Friday, 20th September 2024

ಶ್ರೀಕಾಂತ್, ಸಮೀರ್ ಶುಭಾರಂಭ

ಗ್ವಾಾಂಗ್ಜು:
ಇಲ್ಲಿ ನಡೆಯುತ್ತಿಿರುವ ಕೊರಿಯಾ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯ ಪುರುಷರ ಸಿಂಗಲ್‌ಸ್‌ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಎರಡನೇ ಸುತ್ತಿಿಗೆ ಪ್ರವೇಶ ಮಾಡಿದ್ದಾಾರೆ. ಆದರೆ, ಸೌರಭ್ ವರ್ಮಾ ಮೊದಲನೇ ಸುತ್ತಿಿನಲ್ಲೇ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾಾರೆ.
ಬುಧವಾರ ಕೇವಲ 37 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್‌ಸ್‌ ಆರಂಭಿಕ ಸುತ್ತಿಿನಲ್ಲಿ ಆರನೇ ಶ್ರೇಯಾಂಕಿತ ಕಿಡಂಬಿ ಶ್ರೀಕಾಂತ್ ಅವರು ಹಾಂಕಾಂಗ್ ನ ವಾಂಗ್ ವಿಂಗ್ ಕೀ ವಿನ್ಸೆೆಂಟ್ ವಿರುದ್ಧ 21-18, 21-17 ಅಂತರದಲ್ಲಿ ಜಯ ಸಾಧಿಸಿದ್ದಾಾರೆ. ಎರಡನೇ ಸುತ್ತಿಿನ ಪಂದ್ಯದಲ್ಲಿ ಹೈದರಾಬಾದ್ ಆಟಗಾರ ಜಪಾನ್‌ನ ಕಂಟಾ ಟಿಸುನೆಯಮಾ ವಿರುದ್ಧ ಸೆಣಸಲಿದ್ದಾಾರೆ.
ಪುರುಷರ ಮತ್ತೊೊಂದು ಸಿಂಗಲ್‌ಸ್‌ ಹಣಾಹಣಿಯಲ್ಲಿ ಭಾರತದ ಮತ್ತೊೊರ್ವ ಆಟಗಾರ ಸಮೀರ್ ವರ್ಮಾ ಅವರು ಜಪಾನ್‌ನ ಕಝುಮಸ್ ಸಾಕಾಯ್ ವಿರುದ್ಧ 11-8 ಮುನ್ನಡೆ ಗಳಿಸಿದ್ದರು. ಈ ವೇಳೆ ಜಪಾನ್ ಆಟಗಾರ ಗಾಯದಿಂದಾಗಿ ಪಂದ್ಯದಿಂದ ದೂರ ಸರಿದರು. ಇದರ ಲಾಭ ಪಡೆದ ಸಮೀರ್ ವರ್ಮಾ ಎರಡನೇ ಸುತ್ತಿಿಗೆ ಪ್ರವೇಶ ಮಾಡಿದರು.
ಆದರೆ, ಮತ್ತೊೊಂದು ಪುರುಷರ ಸಿಂಗಲ್‌ಸ್‌ ಪಂದ್ಯದಲ್ಲಿ ಭಾರತದ ಮತ್ತೊೊರ್ವ ಆಟಗಾರ ಸೌರಭ್ ವರ್ಮಾ ಅವರು, ಕಿಮ್ ಡೊಂಗುನ್ ವಿರುದ್ಧ 21-13, 12-21, 13-21 ಅಂತರದಲ್ಲಿ ಮಣಿದರು. ಮೊದಲ ಸುತ್ತಿಿನಲ್ಲಿ ಗೆದ್ದಿರುವ ಸಮೀರ್ ವರ್ಮಾ ಅವರು ಎರಡನೇ ಸುತ್ತಿಿನಲ್ಲಿ ಡೊಂಗುನ್ ವಿರುದ್ಧ ಸೆಣಸಲಿದ್ದಾಾರೆ.
==