Friday, 18th October 2024

ನಿನ್ನೆ ಜಗಳ ಇಂದು ಸ್ನೇಹ

* ಶ್ರೀರಕ್ಷಾ ರಾವ್ ಪುನರೂರು

ಅದೊಂದು ದಿನ ಹೊರಗೆ ಧೋ ಅಂತ ಸುರಿತಿದ್ದ ಮಳೆ ಬೇಸರ ಮೂಡಿಸುವುದರೊಂದಿಗೆ ಅದ್ಯಾಾಕೋ ಕಾಲೇಜು ಜೀವನದ ಹಳೇ ನೆನಪು ಒತ್ತರಿಸಿ ತರುತ್ತಿಿತ್ತು. ಕಾರಣ ನನ್ನ ಕಾಲೇಜು ಗೆಳಯ ಸುರೇಶ್ ಮದುವೆಗೆ ಬಂದ ಆಹ್ವಾಾನ.
‘ರುಕ್ಕು, ನೆಕ್‌ಸ್ಟ್‌ ಸಂಡೆ ರಾವ ಮಂದಿರದಲ್ಲಿ ಮದ್ವೆೆ ಕಣೆ. ಕಾಲೆಜ್ ಫ್ರೆೆಂಡ್‌ಸ್‌ ಎಲ್ಲರೂ ಬರ್ತಾಾ ಇದ್ದಾಾರೆ. ನೀನು ಗಂಡ, ಮಗುನ ಕರ್ಕೊೊಂಡು ಬರ್‌ಲೇಬೇಕು’ ಅಂದಿದ್ದ. ಏನೋ ನೆನಪಾದವಳಂತೆ ಮನೆಯ ಉಪ್ಪರಿಗೆಯನ್ನ ಪಟ-ಪಟ ಏರಿ ಏನೇನೊ ತಡಕಾಡಿದೆ. ಕೊನೆಗೂ ಜಿರಲೆ, ಒರಲೆಗೆ ಹೊಟ್ಟೆೆ ತುಂಬಿ ಉಳಿಸಿದ್ದ ನನ್ನ ವಿದ್ಯಾಾ ಕಂಪನೆಯಿಯ ಹಳೆಯ ಲಾಂಗ್ ಬುಕ್ ಸಿಕ್ಕಿಿತು. ಆ ಬುಕ್ ಸಿಕ್ಕಿಿದ್ದೆೆ ನನ್ನ ಕಾಲೇಜು ಜೀವನದ ಸಿಹಿ-ಕಹಿ ಸವಿ ಸವಿ ನೆನಪು ನನ್ನ ಮನಪಟಲದಲ್ಲಿ ಒಸರತೊಡಗಿತು.

ಇಷ್ಟರವರೆಗೆ ಉಪ್ಪರಿಗೆಯಲ್ಲಿ ಬೆಚ್ಚಗೆ ಮಲಗಿದ್ದ ಈ ಬುಕ್‌ಗೆ ಎಂದೋ ಪೂಸಿದ್ದ ಅತ್ತರು ಗಮಗುಡುತಿತ್ತು. ಇದರೊಂದಿಗೆ ನಾನೇ ಬರೆದ ಧೈರ್ಯ ಸಾಕಾಗದೆ ಕೊಡಲಾಗದ ಒಂದು ಲವ್ ಲೆಟರ್‌ಗಳು. ಆ ಕ್ಷಣದಲ್ಲಿ ನನಗೆ ಸಿಕ್ಕ ಎರಡು ಮೂರು ಲವ್ ಲೆಟರ್‌ಸ್‌ ನೋಡಿದ್ದೆೆ ಕಣ್ಣರಳಿನಿಂತವು. ಬುಕ್ ತೆರೆಯುತ್ತಿಿದ್ದಂತೆ ಮೊದಲು ಕಂಡದ್ದು ನನ್ನ ತರಗತಿಯ ಗ್ರೂಪ್ ಫೋಟೊ. ಇವಳು ನನ್ನ ನೆಚ್ಚಿಿನ ಗೆಳತಿ ಶಾಮಲ, ಇವಳು ಅಮ್ಮಿಿ ಅಜ್ಜಿಿಯ ಮುದ್ದಿನ ಪುಳ್ಳಿಿ ಸುಳ್ಳಗಾರ್ತಿ ಸುಬ್ಬಿಿ, ಇವ್ಳು ಕ್ಲಾಾಸ್‌ನ ದೊಡ್‌ಡ್‌ ಪೆದ್ದಿ ನಮ್ಮೆೆಲ್ಲರ ಪ್ರೀತಿಯ ಪದ್ದಿ, ಇವನು ಕಾಂತಿ ಲವರ್ – ಕರಿಯ ಅಲಿಯಾಸ್ ಕಾರ್ತಿಕ್ ಕರಿಯಪ್ಪ. ಅವ್‌ನ್‌ ಪಕ್ಕದಲ್ಲಿರೋನೆ ಹಾಂ ನನ್ನ ಪರಮ ವೈರಿ ನವೀನ. ಅವ್ನ ನೆರಳು ಕಂಡ್ರು ಉರ್ದು ಬೀಳ್ತಿಿದ್ದೆೆ ಯಾವಾಗ್ಲು ದಬ್ಬಣದಂತ ಮಾತಲ್ಲೆೆ ಚುಚ್ಚು ತ್ತಿಿದ್ದೆೆ ಪಾಪ. ಒಂದು ರೀತಿಯ ಬೇಸರದ ನಗು ಮುಖದಲ್ಲಿ ಮೂಡಿತು.

