ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RR vs PBKS: ಪಂಜಾಬ್‌ ಕಿಂಗ್ಸ್‌ ಎದುರು ಜೋಫ್ರಾ ಆರ್ಚರ್‌ ಆಡದೇ ಇರಲು ಕಾರಣವೇನು?

Why Jofra Archer not playing vs PBKS?: ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 59ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ರಾಜಸ್ಥಾನ್‌ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್‌ ಆಡಿರಲಿಲ್ಲ. ಇದಕ್ಕೆ ಕಾರಣವನ್ನು ಇಲ್ಲಿ ವಿವರಿಸಲಾಗಿದೆ.

ಪಂಜಾಬ್‌ ಎದುರು ಜೋಫ್ರಾ ಆರ್ಚರ್‌ ಆಡದೇ ಇರಲು ಕಾರಣವೇನು?

ಜೋಫ್ರಾ ಆರ್ಚರ್‌ ಹೆಬ್ಬೆರಳು ಗಾಯಕ್ಕೆ ತುತ್ತಾಗಿದ್ದಾರೆ.

Profile Ramesh Kote May 18, 2025 5:04 PM

ಜೈಪುರ: ಇಲ್ಲಿನ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಭಾನುವಾರ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 59ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳು (RR vs PBKS) ಕಾದಾಟ ನಡೆಸಿದ್ದವು. ಈ ಪಂದ್ಯಕ್ಕೆ ಎರಡೂ ತಂಡಗಳು ತನ್ನ ಪ್ಲೇಯಿಂಗ್‌ XIನಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡವು. ಆದರೆ, ರಾಜಸ್ಥಾನ್‌ ರಾಯಲ್ಸ್‌ ತಂಡದ ಪ್ಲೇಯಿಂಗ್‌ XIನಲ್ಲಿ ಪ್ರಮುಖ ವೇಗಿ ಜೋಫ್ರಾ ಆರ್ಚರ್‌ (Jofra Archer) ಹೆಸರು ಇರಲಿಲ್ಲ. ಇದರಿಂದ ಅಭಿಮಾನಿಗಳಿಗೆ ಅಚ್ಚರಿಯಾಗಿತ್ತು. ಏಕೆಂದರೆ ಈ ಟೂರ್ನಿಯುದ್ದಕ್ಕೂ ಇಂಗ್ಲೆಂಡ್‌ ವೇಗಿ ಸ್ಥಿರ ಬೌಲಿಂಗ್‌ ಪ್ರದರ್ಶನವನ್ನು ತೋರುತ್ತಿದ್ದಾರೆ. ಇದೀಗ ಅವರು ಆಡದೇ ಇರುವುದು ರಾಜಸ್ಥಾನ್‌ ರಾಯಲ್ಸ್‌ಗೆ ಭಾರಿ ಹಿನ್ನಡೆಯನ್ನು ತಂದೊಡ್ಡಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿಯ ಕಾರಣ ಐಪಿಎಲ್‌ ಟೂರ್ನಿಯನ್ನು ಒಂದು ವಾರದ ಅವಧಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲ ವಿದೇಶಿ ಆಟಗಾರರು ತಮ್ಮ-ತಮ್ಮ ತವರು ರಾಷ್ಟ್ರಗಳಿಗೆ ಮರಳಿದ್ದರು. ನಂತರ ಟೂರ್ನಿಯ ಇನ್ನುಳಿದ ಪಂದ್ಯಗಳ ವೇಳಾ ಪಟ್ಟಿ ಬಿಡುಗಡೆಯಾದ ಬಳಿಕ ವಿದೇಶಿ ಆಟಗಾರರು ಭಾರತಕ್ಕೆ ಮರಳಿದ್ದಾರೆ. ಆದರೆ, ಇಂಗ್ಲೆಂಡ್‌ನಿಂದ ಜೋಫ್ರಾ ಆರ್ಚರ್‌ ಭಾರತಕ್ಕೆ ಮರಳಿಲ್ಲ. ಅವರು ಐಪಿಎಲ್‌ ಟೂರ್ನಿಯ ಇನ್ನುಳಿದ ಭಾಗದಿಂದ ವಿಥ್‌ಡ್ರಾ ಮಾಡಿಕೊಂಡಿಲ್ಲ. ಆದರೆ, ಅವರಿಗೆ ಹೆಬ್ಬೆರಳು ಗಾಯವಾಗಿದೆ. ಈ ಕಾರಣದಿಂದಾಗಿ ಅವರು ಭಾರತಕ್ಕೆ ಆಗಮಿಸಿಲ್ಲ. ಅವರು ಆರ್‌ಆರ್‌ ಪರ ಆಡಿದ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

IPL 2025: ʻಕೆಕೆಆರ್‌ನ ಐಪಿಎಲ್‌ ಗೆಲುವಿನ ಶ್ರೇಯ ಶ್ರೇಯಸ್‌ ಅಯ್ಯರ್‌ಗೆ ಸಿಕ್ಕಿರಲಿಲ್ಲʼ-ಸುನೀಲ್‌ ಗವಾಸ್ಕರ್‌!

