ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಂಡ್ರೆ ರಸೆಲ್

andre russell retirement: ರಸೆಲ್ ವೆಸ್ಟ್ ಇಂಡೀಸ್ ಪರ ಒಟ್ಟು 15 ವರ್ಷಗಳನ್ನು ಆಡಿದ್ದಾರೆ. ಈ ವೇಳೆ ಒಂದು ಟೆಸ್ಟ್‌ 56 ಏಕದಿನ ಮತ್ತು 84 ಟಿ20 ಪಂದ್ಯಗಳನ್ನು ಆಡಿದಾರೆ. ಏಕದಿನದಲ್ಲಿ 1034, ಟಿ20ಯಲ್ಲಿ 1078 ರನ್‌ ಬಾರಿಸಿದಾರೆ. ಬೌಲಿಂಗ್‌ನಲ್ಲಿಯೂ ಸಾಧನೆ ಮಾಡಿರುವ ಅವರು ಮೂರು ಮಾರಿ ಸೇರಿ ಒಟ್ಟು 132 ವಿಕೆಟ್‌ ಕಿತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಂಡ್ರೆ ರಸೆಲ್

Profile Abhilash BC Jul 17, 2025 8:41 AM

ಬಾರ್ಬಡೋಸ್‌: ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳ ನಂತರ ವೆಸ್ಟ್‌ ಇಂಡೀಸ್‌ ತಂಡದ ಆಲ್‌ರೌಂಡರ್‌ ಆಂಡ್ರೆ ರಸೆಲ್(andre russell retirement) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೊಂದಲಿದ್ದಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಘೋಷಿಸಿದೆ. ಸರಣಿಯ ಮೊದಲ ಎರಡು ಪಂದ್ಯಗಳು ರಸೆಲ್ ಅವರ ತವರು ಮೈದಾನವಾದ ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ನಡೆಯಲಿವೆ. ಪಂದ್ಯಗಳು ಜುಲೈ 20 ಮತ್ತು 22 ರಂದು ನಡೆಯಲಿವೆ.

ಇತ್ತೀಚೆಗಷ್ಟೇ ತಂಡದ ಯುವ ಆಟಗಾರ ನಿಕೋಲಸ್ ಪೂರನ್ ದಿಢೀರ್‌ ನಿವೃತ್ತಿ ಘೋಷಿಸಿದ್ದರು. ಇದೀಗ ರಸೆಲ್‌ ಕೂಡ ನಿವೃತ್ತಿಯಾಗಲಿದಾರೆ. ರಸೆಲ್ 2012 ಮತ್ತು 2016 ರಲ್ಲಿ ಟಿ20 ವಿಶ್ವಕಪ್ ಗೆದ್ದ ವಿಂಡೀಸ್ ತಂಡದ ಭಾಗವಾಗಿದ್ದರು.

ರಸೆಲ್ ವೆಸ್ಟ್ ಇಂಡೀಸ್ ಪರ ಒಟ್ಟು 15 ವರ್ಷಗಳನ್ನು ಆಡಿದ್ದಾರೆ. ಈ ವೇಳೆ ಒಂದು ಟೆಸ್ಟ್‌ 56 ಏಕದಿನ ಮತ್ತು 84 ಟಿ20 ಪಂದ್ಯಗಳನ್ನು ಆಡಿದಾರೆ. ಏಕದಿನದಲ್ಲಿ 1034, ಟಿ20ಯಲ್ಲಿ 1078 ರನ್‌ ಬಾರಿಸಿದಾರೆ. ಬೌಲಿಂಗ್‌ನಲ್ಲಿಯೂ ಸಾಧನೆ ಮಾಡಿರುವ ಅವರು ಮೂರು ಮಾರಿ ಸೇರಿ ಒಟ್ಟು 132 ವಿಕೆಟ್‌ ಕಿತ್ತಿದ್ದಾರೆ.

"ಅದರ ಅರ್ಥವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ಸಾಧನೆಗಳಲ್ಲಿ ಒಂದಾಗಿದೆ. ನಾನು ಚಿಕ್ಕವನಿದ್ದಾಗ, ನಾನು ಈ ಮಟ್ಟಕ್ಕೆ ತಲುಪುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ನೀವು ಹೆಚ್ಚು ಆಟವಾಡಲು ಮತ್ತು ಕ್ರೀಡೆಯನ್ನು ಪ್ರೀತಿಸಲು ಪ್ರಾರಂಭಿಸಿದಾಗ, ನೀವು ಏನನ್ನು ಸಾಧಿಸಬಹುದು ಎಂಬುದನ್ನು ನೀವು ಅರಿತುಕೊಳ್ಳುತ್ತೀರಿ. ಇದು ನನಗೆ ಉತ್ತಮವಾಗಲು ಸ್ಫೂರ್ತಿ ನೀಡಿತು ಏಕೆಂದರೆ ನಾನು ಮೆರೂನ್ ಬಣ್ಣಗಳಲ್ಲಿ ಒಂದು ಗುರುತು ಬಿಟ್ಟು ಇತರರಿಗೆ ಸ್ಫೂರ್ತಿಯಾಗಲು ಬಯಸಿದ್ದೆ"

"ನನಗೆ ವೆಸ್ಟ್ ಇಂಡೀಸ್ ಪರ ಆಡುವುದು ತುಂಬಾ ಇಷ್ಟ ಮತ್ತು ನನ್ನ ಕುಟುಂಬ ಮತ್ತು ಸ್ನೇಹಿತರ ಮುಂದೆ ಮನೆಯಲ್ಲಿ ಆಡುವುದನ್ನು ನಾನು ಇಷ್ಟಪಡುತ್ತೇನೆ. ಅಲ್ಲಿ ನಾನು ನನ್ನ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಹೆಚ್ಚು ಉತ್ತಮ ಗುಣಮಟ್ಟದ ಪ್ರದರ್ಶನಗಳನ್ನು ನೀಡಲು ಅವಕಾಶ ಪಡೆಯುತ್ತೇನೆ. ಕೆರಿಬಿಯನ್‌ನಿಂದ ಹೊರಬರುವ ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ಮಾದರಿಯಾಗಿ ನನ್ನ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಉನ್ನತ ಮಟ್ಟದಲ್ಲಿ ಮುಗಿಸಲು ನಾನು ಬಯಸುತ್ತೇನೆ" ಎಂದು ರಸೆಲ್‌ ಹೇಳಿದರು.

ಆಸ್ಟ್ರೇಲಿಯಾ ಟಿ20 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ತಂಡ

ಶಾಯ್ ಹೋಪ್ (ನಾಯಕ), ಜ್ಯುವೆಲ್ ಆಂಡ್ರ್ಯೂ, ಜೆಡಿಯಾ ಬ್ಲೇಡ್ಸ್, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೈರ್, ಜೇಸನ್ ಹೋಲ್ಡರ್, ಅಕೇಲ್ ಹೊಸೇನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಎವಿನ್ ಲೂಯಿಸ್, ಗುಡಕೇಶ್ ಮೋಟೀ, ರೋವ್‌ಮನ್ ಪೊವೆಲ್, ಆಂಡ್ರೆ ರಸೆಲ್, ಶೆರ್ಫೇನ್ ರುದರ್ಫೋರ್ಡ್ ಮತ್ತು ರೊಮಾರಿಯೊ ಶೆಫರ್ಡ್.