Tuesday, 3rd December 2024

ಮೂರು ಗಂಟಿನಲ್ಲಿ ಅಪೂರ್ವ ನಂಟು

*ದಿತ್ಯಾ ಗೌಡ

ಸಮಾಜದಲ್ಲಿ ವಿವಾಹ ಎಂಬ ಮೂರು ಅಕ್ಷರಕ್ಕೆೆ ತುಂಬಾ ಮಹತ್ವವಿದೆ. ಮದುವೆ ಎಂಬುದು ಒಂಟಿ ಜೀವಗಳು ಜಂಟಿಯಾಗುವಂತಹ ಬಂಧ. ಯಾವುದೇ ಹೆಣ್ಣುಮಗುವಿಗೆ ಮದುವೆ ಎಂಬುದು ಜೀವನದಲ್ಲಿ ಬರುವ ಅಮೂಲ್ಯವಾದ ಕ್ಷಣ. ತಾವು ಬೆಳೆದ ಮನೆಯನ್ನು ಬಿಟ್ಟು ಇನ್ನೊೊಬ್ಬರ ಮನೆಯಲ್ಲಿ ಹೋಗಿ ಅವರ ಜೀವನವನ್ನು ಹೊಸದಾಗಿ, ಹೊಸದಾದ ರೀತಿಯಲ್ಲಿ ಶುರುಮಾಡುವುದು ಒಂದು ತರಹದ ಸಂತೋಷ. ಇನ್ನೊೊಂದು ರೀತಿಯಲ್ಲಿ ನೋಡಿದರೆ ಆತಂಕ ಎನಿಸಿದರೂ, ಹೊಸ ಜೀವನವನ್ನು ಕಟ್ಟಿಿಕೊಳ್ಳುವ ಸವಾಲು, ಛಾಲೆಂಜ್ ಕೂಡ ಇಲ್ಲಿದೆ. ಹೊಸ ಜನರೊಂದಿಗೆ ಹೊಂದಿಕೊಳ್ಳುತ್ತಲೇ, ಮದುವೆಯಾದ ಜೀವನ ಸಂಗಾತಿಯ ಜತೆ ಅನ್ಯೋೋನ್ಯತೆ ಬೆಳೆಸುವ ಸವಾಲು ಸಹ ಇಲ್ಲಿದೆ.

ಮದುವೆ ಎಂದರೆ ತಕ್ಷಣ ನೆನಪಾಗುವುದು ಗಟ್ಟಿಿಮೇಳದ ವಾದ್ಯಗಳು, ಸಂಭ್ರಮ, ಸಂತೋಷ. ಒಂದು ಹೆಣ್ಣಿಿಗೆ ಆಗಿರಬಹುದು, ಗಂಡಿಗೆ ಆಗಿರಬಹುದು – ಅವರದ್ದೇ ಆದ ಮದುವೆಯ ಕನಸನ್ನು ಕಟ್ಟಿಿಕೊಂಡಿರುತ್ತಾಾರೆ. ವಿವಾಹ ಎಂಬ ಬಂಧ ಗುರುಹಿರಿಯರ ಸಮ್ಮುಖದಲ್ಲಿ ನಡೆದು ಪ್ರತಿಯೊಬ್ಬರ ಆಶಿರ್ವಾದಗಳನ್ನು ಉಡುಗೊರೆಯ ರೂಪದಲ್ಲಿ ಪಡೆಯುವ ಅವಕಾಶ.

ವರ ಮತ್ತು ವಧುವಿನ ಸಂಭಂಧ ಬಿರುಕುಗೊಳ್ಳದೆ ಸದಾ ಗಟ್ಟಿಿಯಾಗಿರಬೇಕು. ವಿವಾಹ ಎಂಬ ಬಂಧ ಆ ಕ್ಷಣಕ್ಕೆೆ ಖುಷಿಯನ್ನು ಕೊಡದೆ ಜೀವನಪೂರ್ತಿ ಖುಷಿ ಕೊಡವ ಹಾಗಿರಬೇಕು. ಮೂರು ಗಂಟಿನಲ್ಲಿ ನಂಟಾಗುವ ಬಂಧದಲ್ಲಿ ಸುಖ, ದುಃಖ, ನೋವು, ನಲಿವು ಇರಬೇಕೆ ಹೊರತು, ವೈರಾಗ್ಯ ಸಲ್ಲ. ಮದುವೆಯ ಮೂಲಕ ಗಟ್ಟಿಿಗೊಳ್ಳುವ ಸಂಬಂಧಗಳು ಯಾವುದೇ ಕಾರಣಕ್ಕೂ ಮುರಿದು ಹೋಗುವು ರೀತಿ ಆಗಬಾರದು.ಎರಡೂ ಮನಸ್ಸುಗಳು, ಎರಡೂ ಜೀವಗಳು ಮಿಲನವಾಗುವ ಸಮಯದಲ್ಲಿ ಒಬ್ಬರ ಮೇಲೆ ಇನ್ನೊೊಬ್ಬರಿಗೆ ನಂಬಿಕೆ ಇರಬೇಕು. ಹೆಣ್ಣಿಿಗೆ ಮೂರು ಗಂಟನ್ನು ಹಾಕುವಾಗ ಒಂದೊಂದು ಗಂಟಿಗೂ ಅದರದ್ದೇ ಆದ ಅರ್ಥವಿದೆ ಹಾಗೂ ಮಹತ್ವವಿದೆ. ಗಂಡು ಆ ಕ್ಷಣ ಹೆಣ್ಣಿಿನ ಮತ್ತು ಆ ಹೊಸ ಸಂಸಾರದ ಸಂಪೂರ್ಣ ಜವಾಬ್ದಾಾರಿ ಹಾಗೂ ರಕ್ಷಣೆಯನ್ನು ವಹಿಸಿಕೊಳ್ಳುತ್ತಾಾನೆ.

