ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs PBKS: ಐಪಿಎಲ್‌ ಮಳೆ ನಿಯಮ ಹೇಗಿದೆ?, ಪಂದ್ಯದ ಕಟ್-ಆಫ್ ಸಮಯ ಎಷ್ಟು?

IPL 2025: ಲೀಗ್‌ ಪಂದ್ಯಗಳಿಗೆ ಮೀಸಲು ದಿನ ಇರದ ಕಾರಣ ಒಂದೊಮ್ಮೆ ಪ್ರತಿಕೂಲ ಹವಾಮಾನದಿಂದಾಗಿ ಆಟ ಸಾಧ್ಯವಾಗದಿದ್ದರೆ, ಎರಡೂ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಳ್ಳುತ್ತವೆ. ತಲಾ ಒಂದು ಅಂಕ ಪಡೆಯುವ ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ಅಂಕಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೇರಲಿದೆ.

ಐಪಿಎಲ್‌ ಮಳೆ ನಿಯಮ ಹೇಗಿದೆ?, ರದ್ದಾದರೆ ಯಾರಿಗೆ ಲಾಭ?

Profile Abhilash BC Apr 18, 2025 8:33 PM

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB vs PBKS) ಮತ್ತು ಪಂಜಾಬ್‌ ಕಿಂಗ್ಸ್‌ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು ಪಂದ್ಯ ನಡೆಯುವುದೇ ಅನುಮಾನ ಎನ್ನುವಂತಿದೆ. ಸದ್ಯ ಪಂದ್ಯ ನಡೆಯುವ ಬೆಂಗಳೂರಿನಲ್ಲಿ ಮಳೆಯಾಗುತ್ತಲೇ ಇದೆ. ಮಳೆ ನಿಲ್ಲುವ ಯಾವುದೇ ಸೂಚನೆ ಕಂಡುಬರುತ್ತಿಲ್ಲ. ಐಪಿಎಲ್‌(ipl rain rules) ಮಳೆ ನಿಯಮದ ಪ್ರಕಾರ ಪಂದ್ಯಕ್ಕೆ ಹೆಚ್ಚುವರಿಯಾಗಿ 60 ನಿಮಿಷಗಳ ಸಮಯವನ್ನು ನೀಡಲಾಗುತ್ತದೆ. ಆದ್ದರಿಂದ, ಐದು ಓವರ್‌ಗಳ ಪಂದ್ಯಕ್ಕೆ ಕಟ್-ಆಫ್ ಸಮಯವು ಭಾರತೀಯ ಕಾಲಮಾನ ಸುಮಾರು ರಾತ್ರಿ 10:50 ಆಗಿದೆ. ಈ ಪಂದ್ಯದ ಕಟ್-ಆಫ್ ಸಮಯವನ್ನು ಭಾರತೀಯ ಕಾಲಮಾನ ರಾತ್ರಿ 10:54 ಕ್ಕೆ ನಿರ್ಧರಿಸಲಾಗುತ್ತದೆ.

ಲೀಗ್‌ ಪಂದ್ಯಗಳಿಗೆ ಮೀಸಲು ದಿನ ಇರದ ಕಾರಣ ಒಂದೊಮ್ಮೆ ಪ್ರತಿಕೂಲ ಹವಾಮಾನದಿಂದಾಗಿ ಆಟ ಸಾಧ್ಯವಾಗದಿದ್ದರೆ, ಎರಡೂ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಳ್ಳುತ್ತವೆ. ಟಾಸ್‌ ಪ್ರಕ್ರಿಯೆಗೂ ಮುನ್ನವೇ ಮಳೆ ಅಬ್ಬರ ಶುರುವಾಗಿತ್ತು. ಈಗಲೂ ತುಂತುರು ಮಳೆಯಾಗುತ್ತಿದ್ದು ಮುಂದಿನ ಕೆಲ ಗಂಟೆಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆ ಕಂಡುಬಂದಿದೆ.



ಪಂದ್ಯ ರದ್ದಾದರೆ ತಲಾ ಒಂದು ಅಂಕ ಪಡೆಯುವ ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ಅಂಕಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೇರಲಿದೆ. ಉಭಯ ತಂಡಗಳು ಸದ್ಯ 8 ಅಂಕ ಹೊಂದಿದೆ.



ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಇದುವರೆಗಿನ ಐಪಿಎಲ್‌ ಇತಿಹಾಸದಲ್ಲಿ ಒಟ್ಟು 33 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಪಂಜಾಬ್‌ 17 ಪಂದ್ಯ ಗೆದ್ದಿದ್ದರೆ, ಆರ್‌ಸಿಬಿ 16 ಪಂದ್ಯಗಳಲ್ಲಿ ಜಯಿಸಿದೆ. ಕಳೆದ ಎರಡು ವರ್ಷಗಳಿಂದ ಪಂಜಾಬ್‌ ಆರ್‌ಸಿಬಿ ವಿರುದ್ಧ ಪಂದ್ಯ ಗೆದ್ದಿಲ್ಲ. 2022ರಲ್ಲಿ ಕೊನೆಯ ಬಾರಿಗೆ ಗೆಲುವು ಸಾಧಿಸಿತ್ತು.

ಆರ್‌ಸಿಬಿ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡುವುದು ಅನುಮಾನ. ಕಳೆದ ಪಂದ್ಯದಲ್ಲಿ ಆಡಿದ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್ ಈ ಪಂದ್ಯದಲ್ಲಿ ಕಣಕ್ಕಿಳಿಯಬಹುದು.