Monday, 16th September 2024

ಗೇಲ್ ಆಟ ವ್ಯರ್ಥ, ರಾಜಸ್ಥಾನದ ಪ್ಲೇಆಫ್ ಆಸೆ ಜೀವಂತ

ಅಬುದಾಬಿ: ಮಹತ್ವದ ಪಂದ್ಯದಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ ಮೇಲಕ್ಕೇರಿದೆ.

ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ಕ್ರಿಸ್ ಗೇಲ್ ಅವರ 99ರನ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 185/4 ರನ್ ಗುರಿ ನೀಡಿತು. ರಾಜಸ್ಥಾನ ತಂಡವು ಸಂಘಟಿತ ಆಟ ಪ್ರದರ್ಶಿಸಿ 17.3 ಓವರ್ ಗಳಲ್ಲಿ 186/3 ರನ್ ಗಳಿಸಿ 7 ವಿಕೆಟ್ ಗಳಿಂದ ಜಯ ಗಳಿಸಿತು.

ಪಂಜಾಬ್ ವಿರುದ್ಧ ರಾಜಸ್ಥಾನ ಜಯ ದಾಖಲಿಸಿದ ನಂತರ ಸ್ಮಿತ್ ಪಡೆ 13 ಪಂದ್ಯಗಳಿಂದ 6 ಗೆಲುವು ದಾಖಲಿಸಿ 12 ಅಂಕ ಗಳಿಸಿ 5ನೇ ಸ್ಥಾನಕ್ಕೇರಿದ್ದು, ಇನ್ನೂ ಪ್ಲೇ ಆಫ್ ಗೆ ಹೋಗುವ ಆಸೆ ಜೀವಂತ ಇರಿಸಿಕೊಂಡಿದೆ. ಈ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸತತ ಐದು ಗೆಲುವಿನ ನಾಗಾಲೋಟಕ್ಕೆ ರಾಜಸ್ಥಾನ ರಾಯಲ್ಸ್ ತಂಡ ಬ್ರೇಕ್ ಹಾಕಿತು.

ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ (99 ರನ್) ಅಬ್ಬರದ ಬ್ಯಾಟಿಂಗ್ ನಡುವೆಯೂ ಕೆಎಲ್ ರಾಹುಲ್ ಬಳಗ ಐಪಿಎಲ್-13ರ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 7 ವಿಕೆಟ್‌ಗಳಿಂದ ಶರಣಾಯಿತು. ಈ ಗೆಲುವಿನೊಂದಿಗೆ ರಾಯಲ್ಸ್ ತಂಡ ಪ್ಲೇಆಫ್ ಹೋರಾಟ ಉಳಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್, ಗೇಲ್ ಅಬ್ಬರದ ಜತೆಗೆ ನಾಯಕ ಕೆಎಲ್ ರಾಹುಲ್ (46) ಬಿರುಸಿನ ಬ್ಯಾಟಿಂಗ್ ಲವಾಗಿ 4 ವಿಕೆಟ್‌ಗೆ 185 ರನ್ ಪೇರಿಸಿತು. ಪ್ರತಿಯಾಗಿ ಬೆನ್ ಸ್ಟೋಕ್ಸ್ (50 ರನ್, 26 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಸಂಜು ಸ್ಯಾಮ್ಸನ್ (48 ರನ್, 25 ಎಸೆತ, 4 ಬೌಂಡರಿ, 3 ಸಿಕ್ಸರ್) ಅಬ್ಬರದ ನೆರವಿನಿಂದ ರಾಯಲ್ 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ ಜಯದ ನಗೆ ಬೀರಿತು.

Leave a Reply

Your email address will not be published. Required fields are marked *