Thursday, 19th September 2024

ಅಮಾನತು ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಿ: ವಿಚಾರಣೆ 22ಕ್ಕೆ ಮುಂದೂಡಿಕೆ

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ ಅನ್ನು ಅಮಾನತು ಮಾಡಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಮಾನತು ತೆರವಿಗೆ ಅಗತ್ಯಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ಆಗಸ್ಟ್ 22ಕ್ಕೆ ಮುಂದೂಡಿದೆ.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಮನವಿಯ ಆಧಾರದ ಮೇಲೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ನ ಅಂತರ ರಾಷ್ಟ್ರೀಯ ಫುಟ್‌ಬಾಲ್ ಆಡಳಿತ ಮಂಡಳಿ ಫಿಫಾ ಅಮಾನತುಗೊಳಿಸುವುದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್, ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಮೇಲೆ ಅಂತರರಾಷ್ಟ್ರೀಯ ಫುಟ್‌ಬಾಲ್‌ ಫೆಡರೇಷನ್‌ (ಫಿಫಾ) ವಿಧಿಸಿರುವ ಅಮಾನತು ತೆರವಿಗೆ ಬೇಕಾದ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಮಹಿಳಾ ಅಂಡರ್-17 ವಿಶ್ವಕಪ್ ಆಯೋಜಿಸಲು ಹಾಗೂ ಫಿಫಾ ಹೇರಿರುವ ಅಮಾನತು ತೆರವುಗೊಳಿಸಲು ಸಕ್ರಿಯ ಪಾತ್ರ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಆಡಳಿತದಲ್ಲಿ ಅನ್ಯರ ಅತಿಯಾದ ಹಸ್ತಕ್ಷೇ‍ಪದ ಕಾರಣ ಎಐಎಫ್‌ಎಫ್‌ ಅನ್ನು ಫಿಫಾ ಮಂಗಳವಾರ ಅಮಾನತುಗೊಳಿಸಿತ್ತು.

85 ವರ್ಷಗಳ ಅಸ್ತಿತ್ವದಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅನ್ನು FIFA ನಿಷೇಧಿಸಿರುವುದು ಇದೇ ಮೊದಲು,. ಅಕ್ಟೋ ಬರ್ 11, 2022 ರಂದು ಪ್ರಾರಂಭವಾಗಲಿರುವ FIFA U-17 ಮಹಿಳಾ ವಿಶ್ವಕಪ್‌ನ ಆತಿಥ್ಯ ಹಕ್ಕುಗಳನ್ನು ಭಾರತ ಕಳೆದುಕೊಳ್ಳು ತ್ತದೆ.