ಜೋಫ್ರಾ ಆರ್ಚರ್‌ ಅವರ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ಯುವ ವೇಗಿ ಕ್ವೇನಾ ಎಂಫಾಕ ರಾಜಸ್ಥಾನ್‌ ರಾಯಲ್ಸ್‌ ತಂಡದ ಪ್ಲೇಯಿಂಗ್‌ XIನಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಗಾಯದಿಂದ ಗುಣಮುಖರಾಗಿರುವ ಸಂಜು ಸ್ಯಾಮ್ಸನ್‌ ಅವರು ರಾಜಸ್ಥಾನ್‌ ರಾಯಲ್ಸ್‌ಗೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಆರ್‌ಗೆ ಆನೆ ಬಲ ಬಂದಂತಾಗಿದೆ. ಒಂದು ತಿಂಗಳಿಗೂ ಅಧಿಕ ಅವಧಿಯ ಬಳಿಕ ಸಂಜು ಸ್ಯಾಮ್ಸನ್‌ ಆರ್‌ಆರ್‌ ಪ್ಲೇಯಿಂಗ್‌ XIಗೆ ಮರಳಿದ್ದಾರೆ. ಸಂಜು ಅನುಪಸ್ಥಿತಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ರಿಯಾನ್‌ ಪರಾಗ್‌ ಮುನ್ನಡೆಸಿದ್ದರು.

ರಾಜಸ್ಥಾನ್‌ ರಾಯಲ್ಸ್‌ ತಂಡದ ಪಾಲಿಗೆ 2025ರ ಐಪಿಎಲ್‌ ಟೂರ್ನಿಯ ಸಂಗತಿಗಳು ಉತ್ತಮವಾಗಿರಲಿಲ್ಲ. ಇಲ್ಲಿಯವರೆಗೂ ಆಡಿದ 12 ಪಂದ್ಯಗಳಿಂದ ರಾಜಸ್ಥಾನ್‌, ಕೇವಲ ಮೂರರಲ್ಲಿ ಗೆಲುವು ಪಡೆದಿದೆ. ಆ ಮೂಲಕ 9 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಇದರೊಂದಿಗೆ ಅಧಿಕೃತವಾಗಿ ಸಂಜು ಸ್ಯಾಮ್ಸನ್‌ ಪರ ಪ್ಲೇಆಫ್ಸ್‌ ರೇಸ್‌ನಿಂದ ಅಧಿಕೃತವಾಗಿ ಹೊರ ನಡೆದಿದೆ. ಇನ್ನುಳಿದ ಎರಡು ಪಂದ್ಯಗಳನ್ನು ಗೆದ್ದು ಗೌರವದೊಂದಿಗೆ ಟೂರ್ನಿಯನ್ನು ತೊರೆಯಲು ರಾಜಸ್ಥಾನ್‌ ತಂಡ ಎದುರು ನೋಡುತ್ತಿದೆ.

IPL 2025: ಕೆಕೆಆರ್‌ ತಂಡ ಸೇರಿದ ಶಿವಂ ಶುಕ್ಲಾ ಯಾರು?

ಆದರೆ, ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ತಂಡ ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿದೆ. ಆಡಿದ 11 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಪಡೆದಿದೆ. ಇದರಲ್ಲಿ ಒಂದು ಪಂದ್ಯ ಫಲಿತಾಂಶವಿಲ್ಲದೆ ಮುಗಿದಿದೆ. ಒಟ್ಟು 15 ಅಂಕಗಳನ್ನು ಕಲೆ ಹಾಕಿರುವ ಪಂಜಾಬ್‌ ಕಿಂಗ್ಸ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ.

ಉಭಯ ತಂಡಗಳ ಪ್ಲೇಯಿಂಗ್‌ XI

ರಾಜಸ್ಥಾನ್‌ ರಾಯಲ್ಸ್‌: ಸಂಜು ಸ್ಯಾಮ್ಸನ್‌ (ನಾಯಕ, ವಿ.ಕೀ), ಯಶಸ್ವಿ ಜೈಸ್ವಾಲ್‌, ವೈಭವ್‌ ಸೂರ್ಯವಂಶಿ, ರಿಯಾನ್‌ ಪರಾಗ್‌, ಶಿಮ್ರಾನ್‌ ಹೆಟ್ಮಾಯೆರ್‌, ಧ್ರುವ್‌ ಜುರೆಲ್‌, ವಾನಿಂದು ಹಸರಂಗ, ಕ್ವೇನಾ ಎಂಫಾಕ, ತುಷಾರ್‌ ದೇಶಪಾಂಡೆ, ಆಕಾಶ್‌ ಮಧ್ವಾಲ್‌, ಫಝಲಕ್‌ ಫಾರೂಕಿ

ಪಂಜಾಬ್‌ ಕಿಂಗ್ಸ್‌: ಶ್ರೇಯಸ್‌ ಅಯ್ಯರ್‌ (ನಾಯಕ), ಪ್ರಿಯಾಂಶ್‌ ಆರ್ಯ, ಪ್ರಭ್‌ಸಿಮ್ರನ್‌ ಸಿಂಗ್‌, ಶಶಾಂಕ್‌ ಸಿಂಗ್‌, ನೆಹಾಲ್‌ ವಧೇರಾ, ಮಿಚೆಲ್‌ ಒವೆನ್‌, ಅಝಮತ್‌ವುಲ್ಲಾ ಒಮರ್ಜಾಯ್‌, ಮಾರ್ಕೊ ಯೆನ್ಸನ್‌, ಕ್ಸಿವಿಯರ್‌ ಬಾರ್ಲೆಟ್‌, ಅರ್ಷದೀಪ್‌ ಸಿಂಗ್‌, ಯುಜ್ವೇಂದ್ರ ಚಹಲ್‌