Thursday, 19th September 2024

ಪ್ರಶಸ್ತಿಗಾಗಿ ಥೀಮ್-ಸಿಟ್ಸಿಪಸ್ ಕಾದಾಟ

ಲಂಡನ್:
ಸ್ವಿಿಸ್ ದಂತಕತೆ ರೋಜರ್ ಫೆಡರರ್ ಅವರು ಇಲ್ಲಿ ನಡೆಯುತ್ತಿಿರುವ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಹಣಾಹಣಿಯಲ್ಲಿ ಗ್ರೀಕ್ ನ ಸ್ಟಿಿಫನೋಸ್ ಸಿಟ್ಸಿಿಪಸ್ ವಿರುದ್ಧ ಸೋಲು ಅನುಭವಿಸಿದರು. ಆ ಮೂಲಕ ಅವರ ಏಳನೇ ಎಟಿಪಿ ಫೈನಲ್ಸ್ ಗೆಲ್ಲುವ ಕನಸು ಭಗ್ನವಾಯಿತು.
ಶನಿವಾರ ತಡರಾತ್ರಿಿ (ಭಾರತದ ಕಾಲಮಾನ) ನಡೆದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ 21ರ ಪ್ರಾಾಯದ ಗ್ರೀಕ್ ಪ್ರತಿಭಾವಂತ ಆಟಗಾರ ಸಿಟ್ಸಿಿಪಸ್ ಅವರು 6-3, 6-4 ಅಂತರದ ನೇರ ಸೆಟ್‌ಗಳಲ್ಲಿ 20 ಬಾರಿ ಗ್ರ್ಯಾಾನ್ ಸ್ಲ್ಯಾಾಮ್ ವಿಜೇತ ರೋಜರ್ ಫೆಡರರ್ ವಿರುದ್ಧ ಗೆದ್ದು ಫೈನಲ್ ತಲುಪಿದರು.
ಇಂದು ನಡೆಯುವ ಎಟಿಪಿ ಫೈನಲ್ ಪಂದ್ಯದಲ್ಲಿ ಸಿಟ್ಸಿಿಪಸ್ ಅವರು ಡೊಮಿನಿಚ್ ವಿರುದ್ಧ ಸೆಣಸಲಿದ್ದಾರೆ. ಡೊಮಿನಿಚ್ ಥೀಮ್ ಮತ್ತೊೊಂದು ಸೆಮಿಫೈನಲ್ಸ್ ಹಣಾಹಣಿಯಲ್ಲಿ ಅಲೆಕ್ಸಾಾಂಡರ್ ಜ್ವೆೆರೆವ್ ವಿರುದ್ಧ 7-5, 6-3 ಅಂತರದಲ್ಲಿ ಜಯ ಸಾಧಿಸಿದ್ದರು.


ಅಲೆಕ್ಸಾಾಂಡರ್ ಜ್ವೆೆರೆವ್ ಕಳೆದ ವರ್ಷ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ವಿರುದ್ಧ ಗೆದ್ದು ಪ್ರಶಸ್ತಿಿ ಗೆದ್ದಿದ್ದರು. ಆದರೆ, ಶನಿವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಥೀಮ್ ವಿರುದ್ಧ ಗೆಲ್ಲುವಲ್ಲಿ ವಿಫಲರಾದರು. ಮೊದಲನೇ ಸೆಟ್ ನಲ್ಲಿ ಥೀಮ್ ಗೆ ಅಲೆಕ್ಸಾಾಂಡರ್ ಜ್ವೆೆರೆವ್ ಭಾರಿ ಪೈಪೋಟಿ ನೀಡಿದ್ದರು. ಆದರೆ, ಎರಡನೇ ಸೆಟ್ ನಲ್ಲಿ ಮೂರು ಅಂಕಗಳ ಅಂತರದಲ್ಲಿ ಸೋಲು ಅನುಭವಿಸಿದರು.
‘‘ಇದು ನನ್ನ ಪಾಲಿಗೆ ಅತಿ ದೊಡ್ಡ ಕನಸು. ವರ್ಷದಲ್ಲಿ ನಡೆಯುವ ಅತ್ಯಂತ ಶ್ರೇಷ್ಠ ಟೂರ್ನಿ ಇದಾಗಿದೆ. ಇದರಲ್ಲಿ ಆಡಲು ಅವಕಾಶ ಪಡೆದಿದ್ದೇನೆ.’’ ಎಂದು ಡೊಮಿನಿಚ್ ಥೀಮ್ ಪಂದ್ಯದ ಬಳಿಕೆ ತಿಳಿಸಿದರು.
ಸ್ಟೀಫನೋಸ್ ಸಿಟ್ಸಿಿಪಸ್ ಅವರು ರೋರ್ಜ ಫೆಡರರ್ ಗಿಂತ 17 ವರ್ಷ ಕಿರಿಯ ಆಟಗಾರ. ಆದರೆ, ಕಠಿಣ ಹೋರಾಟ ನಡೆಸಿ ಫೆಡರರ್ ಮಣಿಸಿದರು. ಸ್ವಿಿಸ್ ಆಟಗಾರನ ಏಳನೇ ಬಾರಿ ಎಟಿಪಿ ಫೈನಲ್ಸ್ ಗೆಲ್ಲುವ ಕನಸು ಭಗ್ನವಾಯಿತು.
ಇಂದು ನನ್ನ ಬಗ್ಗೆೆ ಹೆಮ್ಮೆೆ ಪಡುತ್ತೇನೆ. ನನ್ನ ಪ್ರದರ್ಶನ ತೃಪ್ತಿಿ ತಂದಿದೆ. ಅಂಗಳದಲ್ಲಿ ನಿಜಕ್ಕೂ ಪಂದ್ಯವನ್ನು ಆಹ್ಲಾಾದಿಸಿದ್ದೇನೆ. ಬ್ರೇಕ್ ಪಾಯಿಂಟ್ ಕಳೆದುಕೊಂಡರೂ ಪುಟಿದೆದ್ದಿದ್ದು ಹೆಚ್ಚು ಖುಷಿ ನೀಡಿದೆ. ಎಂದು ಪಂದ್ಯದ ಬಳಿಕ ಸಿಟ್ಸಿಿಪಸ್ ನುಡಿದರು.
===