Saturday, 27th July 2024

ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗೆ ವನಿಂದು ಹಸರಂಗ ವಿದಾಯ

ಕೊಲಂಬೋ: ಶ್ರೀಲಂಕಾದ ಆಲ್ರೌಂಡರ್ ವನಿಂದು ಹಸರಂಗ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ.

ಹಸರಂಗ ಕ್ರಿಕೆಟಿನ ಸುದೀರ್ಘ ಸ್ವರೂಪದಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

ಲೆಗ್-ಬ್ರೇಕ್ ಬೌಲರ್ 2020ರ ಡಿಸೆಂಬರಿನಲ್ಲಿ ಸೆಂಚೂರಿಯ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು. ಅವರ ಕೊನೆಯ ಪಂದ್ಯವು ಏಪ್ರಿಲ್ 2021ರಲ್ಲಿ ಪಲ್ಲೆಕೆಲೆಯಲ್ಲಿ ನಡೆಯಿತು. ವೈಟ್-ಬಾಲ್ ಕ್ರಿಕೆಟ್ನಲ್ಲಿ, ವಿಶೇಷ ವಾಗಿ ಟಿ20 ಐಗಳಲ್ಲಿ, ಹಸರಂಗ ವಿಶ್ವದ ಅತ್ಯುತ್ತಮ ಸ್ಪಿನ್ ಬೌಲರುಗಳಲ್ಲಿ ಒಬ್ಬರು.

ಏಷ್ಯಾ ಕಪ್ 2022ರಲ್ಲಿ ಶ್ರೀಲಂಕಾದ ಅದ್ಭುತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 6 ಪಂದ್ಯಗಳಲ್ಲಿ 9 ವಿಕೆಟು ಗಳನ್ನು ಪಡೆದರು. ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ (11) ನಂತರ ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದವರೆಂದರೆ ಹಸರಂಗ ಆಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!