Saturday, 10th June 2023

ನ್ಯೂಜಿಲ್ಯಾಂಡ್ ವಿರುದ್ಧ ಇಂಗ್ಲೆಂಡ್ ಭರ್ಜರಿ ಜಯ

ಬ್ರಿಸ್ಬೆನ್: ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಜಯ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಪೇರಿಸಿತ್ತು. ಇನ್ನು ಇಂಗ್ಲೆಂಡ್ ನೀಡಿದ 180 ರನ್ ಗಳ ಗುರಿ ಬೆನ್ನಟ್ಟಿ ನ್ಯೂಜಿಲ್ಯಾಂಡ್ ತಂಡ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಅಷ್ಟೇ ಪೇರಿಸಲು ಸಾಧ್ಯವಾಗಿದ್ದು 20 ರನ್ ಗಳಿಂದ ಸೋಲು ಕಂಡಿದೆ.
ಇಂಗ್ಲೆಂಡ್ ಪರ ಜೋಸ್ ಬಟ್ಲರ್ ಅದ್ಭುತ ಬ್ಯಾಟಿಂಗ್ ಮಾಡಿದ್ದು 73 ರನ್ ಪೇರಿಸಿದರು. ಇನ್ನು ಅಲೆಕ್ಸ್ ಹಾಲೇಸ್ 52, ಲಿವಿಂಗ್ಸ್ಟೋನ್ 20 ರನ್ ಪೇರಿಸಿದ್ದಾರೆ.
ನ್ಯೂಜಿಲ್ಯಾಂಡ್ ಪರ ಫಿನ್ ಅಲೆನ್ 16, ಕೇನ್ ವಿಲಿಯಮ್ಸನ್ 40, ಗ್ಲೇನ್ ಫಿಲಿಪ್ಸ್ 62 ರನ್ ಪೇರಿಸಿದ್ದಾರೆ. ಇನ್ನು ಕ್ರಿಸ್ ವೋಕ್ಸ್ ಮತ್ತು ಸ್ಯಾಮ್ ಕುರೇನ್ ತಲಾ 2 ವಿಕೆಟ್ ಪಡೆದಿದ್ದಾರೆ. ಗ್ರೂಪ್ 1 ಪಟ್ಟಿಯಲ್ಲಿ ಐದು ಅಂಕಗಳೊಂದಿಗೆ ಕ್ರಮವಾಗಿ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಮೊದಲೆರಡು ಸ್ಥಾನಗಳಲ್ಲಿವೆ.
error: Content is protected !!