Friday, 2nd June 2023

ಆಸ್ಟ್ರೇಲಿಯಾದ ಕೀಪರ್ ಜೋಶ್ ಇಂಗ್ಲಿಸ್’ಗೆ ಗಾಯ

ಮೆಲ್ಬರ್ನ್: ದುಷ್ಮಂತ ಚಮೀರ ಮತ್ತು ರೀಸ್ ಟಾಪ್ಲಿ ಬಳಿಕ ಇದೀಗ ಆತಿಥೇಯ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ ಗಾಯಗೊಂಡಿದ್ದಾರೆ.

ಆಸ್ಟ್ರೇಲಿಯಾದ ಜೋಶ್ ಇಂಗ್ಲಿಸ್ ಗಾಲ್ಫ್ ಕೋರ್ಸ್‌ನಲ್ಲಿ ಗಾಯಗೊಂಡಿದ್ದಾರೆ. ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿರುವ 27 ವರ್ಷದ ಇಂಗ್ಲೀಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂಗ್ಲಿಸ್ ಈಗ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಹಾಲಿ ವಿಶ್ವ ಚಾಂಪಿಯನ್‌ ಆಸೀಸ್ ಶೀಘ್ರದಲ್ಲೇ ಬದಲಿ ಆಟಗಾರ ನನ್ನು ಹೆಸರಿಸಲಿದೆ.

ವೇಗಿಗಳಾದ ರೀಸ್‌ ಟಾಪ್ಲಿ ಮತ್ತು ದುಷ್ಮಂತ ಚಮೀರ ಗಾಯಾಳಾಗಿ ಕೂಟದಿಂದ ಹೊರ ಬಿದ್ದಿದ್ದಾರೆ. ರೀಸ್‌ ಟಾಪ್ಲಿ ಬ್ರಿಸ್ಬೇನ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಎಡಗಾಲಿನ ಪಾದದ ನೋವಿಗೆ ಸಿಲುಕಿದ್ದರು. ಇವರ ಸ್ಥಾನಕ್ಕೆ ಟೈಮಲ್‌ ಮಿಲ್ಸ್‌ ಅವರನ್ನು ಸೇರಿಸಿ ಕೊಳ್ಳಲಾಗಿದೆ. ದುಷ್ಮಂತ ಚಮೀರ ಅರ್ಹತಾ ಪಂದ್ಯದ ಕೊನೆಯಲ್ಲಿ ಗಾಯಾಳಾಗಿ ಮೈದಾನದಿಂದ ಹೊರನಡೆದಿದ್ದರು. ಇವರ ಸ್ಥಾನವೀಗ ಕಸುನ್‌ ರಜಿತ ಪಾಲಾಗಿದೆ.

error: Content is protected !!