Friday, 20th September 2024

ಐಎಸ್‌ಎಲ್: ಎಟಿಕೆ ಮೋಹನ್ ಬಗಾನ್ – ಹೈದರಾಬಾದ್ ಎಫ್‌ಸಿ ಪಂದ್ಯ ಡ್ರಾ

ಫಟೋರ್ಡ: ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ನಲ್ಲಿ ಎಟಿಕೆ ಮೋಹನ್ ಬಗಾನ್ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳ ನಡುವೆ ಶುಕ್ರವಾರ ನಡೆದಿರುವ 24ನೇ ಪಂದ್ಯವು 1-1 ಗೋಲುಗಳ ಅಂತರದಿಂದ ಡ್ರಾನಲ್ಲಿ ಅಂತ್ಯವಾಗಿದೆ.

ಫಟೋಡರ್‌ ಸ್ಟೇಡಿಯಂನಲ್ಲಿ 54ನೇ ನಿಮಿಷದಲ್ಲಿ ಗೋಲು ಗಳಿಸಿದ ಮನ್‌ವೀರ್ ಸಿಂಗ್ ಅವರು ಮೋಹನ್ ಬಗಾನ್‌ಗೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಆದರೆ ಈ ಮುನ್ನಡೆ ಹೆಚ್ಚು ಹೊತ್ತು ಉಳಿಯಲಿಲ್ಲ.

65ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿದ ಜೋ ವಿಕ್ಟರ್ ಹೈದರಾಬಾದ್ ತಂಡ 1-1ರಿಂದ ಸಮಬಲ ಸಾಧಿಸಲು ನೆರವಾದರು.