Thursday, 19th September 2024

ಪಿಂಕ್ ಟೆಸ್‌ಟ್‌‌ಗೆ ಪಿಚ್ ಸಿದ್ಧ: ಕ್ಯೂರೇಟರ್

ಕೋಲ್ಕತ್ತಾ:
ಭಾರತ ಹಾಗೂ ಬಾಂಗ್ಲಾಾದೇಶ ನಡುವಿನ ಹೊನಲು-ಬೆಳಕಿನ ಪಿಂಕ್ ಬಾಲ್ ಟೆಸ್‌ಟ್‌ ಪಂದ್ಯಕ್ಕೆೆ ಪಿಚ್ ಸಿದ್ಧವಾಗಿದೆ ಎಂದು ಇಲ್ಲಿನ ಈಡೆನ್ ಗಾರ್ಡನ್‌ಸ್‌ ಕ್ರೀಡಾಂಗಣದ ಪಿಚ್ ಕ್ಯೂರೇಟರ್ ಸುಜನ್ ಮುಖರ್ಜಿ ತಿಳಿಸಿದ್ದಾಾರೆ. ಇದೇ 22 ರಿಂದ ಆರಂಭವಾಗುವ ಐತಿಹಾಸಿಕ ಟೆಸ್‌ಟ್‌ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿಿದೆ. ಟೀಮ್ ಇಂಡಿಯಾ ಆಟಗಾರರು ಸೇರಿದಂತೆ ಕ್ರಿಿಕೆಟ್ ಅಭಿಮಾನಿಗಳಿಗೆ ಮೊಟ್ಟ ಮೊದಲ ಬಾರಿ ಭಾರತದಲ್ಲಿ ನಡೆಯುತ್ತಿಿರುವ ಪಿಂಕ್ ಚೆಂಡಿನ ಪಂದ್ಯದ ಮೇಲೆ ಭಾರೀ ನಿರೀಕ್ಷೆೆ ಇಟ್ಟಿಿದ್ದಾಾರೆ. ಈಗಾಗಲೇ ಭಾರತ ತಂಡ ಇಂದೋರ್ ನಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಇನಿಂಗ್‌ಸ್‌ ಹಾಗೂ 130 ರನ್ ಗಳಿಂದ ಜಯ ಸಾಧಿಸಿತ್ತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದಿದೆ. ಪಿಚ್ ಬಗ್ಗೆೆ ಪ್ರತಿಕ್ರಿಿಯಿಸಿರುವ ಸುಜನ್ ಮುಖರ್ಜಿ, ‘‘ಕಳೆದ ವಾರ ಭಾರಿ ಮಳೆಯಾಗಿತ್ತು. ಇದರಿಂದ ಸಾಕಷ್ಟು ಹಾನಿಯಾಗಿತ್ತು. ಆದರೆ, ಇದೀಗ ಮಳೆ ನಿಂತಿದ್ದು ಇನ್ನೂ ಪಂದ್ಯಕ್ಕೆೆ ನಾಲ್ಕು ದಿನಗಳು ಬಾಕಿ ಇದೆ. ಈಗಾಗಲೇ ಪಂದ್ಯಕ್ಕೆೆ ಪಿಚ್ ಸಿದ್ದವಾಗಿದೆ. ಕಳೆದ ಹಲವು ವರ್ಷಗಳಿಂದ ಇದ್ದ ಪಿಚ್‌ಗಿಂತ ಇಂದಿನ ಪಿಚ್ ಅತ್ಯುತ್ತಮವಾಗಿದೆ ಎಂದು ಭಾವಿಸಿದ್ದೇನೆ.’’ ಎಂದು ಭಾನುವಾರ ತಿಳಿಸಿದ್ದಾಾರೆ.
==