Wednesday, 11th December 2024

ಮೂರನೇ ಟಿ20 ಪಂದ್ಯ: ಭಾರತಕ್ಕೆ 106 ರನ್ ಗೆಲುವು

ಜೋಹಾನ್ಸ್‌ಬರ್ಗ್‌: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ-20 ಸರಣಿ 1-1 ರಿಂದ ಸಮಬಲಗೊಂಡಿದೆ. ಎರಡನೇ ಪಂದ್ಯ ದಲ್ಲಿ ಹೀನಾಯವಾಗಿ ಸೋತು ಹಿನ್ನಡೆಯಲ್ಲಿದ್ದ ಭಾರತ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡಿದ್ದು, ನಾಯಕ ಸೂರ್ಯ ಕುಮಾರ್​ ಮತ್ತು ಕುಲದೀಪ್​ ಯಾದವ್​ ಭರ್ಜರಿ ಪ್ರದರ್ಶನದಿಂದ 106 ರನ್​ಗಳ ಗೆಲುವು ದಾಖಲಿಸಿದೆ.

ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್‌ರಾಮ್ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡು ಭಾರತಕ್ಕೆ ಬ್ಯಾಟಿಂಗ್​ಗೆ ಆಹ್ವಾನಿಸಿ ದರು. ಪಂದ್ಯ ಆರಂಭದಲ್ಲಿ ಭಾರತ ಸ್ಪೋಟಕ ಪ್ರದರ್ಶನ ನೀಡಿತ್ತು. ಆರಂಭಿಕ ಜೋಡಿಗಳಾದ ಯಶಸ್ವಿ ಜೈಸ್ವಾಲ್​ ಮತ್ತು ಶುಭ್​ಮನ್​ ಗಿಲ್​ ಕೇವಲ 2.1 ಓವರ್​ನಲ್ಲಿ 29 ರನ್​ಗಳನ್ನು ಚಚ್ಚಿ ದೊಡ್ಡ ಮೊತ್ತ ಕಲೆ ಹಾಕುವ ಮುನ್ಸೂಚನೆ ನೀಡಿದ್ದರು. ಆದರೆ, ಮೂರನೇ ಓವರ್‌ನಲ್ಲಿ ಕೇಶವ್ ಮಹಾರಾಜ್ ಸತತ ಎರಡು ಎಸೆತಗಳಲ್ಲಿ ಶುಭಮನ್ ಗಿಲ್ ಮತ್ತು ತಿಲಕ್ ವರ್ಮಾರ ವಿಕೆಟ್​ ಪಡೆಯುವ ಮೂಲಕ ತಂಡಕ್ಕೆ ಆಘಾತ ನೀಡಿದರು​.

ಎರಡನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್‌ನಲ್ಲೂ ಭಾರತ ಉತ್ತಮ ಆರಂಭ ಪಡೆಯಿತು. ಮೊಹಮ್ಮದ್ ಸಿರಾಜ್ ಮೊದಲ ಓವರ್ ಮೇಡನ್ ಮಾಡಿದರೆ, ಎರಡನೇ ಓವರ್​ನಲ್ಲಿ ವೇಗಿ ಮುಖೇಶ್ ಕುಮಾರ್, ಮ್ಯಾಥ್ಯೂ ಬ್ರಿಟ್ಜ್​ ವಿಕೆಟ್​ ಉರುಳಿಸಿದರು. 10 ಓವರ್‌ ವೇಳೆಗೆ ದಕ್ಷಿಣ ಆಫ್ರಿಕಾ 75 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿತ್ತು. ಆ ಬಳಿಕ ಕುಲದೀಪ್ ಹಾಗೂ ಜಡೇಜಾ ಬೌಲಿಂಗ್​ ದಾಳಿಗೆ ಉಳಿದ 5 ವಿಕೆಟ್‌ಗಳು 20 ರನ್‌ಗಳ ಅಂತರದಲ್ಲಿ ಪತನಗೊಂಡವು.

ನಾಯಕ ಐಡನ್ ಮಾರ್ಕ್ರಾಮ್ (25) ಮತ್ತು ಡೇವಿಡ್ ಮಿಲ್ಲರ್ (35) ಹೊರತು ಪಡಿಸಿ ಉಳಿದ ಆಟಗಾರರು ಎರಡಂಕಿಗಳಿಸಲು ಸಾಧ್ಯವಾಗಲಿಲ್ಲ.