Thursday, 19th September 2024

ಇಂಡೋ-ಪಾಕ್ ಪಂದ್ಯ ಸ್ಥಳಾಂತರ

ದೆಹಲಿ:
ಭಾರತ ಮತ್ತು ಪಾಕಿಸ್ತಾಾನ ನಡುವಿನ ಡೇವಿಸ್ ಕಪ್ ಪಂದ್ಯ ನವೆಂಬರ್ 29 ಮತ್ತು 30ರಂದು ಕಜಕಿಸ್ತಾಾನ್‌ನ ರಾಜಧಾನಿ ನೂರ್ ಸುಲ್ತಾಾನ್ ನಲ್ಲಿ ನಡೆಯಲಿದೆ.

ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾಾನನಿಂದ ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಸುವಂತೆ ಭಾರತ ಕೇಳಿಕೊಂಡಿತ್ತು. ನಿಯಮಗಳಂತೆ ತಟಸ್ಥ ಸ್ಥಳದ ಆಯ್ಕೆೆ ಪಾಕ್ ಕೈಯಲ್ಲಿತ್ತು. ಆದರೆ, ತಟಸ್ಥ ಸ್ಥಳಕ್ಕೆೆ ವರ್ಗಾಯಿಸದನ್ನು ಪಾಕ್ ಖಂಡಿಸಿತ್ತು. ಬಳಿಕ ಅಂತಾರಾಷ್ಟ್ರೀಯ ಟೆನಿಸ್ ಒಕ್ಕೂಟ (ಐಟಿಎಫ್) ಪಂದ್ಯವನ್ನು ನೂರ್ ಸುಲ್ತಾಾನ್‌ನಲ್ಲಿ ನಡೆಸಲು ಅಧಿಕೃತ ಪ್ರಕಟಣೆ ನೀಡಿದೆ.

ಪಾಕಿಸ್ತಾಾನದಲ್ಲಿ ನಡೆಯುತ್ತಿಿರುವ ಪಂದ್ಯದ ಬಗ್ಗೆೆ ಭಾರತೀಯ ಟೆನಿಸ್ ಆಟಗಾರರು ಭದ್ರತಾ ಕಳವಳ ವ್ಯಕ್ತಪಡಿಸಿದ್ದರು. ನಂತರ ಐಟಿಎಫ್‌ನ ಸ್ವತಂತ್ರ ಸಮಿತಿಯು ನವೆಂಬರ್ 4 ರಂದು ಡೇವಿಸ್ ಕಪ್ ಸಮಿತಿಯ ನಿರ್ಧಾರವನ್ನು ತಟಸ್ಥ ಸ್ಥಳದಲ್ಲಿ ನಡೆಸುವ ನಿರ್ಧಾರವನ್ನು ಬೆಂಬಲಿಸಿತ್ತು.

ಪಾಕಿಸ್ತಾಾನ ಟೆನಿಸ್ ಅಸೋಸಿಯೇಷನ್ ಐಟಿಎಫ್ ನಿರ್ಧಾರ ವಿರೋಧಿಸಿ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ತಟಸ್ಥ ಸ್ಥಳವಾಗಿ ಆಯ್ಕೆೆಯಾದ ನೂರ್ ಸುಲ್ತಾಾನ್‌ನಲ್ಲಿ ಡೇವಿಸ್ ಕಪ್ ಪಂದ್ಯ ನಡೆಸಲು ಐಟಿಎಫ್ ನಿರ್ಧರಿಸಿದೆ ಎಂದು ಅಖಿಲ ಭಾರತ ಟೆನಿಸ್ ಒಕ್ಕೂಟ (ಎಐಟಿಎ) ಧೃಡಪಡಿಸಿದೆ. ಭಾರತ ಮತ್ತು ಪಾಕಿಸ್ತಾಾನ ನಡುವಿನ ಮೊದಲ ಡೇವಿಸ್ ಕಪ್ ಪಂದ್ಯ ಸೆಪ್ಟೆೆಂಬರ್‌ನಲ್ಲಿ ನಡೆಯಬೇಕಿತ್ತು. ಆದರೆ, ಭಾರತೀಯ ಒಕ್ಕೂಟದ ಮನವಿಯ ಮೇರೆಗೆ ನವೆಂಬರ್ 29-30ರಂದು ಪಂದ್ಯ ನಡೆಸಲು ನಿರ್ಧರಿಸಲಾಯಿತು.