ಅಷ್ಟಕ್ಕೂ ಅವ್ನು ನನ್ನ ವೈರಿ ಹೆಗಾದ ಆಗಿದ್ದಾಾದ್ರು ಏನಪ್ಪ? ನೆನ್ಸ್ದ್ರೇನೆ ನಗು ಬರುತ್ತೆೆ. ಏನಂದ್ರೆೆ ಅವತ್ತೊೊಂದಿನ ಸುಮ್ನಿಿರಲಾರ್ದೆ ಈ ನವೀನ ‘ಏನೆ ಹೇಳಿ ನಮ್ ಹುಡುಗ್ರ ಗೆಳೆತನಾ ನೇ ಗ್ರೇಟ್. ನೂರು ಮೀಸೆ ಆದ್ರು ಜೊತೆ ಇರುತ್ತೆೆ, ಆದ್ರೆೆ ಎರಡು ಜಡೆ ಜೊತೆ ಇದ್ರೆೆ ಎಂಟನೇ ಅದ್ಭುತ, ಯವಾಗ್ಲು ಕಿತ್ತಾಾಡ್ಕೊೊಂಡಿರ್‌ತ್ತೀರ. ನಮ್ಮ ಹುಡುಗ್ರ ಗೆಳೆತನ ಹಂಗಾ ಅಲ್ಲಿ ಹಂಚಿ ಕುಡಿಯೋ ಶರಾಬಿನ ನಶೆ ಇದೆ, ಹಂಚಿ ಸೇದೊ ಸಿಗರೇಟಿನ ಹೊಗೆ ಇದೆ. ಸಹಾಯಕ್ಕೆೆ ಸಮೂಹಿಕ ಹೆಗಲಿದೆ.

ರಾಯಲ್‌ಎನ್‌ಫೀಲ್‌ಡ್‌‌ನ ಕಿಕ್ ಇದೆ. ವಾಹ್ ನಮ್ಮ ಗೆಳೆತನವೇ ಅಮರ, ಮಧುರ ಅಂತ’ ಪುಲ್ಸ್ಟಾಾಪೆ ಇಲ್ದೆೆ ಒದರುತ್ತಾಾ ಇದ್ದ. ಇದನ್ನ ಸಹಿಸಿ ಕೊಳ್ಳಕಾಗದ ನಾನು ‘ಹುಡುಗ್ರ ಗೆಳೆತನ ಕಂಡಿದ್ದೇನೆ, ಕೇಳಿದ್ದೇನೆ ಮರಾಯ. ನಿಮ್ಗಳ ನಡುವೆ ಒಮ್ಮೆೆ ಜಗಳವಾಗಿ, ಕಳಚಿಕೊಂಡ ಗೆಳೆತನವನ್ನು ಶತಾಯ ಗತಾಯ ಪ್ರಯತ್ನ ಪಟ್ಟರು ಮೊದಲಿನ ಜಾಡಿಗೆ ತರುವುದೇನ್ ಸುಲಭನೇ ? ಅದೇನೇ ಇದ್ರೂ, ಯಾವಾಗಲೂ ಸಣ್ಣ ಪುಟ್ಟ ಜಗ್ಳವಾಡ್ತ, ಕಿತ್ತಾಾಡೋ ಹುಡುಗಿಯರು ಮಾತ್ರ ಜೀವದ ಗೆಳತಿಯರು. ಹುಡುಗಿಯರು ಜಗಳವಾಡಿದರೂ, ಮತ್ತೊೊಮ್ಮೆೆ ಎದುರಿಗೆ ಸಿಕ್ಕಾಾಗಿ, ಕಷ್ಟ ಸುಖ ಅಂತ ಹಂಚಿಕೊಳ್ಳುತ್ತೇವೆ. ಜಗಳ ಇದ್ದರೂ, ಅದನ್ನು ಮರೆತು ಒಂದಾಗ್ತೇವೆ.. ನಮ್ಮ ನಮ್ಮ ಮನಸ್ಸಿಿನ ಹೀರೋ ಯಾರು ಅಂತ ಆಪ್ತವಾಗಿ ಹಂಚಿಕೊಳ್ತೇವೆ…ನಿಮ್ಮ ಥರ ಹಾವಿನ ದ್ವೇಷ ಸಾಧಿಸುವವರು ಹುಡುಗಿಯರು ಅಲ್ಲ..’ ಅಂತ ನನ್ನ ಮುಕ್ತ ಕಂಠ ದಿಂದ ಹೇಳಿ ಅವ್ನ ಜನ್ಮ ಜಲಾಡಿ ಬಿಟ್ಟಿಿದ್ದೆೆ.

