Thursday, 19th September 2024

ಭಾರತದ ಆರ್ಚರಿ ಪಟುಗಳಿಗೆ ಆಘಾತ

ದೆಹಲಿ:
ಮುಂಬರುವ 2020ರ ಟೋಕಿಯೊ ಒಲಿಂಪಿಕ್‌ಸ್‌‌ಗೆ ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ಭಾರತೀಯ ಆರ್ಚರಿ ಪಟುಗಳಿಗೆ ಎರಡು ಹೊಡೆತಗಳು ಬಿದ್ದಿವೆ. ಭಾರತ ಆರ್ಚರಿ ಒಕ್ಕೂಟವು ವಿಶ್ವ ಆರ್ಚರಿ ಒಕ್ಕೂಟದಿಂದ ನಿಷೇಧ ಶಿಕ್ಷಗೆ ಒಳಗಾಗಿದೆ. ಹಾಗಾಗಿ, ಒಲಿಂಪಿಕ್‌ಸ್‌ ಅರ್ಹತಾ ಸುತ್ತಿಿನ ಸ್ಫರ್ಧೆಯಲ್ಲಿ ದೇಶದ ಸ್ಪರ್ಧಿಗಳು ಭಾರತದ ಭಾವುಟವಿಲ್ಲದೆ ಒಲಿಂಪಿಕ್‌ಸ್‌ ಅರ್ಹತಾ ಸುತ್ತಿಿನ ಪಂದ್ಯಗಳಲ್ಲಿ ಭಾಗವಹಿಸಬೇಕು. ಜತೆಗೆ, ಮುಂದಿನ ಡಿಸೆಂಬರ್ 1 ರಿಂದ 10ರವರೆಗೆ ನೇಪಾಳ್ ದಲ್ಲಿ ನಡೆಯುವ ದಕ್ಷಿಿಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಆರ್ಚರಿ ಪಟುಗಳು ಭಾಗವಹಿಸದಂತೆ ನಿಷೇಧ ಹೇರಲಾಗಿದೆ. ಈ ನಿರ್ಧಾರವನ್ನು ಇತ್ತೀಚೆಗೆ ಡಾಕಾದಲ್ಲಿ ನಡೆದಿದ್ದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಇದರಿಂದ ಭಾರತ ಆರ್ಚರಿ ಒಕ್ಕೂಟ ತೀವ್ರ ಒತ್ತಡಕ್ಕೆೆ ಒಳಗಾಗಿದೆ. ಇದಕ್ಕೂ ಮೊದಲು ಭಾರತ ಆರ್ಚರಿ ಒಕ್ಕೂಟ, ವಿಶ್ವ ಆರ್ಚರಿ ಒಕ್ಕೂಟದಿಂದ ನಿಷೇಧ ಶಿಕ್ಷಗೆ ಒಳಗಾಗಿತ್ತು. ಈ ಹಿನ್ನೆೆಲೆಯಲ್ಲಿ ದಕ್ಷಿಿಣ ಆರ್ಚರಿ ಒಕ್ಕೂಟಕ್ಕೂ ಇದೇ ನಿಯಮವನ್ನು ಪಾಲಿಸಬೇಕೆಂದು ವಿಶ್ವ ಆರ್ಚರಿ ಒಕ್ಕೂ ಸೂಚನೆ ನೀಡಿತ್ತು. ಹಾಗಾಗಿ, ಭಾರತವನ್ನು 13ನೇ ದಕ್ಷಿಿಣ ಏಷ್ಯನ್ ಕ್ರೀಡಾಕೂಟಕ್ಕೆೆ ಅವಕಾಶ ನೀಡಿಲ್ಲ.
==