ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramanathaswamy Temple: ರಾಮೇಶ್ವರಂ ದೇಗುಲದ ಹುಂಡಿಯಲ್ಲಿ 1.47 ಕೋಟಿ ರೂ. ನಗದು, 98 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ, 162 ವಿದೇಶಿ ಕರೆನ್ಸಿಗಳು

ತಮಿಳುನಾಡಿನ (Tamilnadu temple) ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ ದೇವಾಲಯದ ಸಿಬ್ಬಂದಿ ಮತ್ತು ಸ್ವಯಂಸೇವಕರ ಸಹಾಯದಿಂದ ಹುಂಡಿ ಎಣಿಕೆ ಕಾರ್ಯವನ್ನು ನಡೆಸಲಾಯಿತು. ಈ ವೇಳೆ ಹುಂಡಿಯಲ್ಲಿ ಸಂಗ್ರಹವಾದ ಒಟ್ಟು ಮೊತ್ತ 1,47,42,943 ರೂ. ಇದರೊಂದಿಗೆ 98 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಮತ್ತು 162 ವಿದೇಶಿ ಕರೆನ್ಸಿಗಳು ಕೂಡ ಸಿಕ್ಕಿವೆ. ದೇವಾಲಯದ ಹುಂಡಿ ಎಣಿಕೆ ಕಾರ್ಯವು ಈ ಬಾರಿ ಒಂದೇ ದಿನದಲ್ಲಿ ಪೂರ್ಣಗೊಂಡಿದೆ.

ರಾಮೇಶ್ವರಂ ದೇಗುಲದ ಹುಂಡಿಯಲ್ಲಿ 1.47 ಕೋಟಿ ರೂ. ನಗದು, 98 ಗ್ರಾಂ ಚಿನ್ನ

ರಾಮೇಶ್ವರಂ: ದೇವಾಲಯಗಳ ಹುಂಡಿಗಳಲ್ಲಿ ಹಣ ಮಾತ್ರವಲ್ಲ ಕೆಲವೊಮ್ಮೆ ವಿಶೇಷವಾದದ್ದು ಏನಾದರೂ ಸಿಗುತ್ತದೆ. ಇದು ಭಕ್ತರ ನಂಬಿಕೆಯನ್ನು ಆಧರಿಸಿ ಇರುತ್ತದೆ. ಇದೀಗ ತಮಿಳುನಾಡಿನ (Tamilnadu) ರಾಮೇಶ್ವರಂನಲ್ಲಿರುವ (Rameswaram ) ರಾಮನಾಥಸ್ವಾಮಿ ದೇವಾಲಯ (Ramanathaswamy Temple) ಹುಂಡಿ ಎಣಿಕೆಯ ಬಳಿಕ ಸುದ್ದಿ ಮಾಡಿದೆ. ದೇವಾಲಯದ ಹುಂಡಿಯಲ್ಲಿ ಬರೋಬ್ಬರಿ 1,47,42,943 ರೂ. ನಗದು, 98 ಗ್ರಾಂ ಚಿನ್ನ, 4 ಕೆ.ಜಿ. ಬೆಳ್ಳಿ ಮಾತ್ರವಲ್ಲ 162 ವಿದೇಶಿ ಕರೆನ್ಸಿಗಳು ಕೂಡ ಪತ್ತೆಯಾಗಿದೆ.

ರಾಮನಾಥಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ ದೇವಾಲಯದ ಸಿಬ್ಬಂದಿ ಮತ್ತು ಸ್ವಯಂಸೇವಕರ ಸಹಾಯದಿಂದ ಹುಂಡಿ ಎಣಿಕೆ ಕಾರ್ಯವನ್ನು ನಡೆಸಲಾಯಿತು. ಈ ವೇಳೆ ಹುಂಡಿಯಲ್ಲಿ ಸಂಗ್ರಹವಾದ ಒಟ್ಟು ಮೊತ್ತ 1,47,42,943 ರೂ. ಇದರೊಂದಿಗೆ 98 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಮತ್ತು 162 ವಿದೇಶಿ ಕರೆನ್ಸಿಗಳು ಕೂಡ ಸಿಕ್ಕಿವೆ. ದೇವಾಲಯದ ಹುಂಡಿ ಎಣಿಕೆ ಕಾರ್ಯವು ಈ ಬಾರಿ ಒಂದೇ ದಿನದಲ್ಲಿ ಪೂರ್ಣಗೊಂಡಿದೆ. ದೇವಾಲಯದ ಹುಂಡಿಯಲ್ಲಿ ಸಿಕ್ಕಿರುವ ಭಾರಿ ಪ್ರಮಾಣದ ಹಣ ದೇಶೀಯ ಮತ್ತು ಅಂತಾರಾಷ್ಟ್ರೀಯ ಭಕ್ತರ ಅಚಲ ನಂಬಿಕೆಯನ್ನು ಪ್ರತಿಬಿಂಬಿಸಿದೆ. ಈ ಹಣವನ್ನು ದೇವಾಲಯದ ನಿರ್ವಹಣೆ, ಭಕ್ತರಿಗೆ ವಿವಿಧ ಸೌಲಭ್ಯ ಕಲ್ಪಿಸಲು ಮತ್ತು ವಿವಿಧ ಸಾಮಾಜಿಕ ಕಾರ್ಯಗಳಿಗಾಗಿ ಒದಗಿಸಲು ಬಳಸಲಾಗುತ್ತದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Asaduddin Owaisi: ಉಗ್ರರನ್ನು ಖಂಡಿಸಿದ ಓವೈಸಿ ಹೇಳಿಕೆಗೆ ಎಲ್ಲೆಡೆ ಮೆಚ್ಚುಗೆ; ವೈರಲ್ ಆಯ್ತು ಆ ವಿಡಿಯೊ

ವಿಶ್ವದ ವಿವಿಧ ಮೂಲೆಗಳಿಂದ ಭಕ್ತರನ್ನು ಸೆಳೆಯುತ್ತಿರುವ ಈ ದೇವಾಲಯವು ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಚಾರ್ ಧಾಮ್ ಯಾತ್ರೆ ಕೈಗೊಳ್ಳುವ ಭಕ್ತರು ಇಲ್ಲಿಗೂ ಬರುತ್ತಾರೆ. ಭವ್ಯವಾದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿರುವ ಈ ದೇವಾಲಯದಲ್ಲಿ ಸಂಕೀರ್ಣವಾದ ಕೆತ್ತನೆಯುಳ್ಳ ಕಂಬಗಳು, ಭವ್ಯ ಗೋಪುರಗಳನ್ನು ಹೊಂದಿದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಇದು ಒಂದಾಗಿದೆ. ಪ್ರತಿ ವರ್ಷ ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.