗಳು ತಲೆಯೆತ್ತುತ್ತವೆ. ಇವು ಪಾದಚಾರಿ ಮಾರ್ಗ ಹಾಗು ರಸ್ತೆಯ ಜಾಗವನ್ನೂ ಅಕ್ರಮಿಸಿರುತ್ತವೆ. ನಿಧಾನವಾಗಿ ಜನಗಳು ಬರಲಾರಂಭಿ ಸುತ್ತಾರೆ. ಕ್ರಮೇಣ ಜನಸಂದಣಿ ಅಧಿಕವಾಗಿ ನಡೆಯುವುದೂ ತ್ರಾಸಕರ ಎನಿಸುತ್ತದೆ. ಹಾಗಾಗಿ ಸಹಜವಾಗಿಯೇ ವಾಹನ ಸಂಚಾರ ನಿಷೇಧಿಸ ಲಾಗಿರುತ್ತದೆ.

ಇಲ್ಲಿ ವಿಕ್ರಿಯಿಸುವ ವೈವಿಧ್ಯಮಯ ತಿಂಡಿ ತಿನಿಸುಗಳು ಹಾಗು ವಿವಿಧ ಬಗೆಯ ಪೇಯಗಳು ಚಪಲಚಿತ್ತರ ನಾಲಗೆಗಳಿಗೆ ರಸ ದೌತಣ ನೀಡುವುದೆಂದು ಬಲ್ಲವರ ಅಂಬೋಣ. ಇದನ್ನು ನೋಡಿದಾಗ ಬೆಂಗಳೂರಿನ ವಿಶ್ವೇಶ್ವರಪುರದ ಫುಡ್ ಸ್ಟ್ರೀಟ್ ನೆನಪಾಯಿತು. ಪೋಹಾ ಜಿಲೇಬಿ ಗೊತ್ತೆ!

ದಹಿ ವಡಾ, ಸಾಬುದಾನ ಕಿಚಡಿ, ಬುಟ್ಟೇ-ಕಾ-ಕೀಸ್, ಇಂದೋರ್ ಗರಡು ಚಾಟ, ಚಾಟ್ ಚಾಟ್ಸ್, ಕೋಕೊನಟ್ ಕ್ರಶ್, ಪೋಹಾ ಜಿಲೇಬಿ, ಮಾವಾ ಬಾಟಿ (ಜಾಮೂನಿನ ದೊಡ್ಡಣ್ಣ), ಕುಲಿ ಫಲೂದ, ಕಟ್ಟಾ ಸಮೋಸ, ಮೂಂಗ್ ಭಾಜಿಯ, ಕಾಂಜೀ ವಡ, ಹೀಗೆ ತಿಂಡಿಗಳ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಚೈನೀಸ್, ನಾರ್ಥ್ ಇಂಡಿಯನ್, ಸೌತ್ ಇಂಡಿಯನ್ ಖಾದ್ಯಗಳು ಇಲ್ಲಿ ಲಭ್ಯ.

ಇಲ್ಲಿ ದೊರಕುವ ಪ್ರತಿಯೊಂದು ತಿಂಡಿಗೂ ತನ್ನದೇ ಆದ ವೈಶಿಷ್ಟ್ಯವಿದೆ. ಕೆಲವು ಖಾದ್ಯ ಗಳೊಡನೆ ಕೆಲವು ಅಂಗಡಿಗಳ ಹೆಸರು ಸೇರಿಕೊಂಡು ಪ್ರಖ್ಯಾತವಾಗಿವೆ. ಜೋಶಿ ಅಂಗಡಿ ದಹಿ ವಡಾ, ಸವಾರಿಯಾ ಅಂಗಡಿಯ ಸಾಬುದಾನ ಕಿಚಡಿ ಹಾಗು ಬುಟ್ಟೇ-ಕಾ-ಕೀಸ್ ಕೆಲವು ಉದಾಹರಣೆಗಳು. ಬೆಂಕಿ ಉಗುಳುವ ಪಾನ್ ಉಪಾಹಾರದ ನಂತರ ಪಾನ್ ಇಲ್ಲದಿದ್ದರೆ ಹೇಗೆ? ಗ್ರಾಹಕರ ಅಭಿರುಚಿ ಗನುಗುಣವಾಗಿ ನಾನಾ ಬಗೆಯ ಪಾನ್ ತಯಾರಿಸಿಕೊಡುವ ಪರಿಣತರು ಇಲ್ಲಿ ಹಾಜರಿರುತ್ತಾರೆ.