ಹೆಣ್ಣಿಿನ ಬಾಳಲ್ಲಿ ಆ ಮೂರು ಗಂಟುಗಳು ಹೇಗೆ ಮುಖ್ಯವಾಗುತ್ತವೆಯೋ, ಹಾಗೆ ಏಳು ಹೆಜ್ಜೆೆಗಳನ್ನು ತನ್ನ ಸಂಗಾತಿಯ ಜೊತೆ ಎಂದೆಂದಿಗೂ ಇರುತ್ತೇನೆ ಎಂದು ನಡೆಯುವ ಸಪ್ತಪದಿಯು ಸಹ ತುಂಬಾ ಮುಖ್ಯ. ಆ ಒಂದೊಂದು ಹೆಜ್ಜೆೆ ಸಹ ಗಂಡು- ಹೆಣ್ಣಿಿನ ಜೀವನದಲ್ಲಿ ಏನೇ ಕಷ್ಟ ಬಂದರು ಅದನ್ನು ಎದುರಿಸಿಕೊಂಡು ಮುಂದೆ ಹೋಗುವ ಛಲಕ್ಕೆೆ ಸ್ಫೂರ್ತಿ ನೀಡುವಂತಹದ್ದು.

ಹಾಗಾಗಿ ಜೀವನದಲ್ಲಿ ಒಂದೇ ಬಾರಿ ಬರುವ ನಮ್ಮ ಅಮೂಲ್ಯವಾದ ಕ್ಷಣವನ್ನು ಕಳೆದುಕೊಳ್ಳದೆ, ಆ ಮೂರು ಗಂಟಿನ ಬಂಧವನ್ನು ಮತ್ತು ಏಳು ಹೆಜ್ಜೆೆಗಳ ಅನುಬಂಧವನ್ನು ಸದಾ ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬ ಹೆಣ್ಣು ಹಾಗೂ ಗಂಡಿನ ಕರ್ತವ್ಯವಾಗಿರುತ್ತದೆ. ಆಗಲೇ ಮದುವೆ ಎಂಬ ಪವಿತ್ರ ಸಮಾರಂಭಕ್ಕೆೆ ಅರ್ಥ ಬರುತ್ತದೆ. ಗಂಡು ಮತ್ತು ಹೆಣ್ಣಿಿನ ಮದುವೆ ಎಂಬ ಬಂಧವು, ನಮ್ಮ ಸಾಮಾಜಿಕ ಚೌಕಟ್ಟಿಿನಲ್ಲಿ ರೂಪುಗೊಂಡಿದ್ದು, ಸಮಾಜವು ಸುಸಂಸ್ಕೃತವಾಗಿ ಬೆಳೆಯಲು ಇಂತಹ ಒಂದು ಸಂಸ್ಕೃತಿತುಂಬಿದ ಆಚರಣೆ ಮುಖ್ಯ ಎನಿಸುತ್ತದೆ.

ಮದುವೆ ಎಂಬ ಬಂಧದಿಂದ ಜತೆಯಾಗುವ ಹೆಣ್ಣು-ಗಂಡು, ಕ್ರಮೇಣ ತಮ್ಮ ಒಂದು ಸಂಸಾರವನ್ನು ಬೆಳೆಸುವ ಮೂಲಕ, ಸಮಾಜಕ್ಕೆೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾಾರೆ. ಸಮಾಜದ ಕಟ್ಟುಪಾಡುಗಳ ನಡುವೆಯೇ ಮದುವೆ ಎಂಬ ಬಂಧದ ಮೂಲಕ ಬೆಳಗುವ ಸಂಸಾರವು, ಆರೋಗ್ಯಕರ ಸಮಾಜವನ್ನು ಕಟ್ಟಿಿಕೊಡುವ ಜತೆಯಲ್ಲೇ, ಸಂಸ್ಕಾಾರಯುತ ನಾಡನ್ನು ಬೆಳೆಸುವಲ್ಲಿ ತನ್ನದೇ ಕೊಡುಗೆ ನೀಡುತ್ತದೆ. ಮದುವೆಯ ಬಂಧ ಪವಿತ್ರ, ಪೂಜ್ಯ ಮತ್ತು ಪುನೀತ.