ನಿಜ ನಾವು ನಮ್ಮ ಗೆಳತಿಯರನ್ನು ಬಿಟ್ಟಿಿರಲಾರದಷ್ಟು ಹಚ್ಚಿಿಕೊಂಡಿರುತ್ತೇವೆ. ಜಗಳದ ನಡುವೆಯಲ್ಲೇ ಮೆದುವಾಗಿ ಆತ್ಮೀಯತೆಯ ಪುಷ್ಪವೊಂದು ಅರಳುತ್ತಿಿರುತ್ತದೆ. ನಗು, ಅಳು, ಸಿಟ್ಟು ಇವೆಲ್ಲ ಪ್ರತಿಯೊಬ್ಬ ಸ್ತ್ರೀಯೂ ಪ್ರತಿದಿನ ಭೇಟಿಯಾಗಲೇ ಬೇಕಾದ ನೆಂಟರು. ಆದರೆ ಮದುವೆಯಾಗಿ ಸಂಸಾರಿಯಾದ ಮೇಲೆ ಗೆಳೆತನ ನಂಬರ್ ಇದ್ರೆೆ ಮೆಸೇಜ್, ಕಾಲ್. ಹುಟ್ಟು,ಸಾವು, ಮದುವೆ ಅಥವಾ ಇನ್ಯಾಾವುದೋ ಸಮಯದಲ್ಲಾಾದ ನಿರೀಕ್ಷಿತ ಭೇಟಿಗೆ ಮಾತ್ರ ಸೀಮಿತವಾಗಿಬಿಡುತ್ತದೆ . ಎಂದು ವಾಸ್ತವವನ್ನು ಅರ್ಥಮಾಡಿಕೊಳ್ಳುವಾಗ ಮನಸ್ಸು ಉಕ್ಕಿಿ ಬರುತ್ತದೆ, ಕಣ್ಣ ಅಂಚಲ್ಲಿ ಹನಿಯೊಂದು ಧುಮ್ಮಿಿಕ್ಕುತ್ತದೆ. ಕಣ್ಣನ್ನು ಒರೆಸಿಕೊಳ್ಳುವಾಗ ಅಮ್ಮಾಾ……….. ರುಕ್ಕೂ………….. ಅನ್ನೋೋ ಸ್ವರ ನನ್ನ ಪ್ರಸ್ತುತತೆಯನ್ನು, ಕರ್ತವ್ಯವನ್ನು ನೆನಪಿಸುತ್ತದೆ.
ಸುರೇಶ್ ಮದುವೆಗೆ ಕರೆದಾಗ ಉಮ್ಮಳಿಸಿ ಬಂದ ನೆನಪುಗಳು, ನಮ್ಮ ಕಾಲೇಜು ದಿನಗಳನ್ನು ನೆನಪಿಸಿದವು. ಆ ದಿನಗಳಲ್ಲಿ ಗೆಳೆಯ- ಗೆಳತಿಯರೊಂದಿಗೆ ಆಡಿದ ಜಗಳ, ತಮಾಷೆ, ಜೋಕ್‌ಸ್‌, ಸಣ್ಣಗೆ ಹೌದೂ ಅಲ್ಲ ಮೂಡಿದ ಆತ್ಮೀಯತೆ ಎಲ್ಲಾಾ ನೆನಪಾದವು. ಹಾಗೇನೇ, ಮದುವೆಯಾಗಿ ದೂರ ದೂರದ ಊರಿಗೆ ಹೋದರೂ, ನಾವು ಹುಡುಗಿಯರು ನಮ್ಮ ಗೆಳೆತನವನ್ನು ಬಿಡದೇ ಉಳಿಸಿಕೊಳ್ಳುವ ಪರಿ ನೆನದು ಹೆಮ್ಮೆೆಯಾಯಿತು.