Saturday, 27th July 2024

ಏಕದಿನ ಸರಣಿ: ಮೊಹಮ್ಮದ್​ ಸಿರಾಜ್’ಗೆ ವಿಶ್ರಾಂತಿ

ಬಾರ್ಬಡಾಸ್​: ವಿಂಡೀಸ್​ ವಿರುದ್ಧ ವೇಗಿ ಮೊಹಮ್ಮದ್​ ಸಿರಾಜ್ ಅವರು ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಸಿರಾಜ್​ ಅವರ ಕೆಲಸದ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಸಿಸಿಐ ಸಿರಾಜ್​ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಿದ್ದು ಅವರು ತವರಿಗೆ ಮರಳಲಿದ್ದಾರೆ.

ಮೊಹಮ್ಮದ್​ ಶಮಿ ಅವರ ಅಲಭ್ಯದಿಂದ ವೇಗದ ಬೌಲಿಂಗ್‌ ವಿಭಾಗದಲ್ಲಿ ಅನುಭವಿ ಗಳಿಲ್ಲದ ಕಾರಣ ಸಿರಾಜ್‌ ಅವರು ಭಾರತ ತಂಡದ ಬೌಲಿಂಗ್‌ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಬಿಸಿಸಿಐ ದಿಢೀರ್​ ಆಗಿ ಸಿರಾಜ್​ಗೆ ವಿಶ್ರಾಂತಿ ನೀಡಲು ನಿರ್ಧ ರಿಸಿದೆ.

ಒಂದೊಮ್ಮೆ ಸಿರಾಜ್ ಅವರ ಅನುಪಸ್ಥಿತಿಯಲ್ಲಿ ಉಮ್ರಾನ್‌ ಮಲಿಕ್‌, ಜಯ್​ದೇವ್​ ಉನಾ ದ್ಕತ್​ ಮತ್ತು ಮುಖೇಶ್​ ಕುಮಾರ್​ ಅವರು ಭಾರತದ ಬೌಲಿಂಗ್​ ನಿರ್ವಹಿಸಲಿದ್ದಾರೆ.

ಸಿರಾಜ್​ ಅವರು ಕಳೆದ ಒಂದು ವರ್ಷದಿಂದ ಸತತವಾಗಿ ಕ್ರಿಕೆಟ್​ ಆಡುತ್ತಲೇ ಬರುತ್ತಿದ್ದಾರೆ. ಏಷ್ಯಾಕಪ್​ ಮತ್ತು ಏಕದಿನ ವಿಶ್ವಕಪ್​ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಎಲ್ಲ ದೃಷ್ಟಿಯಿಂದ ಸಿರಾಜ್​ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಲು ಮುಂದಾಗಿದೆ. ಹೀಗಾಗಿ, ಸಿರಾಜ್​ ಅವರು ತವರಿಗೆ ಮರಳಲಿದ್ದಾರೆ ಎಂದು ವರದಿಯಾಗಿದೆ.

ಆಸ್ಟ್ರೇಲಿಯ ವಿರುದ್ಧ ಗೋಲ್ಡನ್‌ ಡಕ್‌ ಹ್ಯಾಟ್ರಿಕ್‌ ಸಂಕಟ ಅನುಭವಿಸಿದ್ದ ಸೂರ್ಯಕುಮಾರ್​ ಯಾದವ್ ಈ ಸರಣಿಯಲ್ಲಿಯೂ ವೈಫಲ್ಯ ಕಂಡರೆ ಏಕದಿನ ವಿಶ್ವಕಪ್​ಗೆ ಅವರ ಆಯ್ಕೆ ಕಷ್ಟಸಾಧ್ಯ. ಗಾಯಾಳು ಶ್ರೇಯಸ್‌ ಅಯ್ಯರ್‌ ಅವರು, 4ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಬುದು. ಹೀಗಾಗಿ ವಿಂಡೀಸ್​ ವಿರುದ್ಧದ ಸರಣಿ ಸೂರ್ಯ ಪಾಲಿಗೆ ಅಗ್ನಿಪರೀಕ್ಷೆ.

364 ರನ್​ ಇಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಇಂಗ್ಲೆಂಡ್​ ತಂಡ ಈ ಮೊತ್ತವನ್ನು ಬಾರಿಸಿತ್ತು. ಇಲ್ಲಿನ ಎವರೇಜ್​ ರನ್​ ಗಳಿಕೆ 229. ಟಾಸ್​ ಗೆದ್ದ ತಂಡ ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

Leave a Reply

Your email address will not be published. Required fields are marked *

error: Content is protected !!