Thursday, 19th September 2024

ಚೆನ್ನೈಯಿನ್ ಎಫ್‌ಸಿ ವಿರುದ್ಧ ಮುಂಬೈ ಸಿಟಿಗೆ ಜಯ

ಬಂಬೊಲಿಮ್: ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್‌ಸಿ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ನಲ್ಲಿ ತನ್ನ ಕನಸಿನ ಓಟ ಮುಂದುವರಿಸಿದ್ದು, ಬುಧವಾರದ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ ಸತತ ನಾಲ್ಕನೇ ಜಯ ದಾಖಲಿಸಿತು.

ಮುಂಬೈ ಪರ ಹೆರ್ನಾನ್ ಸಂಟಾನಾ(45+4) ಹಾಗೂ ಆಯಡಮ್ ಫಾಂಡ್ರೆ(75ನೇ ನಿ.)ತಲಾ ಒಂದು ಗೋಲು ಗಳಿಸಿದರೆ, ಚೆನ್ನೈ ಯಿನ್ ಪರ ಜಾಕಬ್ ಸಿಲ್ವೆಸ್ಟರ್ 40ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.

ಮುಂಬೈ ಸಿಟಿ ಎಫ್‌ಸಿ ಇದೀಗ ಎರಡನೇ ಸ್ಥಾನದಲ್ಲಿರುವ ನಾರ್ಥ್ ಈಸ್ಟ್ ಯುನೈಟೆಡ್ ಎಫ್ ಸಿ ವಿರುದ್ದ 3 ಅಂಕ ಮುನ್ನಡೆ ಯಲ್ಲಿದೆ.