Sunday, 8th September 2024

ಇಬ್ಬರು ಐಸಿಸಿ ಅಧಿಕಾರಿಗಳ ರಾಜೀನಾಮೆ

ವದೆಹಲಿ: ಅಮೆರಿಕಾ ಮತ್ತು ವೆಸ್ಟ್​​ ಇಂಡೀಸ್​ ಸಹ ಅತಿಥ್ಯ ವಹಿಸಿಕೊಂಡಿದ್ದ ಟಿ20 ವಿಶ್ವಕಪ್​ 2024ರ ಟೂರ್ನಿ ಇತ್ತೀಚೆಗಷ್ಟೇ ಬಾರ್ಬಡೋಸ್​ನಲ್ಲಿ ಅಂತ್ಯಗೊಂಡಿದ್ದು, ಈ ಬಾರಿಯ ಟೂರ್ನಿಯನ್ನು ವಿದೇಶದಲ್ಲಿ ಆಯೋಜನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಬ್ಬರು ಐಸಿಸಿ ಅಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ.

ಟಿ20 ವಿಶ್ವಕಪ್ ಆಯೋಜನೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಹಿರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧಿಕಾರಿಗಳು ರಾಜೀನಾಮೆ ಕೊಟ್ಟಿರುವುದು ಇದರ ಹಿಂದೆ ಬೇರೆ ಯಾರದ್ದಾದರೂ ಕೈವಾಡವಿದೆಯೇ ಅಥವಾ ಬಲವಾದ ಕಾರಣವಿರಬಹುದೇ ಎಂದು ಅನುಮಾನ ವ್ಯಕ್ತಪಡಿಸಿ ದ್ದಾರೆ. ಅಸಲಿಗೆ ಹಿರಿಯ ಅಧಿಕಾರಿಗಳ ರಾಜೀನಾಮೆ ಬಹಳ ದಿನಗಳ ಹಿಂದೆಯೇ ಧೃಡವಾಗಿತ್ತು ಎಂದು ಐಸಿಸಿ ತಿಳಿಸಿದೆ.

ಐಸಿಸಿಯ ಈವೆಂಟ್‌ಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ ಮತ್ತು ಮಾರ್ಕೆಟಿಂಗ್ ಹಾಗೂ ಸಂವಹನಗಳ ಜನರಲ್ ಮ್ಯಾನೇಜರ್ ಆಗಿದ್ದ ಕ್ಲೇರ್ ಫರ್ಲಾಂಗ್ ಅವರು ಶ್ರೀಲಂಕಾದ ಕೊಲಂಬೊದಲ್ಲಿ ಐಸಿಸಿಯ ವಾರ್ಷಿಕ ಸಮ್ಮೇಳನ ನಡೆಯುವ ಮುನ್ನವೇ ಸಂಸ್ಥೆಯದಿಂದ ಹೊರನಡೆದಿದ್ದಾರೆ.

ವಾರ್ಷಿಕ ಸಮ್ಮೇಳನದಲ್ಲಿ ಟೆಟ್ಲಿ ಮತ್ತು ಫರ್ಲಾಂಗ್ ಭಾಗವಹಿಸಲಿದ್ದು, ಸಮ್ಮೇಳನವು ಇದೇ ಜು.19ರಿಂದ 22ರವರೆಗೆ ನಡೆಯಲಿದೆ ಎಂದು ವರದಿ ಉಲ್ಲೇಖಿಸಿದೆ.

Leave a Reply

Your email address will not be published. Required fields are marked *

error: Content is protected !!