ಚಾಕೊಲೆಟ್, ಮ್ಯಾಂಗೋ, ಬಟರ್-ಸ್ಕಾಚ್, ಗುಂಡಿ, ಫ್ರೂಟ್ ಕಾಕ್ಟೇಲ, ಮುಂತಾದ ಪಾನ್ ಇಲ್ಲಿ ಸವಿಯಬಹುದು. ಅಷ್ಟೇ ಅಲ್ಲದೆ ಸ್ಮೋಕ್ ಪಾನ್ ಹಾಗು ‘ಫಾರ್ ಪಾನ್’ ಸಹ ಇಲ್ಲಿ ದೊರೆಯುತ್ತವೆ. ಬೆಂಕಿಯ ಜ್ವಾಲೆಯ ಜತೆ ಪಾನ್ ಬಾಯಿಗೆ ತುರುಕಿ ಕೊಳ್ಳುವ ಗ್ರಾಹಕರನ್ನು ಕಂಡಾಗ, ಅವರ ನಾಲಗೆ ಸುಡುವುದಿಲ್ಲವೆ ಎಂಬ ಅಚ್ಚರಿ ಮೂಡುತ್ತದೆ. ಈ ಎಲ್ಲ ಅಂಗಡಿಗಳ ಮುಂದೆಯೂ ಜನ ತಮ್ಮ ಸರದಿಗಾಗಿ ಕಾಯತ್ತಿರುವುದನ್ನು ಕಂಡು ಬೆರಗಾದೆ; ಬಹುತೇಕ ಸಂದರ್ಭಗಳಲ್ಲಿ ಕಂಡುಬರದ ತಾಳ್ಮೆ ಇವರಿಗೆ ಈಗ ಹೇಗೆ ಬಂತು ಎಂದು ನನ್ನ ಪ್ರಶ್ನಿಸಿಕೊಂಡೆ.

ಅನ್ನ, ಸಾರು, ಪಲ್ಯದಲ್ಲಿ ತೃಪ್ತಿ ಕಾಣುವ ನನಗೂ ಸಾವಿರಾರು ಜನರು ಇಲ್ಲಿನ ತಿನಿಸುಗಳಿಗಾಗಿ ಈ ಪರಿಯಲ್ಲಿ ಹಾತೊರೆಯ ಬೇಕಾದರೆ ಇದರಲ್ಲಿ ಏನೋ ವಿಶೇಷತೆ ಇರಬೇಕು ಎನಿಸಿತು! ನಾನೂ ಒಂದೆರೆಡು ಖಾದ್ಯಗಳ ರುಚಿ ನೋಡಿದೆ. ತಿಂಡಿ ತಿನ್ನಲು ಇಲ್ಲಿಗೆ ಹೋಗುವಾಗ ಹೊಟ್ಟೆಯಲ್ಲಿ ಸಾಕಷ್ಟು ಜಾಗ ಇಟ್ಟುಕೊಂಡಿರಬೇಕು ಅಥವಾ ನಾಲ್ಕಾರು ಜನ ಜತೆಗಿರಬೇಕು. ಆಗ ಮಾತ್ರವೇ ಕೆಲವು ತಿಂಡಿಗಳ ರುಚಿಯನ್ನಾದರೂ ನೋಡಿ ಭೇಟಿಯಿತ್ತಿದ್ದಕ್ಕೆ ನ್ಯಾಯ ಒದಗಿಸಿಲು ಸಾಧ್ಯ.

ಇಂದೋರಿನ ತಿಂಡಿಪ್ರಿಯರು ಚರ್ಚಿಸುವ ಮತ್ತು ಭೇಟಿ ನೀಡುವ ಸ್ಥಳ ಸರಾಫಾ ಬಜಾರ್. ಇಲ್ಲಿ ಸಂಜೆಯ ಸಮಯದಲ್ಲಿ ತಿಂಡಿ ಮಾರುವ ಪ್ರಕ್ರಿಯೆ ಯಾವಾಗ ಪ್ರಾರಂಭವಾಯಿತೆಂದು ಖಚಿತವಾಗಿ ಹೇಳುವವರಿಲ್ಲ. ಇದು ನೂರಾರು ವರ್ಷಗಳಿಂದ ನಡೆದು ಕೊಂಡು ಬಂದಿದೆ ಎಂದು ಹೇಳುತ್ತಾರೆ. ತಡರಾತ್ರಿಯವರೆಗೆ ಜನಗಳಿರುವುದರಿಂದ ಅಂಗಡಿಗಳು ಸುರಕ್ಷಿತವಾಗಿರುತ್ತವೆ ಎಂಬ ಕಾರಣದಿಂದ ಇಲ್ಲಿನ ಆಭರಣಗಳ ಅಂಗಡಿಗಳ ಮಾಲೀಕರು ಇದನ್ನು ಪ್ರೋತ್ಸಾಹಿಸಿದರೆಂದು ಹೇಳಲಾಗುತ್ತದೆ.

ಸ್ಥಳೀಯರು ಹಾಗು ಪ್ರವಾಸಿಗರೂ ಸೇರಿದಂತೆ ದಿನಂಪ್ರತಿ ಸಾವಿರಾರು ಮಂದಿಯನ್ನು ಈ ‘ಖಾದ್ಯಸಂತೆ’ ಆಕರ್ಷಿಸುತ್ತದೆ. ಇಂದೋರಿಗೆ ಹೋದಾಗ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಖಾದ್ಯಗಳ ಸವಿಯನ್ನು ಆನಂದಿಸಲು ಮರೆಯಬೇಡಿ. ಇಂದ