Thursday, 7th December 2023

ಉರುಳಿದ ಬೆನ್‌ ಸ್ಟೋಕ್ಸ್: ಸಂಕಷ್ಟದಲ್ಲಿ ಇಂಗ್ಲೆಂಡ್‌

ಬರ್ಮಿಂಗ್ ಹ್ಯಾಮ್: ಟೀಂ ಇಂಡಿಯಾದ ನಾಯಕ ಜಸ್ ಪ್ರೀತ್ ಬುಮ್ರಾ ಮಾರಕ ದಾಳಿಗೆ ಆರಂಭದಲ್ಲಿ ತತ್ತರಿಸಿದ ಇಂಗ್ಲೆಂಡ್ ಎರಡನೇ ದಿನ ನಿಧಾನ ಗತಿಯ ಆಟಕ್ಕೆ ಮೊರೆ ಹೋಯಿತು.

ಇತ್ತೀಚಿನ ವರದಿ ಪ್ರಕಾರ, ಆತಿಥೇಯರು ಆರನೇ ವಿಕೆಟ್ ರೂದಪಲ್ಲಿ ನಾಯಕ, ಆಲ್ರೌಂಡರ್‌ ಬೆನ್ ಸ್ಟೋಕ್ಸ್ (೨೫) ಅವರ ವಿಕೆಟ್‌ ಕಳೆದುಕೊಂಡಿತು. ಈ ವಿಕೆಟ್ ವೇಗಿ ಶಾರ್ದೂಲ್ ಠಾಕೂರ್‌ ಪಾಲಾಯಿತು. ಜಾನಿ ಬೇರ್‌ ಸ್ಟೋ ಅರ್ಧಶತಕ ಸಿಡಿಸಿದ್ದು, ಆಟ ಮುಂದುವರಿಸಿದ್ದಾರೆ.

ಮೊದಲ ಇನಿಂಗ್ಸ್ ನಲ್ಲಿ 416 ರನ್ ಗಳಿಸಿರುವ ಭಾರತ ಭಾರೀ ಮುನ್ನಡೆಯತ್ತ ದಾಪುಗಾಲಿರಿಸಿದೆ.

ಇಂಗ್ಲೆಂಡ್ ಹಿನ್ನಡೆ ತಪ್ಪಿಸಿಕೊಳ್ಳಬೇಕಾದರೆ ಉಳಿದ ೪ ವಿಕೆಟ್ ಗಳಿಂದ ೨೫೭ ರನ್ ಗಳಿಸಬೇಕಾಗಿದೆ. ಬ್ಯಾಟಿಂಗ್ ನಲ್ಲಿ ವಿಶ್ವ  ದಾಖಲೆ ಮಾಡಿದ ಬುಮ್ರಾ ಅದೇ ಸಂಭ್ರಮದಲ್ಲಿ 3 ವಿಕೆಟ್ ಪಡೆದು ಭಾರತಕ್ಕೆ ಭರ್ಜರಿ ಆರಂಭ ನೀಡಿದರು. ನಂತರ ಮೊಹಮದ್ ಶಮಿ ಮತ್ತು ಮೊಹಮದ್ ಸಿರಾಜ್ ತಲಾ 1 ವಿಕೆಟ್ ಪಡೆದು ಇಂಗ್ಲೆಂಡ್ ಸಂಕಷ್ಟ ಹೆಚ್ಚಿಸಿದರು.

error: Content is protected !!